ಬಳ್ಳಾರಿ: 'ಅಂಬೇಡ್ಕರ್ ಸಂವಿಧಾನ ರಚಿಸಿಲ್ಲ ಇದು ತಪ್ಪು ಸಂದೇಶ'

ಲೋಕದರ್ಶನ ವರದಿ

ಬಳ್ಳಾರಿ 17: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವಮಾನಿಸಿದ ಶಿಕ್ಷಣ ಸಚಿವ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ  ಉಮಾಶಂಕರ್ ಅವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಕನರ್ಾಟಕ ರಾಜ್ಯ ದಲಿತ ಸಂಘರ್ಷ (ಡಿ.ಜಿ.ಸಾಗರ್ ಬಣ) ಸಮಿತಿ ಜಿಲ್ಲಾ ಪದಾಧಿಕಾರಿಗಳು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. 

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ು ಸಂವಿಧಾನವನ್ನು ಬರೆದಿಲ್ಲ, ರಚಿಸಿಲ್ಲ ಎಂದು ಶಿಕ್ಷಣ ಸಚಿವರು ಹಾಗೂ ಇಲಾಖೆ ಪ್ರಧಾನ ಕಾರ್ಯದಶರ್ಿಗಳು ಪುಸ್ತಕಗಳನ್ನು ಮುದ್ರಣ ಮಾಡಿ, ಮಕ್ಕಳಿಗೆ ಹಾಗೂ ರಾಜ್ಯದ ಜನರಿಗೆ ತಪ್ಪು ಸಂದೇಶ ರವಾನಿಸಲು ಮುಂದಾಗಿದ್ದಾರೆ. ಇದು ತೀರಾ ಅಕ್ಷಮ್ಯ ಅಪರಾಧ. ಈ ಹಿಂದಿನಿಂದಲೂ ಬಿಜೆಪಿಯವರು ಅಂಬೇಡ್ಕರ್ ಬರೆದ ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡುತ್ತಾ ಬಂದಿದ್ದಾರೆ. ಇದೀಗ ಪುಸ್ತಕಗಳನ್ನು ಮುದ್ರಣ ಮಾಡಿ ವಿತರಿಸುವ ಮೂಲಕ ಮಕ್ಕಳಲ್ಲೂ ಸಂವಿಧಾನ ಕುರಿತು ವಿಷಬೀಜ ಬಿತ್ತಲು ಮುಂದಾಗಿದ್ದಾರೆ. ಬಿಜೆಪಿ ಸಕರ್ಾರದ ಸಚಿವರು ಹಾಗೂ ಇಲಾಖೆ ಪ್ರಧಾನ ಕಾರ್ಯದಶರ್ಿಗಳು ಈ ಕುರಿತು ರಾಜ್ಯದ ಎಲ್ಲ ಜಿಲ್ಲೆಗಳ ಡಿಡಿಪಿಐ ಅವರ ಮೂಲಕ, ಬಿಇಒ ಹಾಗೂ ಶಾಲೆ ಮುಖ್ಯಗುರುಗಳ ಮೂಲಕ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸುವಂತೆ ಆದೇಶಿಸಿದ್ದಾರೆ. 

ಈ ಕುರಿತು ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮಾಡಿದ ತಪ್ಪನ್ನು ತಮ್ಮ ಮೇಲೆ ಹಾಕಿಕೊಳ್ಳದೇ ಮುದ್ರಣಗೊಳಿಸಿದವರ ಮೇಲೆ ಹಾಕಲು ಹೊರಟಿದ್ದಾರೆ. ಇಂತಹ ಅಪಾಯಕಾರಿ ತೀರ್ಮಾನಗಳನ್ನು ತೆಗೆದುಕೊಂಡ ಯಾರೇ ವ್ಯಕ್ತಿಗಳಿರಲಿ, ಸರ್ಕಾರವಿರಲಿ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. 

ಇದಕ್ಕೂ ಮುನ್ನ ನಗರದ ಹಳೆ ಬಸ್ನಿಲ್ದಾಣದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಗಡಗಿ ಚನ್ನಪ್ಪ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತಲುಪಿತು. 

ಈ ವೇಳೆ ಪ್ರತಿಭಟನಾಕಾರರು ವಿವಿಧ ಘೋಷಣೆಗಳನ್ನು ಕೂಗಿ ಸಕರ್ಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಜಿಪಂ ಸದಸ್ಯ ಎ.ಮಾನಯ್ಯ, ಮುಖಂಡರಾದ ಡಿ.ವಿಜಯಕುಮಾರ್, ಕರಾಟೆ ಶಿಕ್ಷಕ ಕಟ್ಟೆಸ್ವಾಮಿ, ಜಿಲ್ಲಾ ಸಂಚಾಲಕ ಎಚ್.ಸಿದ್ದೇಶ್, ಬೆಳಗಲ್ಲು ಹುಲುಗಪ್ಪ, ರಾಜೇಶ್, ಭೀಮಾಶಂಕರ್, ಕೊಳಗಲ್ಲ ಮಲ್ಲಯ್ಯ, ಅರುಣಾಚಲಂ, ಗೋವರ್ಧನ, ಕೆ.ಕೆ.ಹಾಳ್, ವೆಲ್ಡರ್ ಗೋವಿಂದ ಸೇರಿದಂತೆ ನೂರಾರು ಜನರು ಇದ್ದರು.