ಬೆಳಗಾವಿ : ತಮ್ಮ ಹಲವು ಬೇಡಿಕೆಗಳನ್ನ ಈಡೇರಿಸಬೇಕು ಹಾಗೂ ಕೇಂದ್ರ ಸಕರ್ಾರ ಹೊಸ ನೀತಿಗಳನ್ನ ಕೈಬಿಡಬೇಕೆಂದು ಒತ್ತಾಯಿಸಿ ರಾಷ್ಟ್ರವ್ಯಾಪಿ ನಾಲ್ಕು ದಿನ ಬ್ಯಾಂಕ್ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ನಗರದಲ್ಲಿ ಬ್ಯಾಂಕ್ ನೌಕರರು ಬೆಂಬಲ ಸೂಚಿಸುವ ಮೂಲಕ ಪ್ರತಿಭಟನೆ ನಡೆಸಿದರು.
ಗುರುವಾರದಂದು ಬ್ಯಾಂಕ್ ನೌಕರರು ರಾಷ್ಟ್ರ ವ್ಯಾಪಿ ಬ್ಯಾಂಕ್ ಬಂದ್ ಕರೆ ನೀಡಿದ ಹಿನ್ನೆಯಲ್ಲಿ ನಗರದಲ್ಲಿ ಬ್ಯಾಂಕ್ ನೌಕರರಿಂದ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಯಿತು. ಈ ಪ್ರತಿಭಟನಾ ರ್ಯಾಲಿಯೂ ಧರ್ಮವೀರ ಸಂಭಾಜೀ ವೃತ್ತದಿಂದ ಆರಂಭಗೊಂಡು, ಕೀಲರ್ೊಸ್ಕರ್ ರಸ್ತೆ, ರಾಮದೇವ ಗಲ್ಲಿ, ಖಡೇಬಝಾರ್, ಗಣಪತ ಗಲ್ಲಿ, ಮಾರುತಿ ಗಲ್ಲಿ, ಸಿಂಡಿಕೇಟ್ ಬ್ಯಾಂಕಿಗೆ ತಲುಪಿ ಕೊನೆಗೊಂಡಿತು. ಬ್ಯಾಂಕ್ ನೌಕರರು ಕೇಂದ್ರ ಸಕರ್ಾರದ ವಿರುದ್ಧ ದಿಕ್ಕಾರದ ಘೋಷಣೆಗಳನ್ನ ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಬ್ಯಾಂಕ್ ನೌಕರ ಸಂಘಟನೆಯ ಮುಖಂಡ ಗಿಂಡೆ ಅವರು ಮಾತನಾಡಿ, ವೇತನ ಪರಿಷ್ಕರಣೆ, ಮೂಲ ವೇತನದೊಂದಿಗೆ ವಿಶೇಷ ಭತ್ಯೆಯ ವಿಲೀನಿಕರಣ, ಹೊಸ ಪಿಂಚಣಿ ಪದ್ಧತಿ, ಕುಟುಂಬ ಪಿಂಚಣಿಯಲ್ಲಿ ಪರಿಷ್ಕರಣೆ, ಸ್ಟಾಫ್ ವೇಲ್ಫೇರ್ ಫಂಡ್ ಹಂಚಿಕೆ, ನಿವೃತ್ತಿ ಆದಾಯ ಮೇಲೆ ತೆರಿಗೆ ವಿನಾಯಿತಿ, ವಾರದಲ್ಲಿ 5 ದಿನ ಕಾರ್ಯಕಾಲ, ಭೋಜನದ ಸಮಯ ನಿಗದಿ, ವೆಲ್ಫರ್ ಫಂಡ್, ಬ್ಯಾಂಕಿಂಗ್ ಸಮವಸ್ತ್ರ, ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿದಂತೆ ಇನ್ನುಳಿದ ಬೇಡಿಕೆಗಳನ್ನ ಈಡೇರಿಸುವಂತೆ ಮತ್ತು ಕೇಂದ್ರ ಸಕರ್ಾರದ ಹೊಸ ನೀತಿಯಿಂದ ಬ್ಯಾಂಕ್ನ ನೌಕರರನ್ನ ಅವಮಾನಿಸಿದೆ ಎಂದು ನುಡಿದರು.
ಇದೇ ವೇಳೆಯಲ್ಲಿ ಇನ್ನೋರ್ವ ಜಿ. ಜಿ. ಕುಲಕಣರ್ಿ ಅವರು ಮಾತನಾಡಿ, ಕೇಂದ್ರ ಸಕರ್ಾರ ಹೊಸ ನೀತಿಯಿಂದ ಬ್ಯಾಂಕ್ನ ನೌಕರರಿಗೆ ಸಮಸ್ಯೆಯಾಗುತ್ತಿದೆ. ಅಲ್ಲದೇ ಬ್ಯಾಂಕ್ ನೌಕರರ ಬೇಡಿಕೆಗಳನ್ನ ಬಗೆಹರಿಸಬೇಕೆಂದು ಒತ್ತಾಯಿಸಿ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಅಲ್ಲದೆ ಈಗ 3 ದಿನಗಳ ತಮ್ಮ ಬೇಡಿಕೆಯನ್ನ ಈಡೇರಿಸಲೂ ಗಡುವುವನ್ನು ನೀಡಲಾಗಿದೆ. ಈ ಸಮಯದಲ್ಲಿ ಬ್ಯಾಂಕ್ ನೌಕರರ ಎಲ್ಲ ಸಮಸ್ಯೆಗಳನ್ನು ಬಗೆಹರಿಸದಿದ್ದರೇ, ಏಪ್ರೀಲ್ನಲ್ಲಿ ಅನಿದರ್ಿಷ್ಟ ಧರಣಿಯನ್ನ ನಡೆಸಲಾಗುವುದೆಂದು ಎಚ್ಚರಿಕೆಯನ್ನ ನೀಡಿದರು. ಇಂದಿನ ಪ್ರತಿಭಟನಾ ರ್ಯಾಲಿಯಲ್ಲಿ ನೂರಾರು ಸಂಖ್ಯೆಯ ಬ್ಯಾಂಕ್ ಅಧಿಕಾರಿಗಳು, ನೌಕರರು ಭಾಗವಹಿಸಿದ್ಧರು.