ಬೆಂಗಳೂರು, ಮೇ 2,ರಾಜ್ಯದಲ್ಲಿ ಕೊರೊನಾ ವೈರಸ್ ಮಹಾಮಾರಿ ವಕ್ಕರಿಸಿದಾಗಿನಿಂದ ಕೊರೊನಾ ವಾರಿಯರ್ಸ್ ಹಗಲಿರುಳು ಲೆಕ್ಕಿಸಿದೇ ಅವಿರತವಾಗಿ ಶ್ರಮಿಸುತ್ತಿದ್ದಾರೆ.ಈ ಕಾರ್ಯದಲ್ಲಿ ಪೊಲೀಸರ ಕಾರ್ಯವೇನು ಕಡಿಮೆ ಇಲ್ಲ. ಕೊರೊನಾ ಜಾಗೃತಿ, ಆಸ್ಪತ್ರೆಗೆ ಕಾವಲು ಕಾಯುವುದು, ರಸ್ತೆಗಳಿಯುವವರನ್ನು ನಿಯಂತ್ರಿಸುವುದು ಹೀಗೆ ವಿವಿಧ ಬಗೆಯಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸರ ಕಾರ್ಯಕ್ಕೆ ಮನಸೋತ ಸಿಲಿಕಾನ್ ಸಿಟಿ ಜನರು ಅವರ ಮೇಲೆ ಹೂವಿನ ಮಳೆ ಸುರಿಯುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.ಸಿಲಿಕಾನ್ ಸಿಟಿಯ ಸೋಮೇಶ್ವರ ಹಾಗೂ ಸಿದ್ದಾಪುರ ನಗರದಲ್ಲಿನ ಜನರು ಪೊಲೀಸರಿಗೆ ಹೂವಿನ ಮಳೆಸುರಿದು ಅದ್ಧೂರಿಯಾಗಿ ಸ್ವಾಗತ ಕೋರಿ ಅಭಿನಂದನೆ ಸಲ್ಲಿಸಿದ್ದಾರೆ. ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಸೆಪಟ್, ಎಸಿಪಿ, ಇನ್ಸ್ಪೆಕ್ಟರ್ ಸೇರಿ ಹಲವು ಅಧಿಕಾರಿಗಳ ಮೇಲೆ ರಸ್ತೆಯುದ್ದಕ್ಕೂ ನಿಂತಿದ್ದ ಸ್ಥಳೀಯರು ಪೊಲೀಸರ ಮೇಲೆ ಹೂವನ್ನು ಚೆಲ್ಲುವ ಮೂಲಕ ಸ್ವಾಗತ ಕೋರಿವುದರ ಜೊತೆಗೆ ಆರತಿ ಬೆಳಗಿ ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.ಸಾರ್ವಜನಿಕರ ಈ ಅಭಿಮಾನಕ್ಕೆ ಮನಸೋತ ಡಿಸಿಪಿ ರೋಹಿಣಿ ಕಟೋಚ್ ಜನರಿಗೆ ಕೈ ಮುಗಿದು ಕೃತಜ್ಞತೆ ಸಲ್ಲಿಸಿದ್ದು, ನಿಮ್ಮ ಈ ಅಭಿಮಾನ, ಸಹಕಾರಕ್ಕೆ ಮೂಕವಿಸ್ಮಿತಳಾಗಿದ್ದೇನೆ ಎಂದು ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.