ಬೆಂಗಳೂರು, ಏ.20,ಬೆಂಗಳೂರಿನ ಪಾದರಾಯನಪುರದಲ್ಲಿ ನಿನ್ನೆ ರಾತ್ರಿ ಕೊರೋನಾ ಶಂಕಿತರ ತಪಾಸಣೆಗೆ ಹೋದ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸರ ಮೇಲೆ ಹಲ್ಲೆ ಮಾಡಿಸಿರುವ ಅಮಾನವೀಯ ಘಟನೆ ಅತ್ಯಂತ ಖಂಡನೀಯ. ಇದು ಪೂರ್ವನಿಯೋಜಿತ ಕೃತ್ಯವಾಗಿದೆ, ಇಂತಹ ದುರುಳರ, ನೀಚರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಬಿಜೆಪಿ ಬೆಂಗಳೂರು ಕೇಂದ್ರ ಘಟಕದ ಜಿಲ್ಲಾಧ್ಯಕ್ಷ ಮಂಜುನಾಥ್ ಒತ್ತಾಯಿಸಿದ್ದಾರೆ.ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ಹಿಂದೆ ಕ್ಷೇತ್ರದಲ್ಲಿ ಆಶಾ ಕಾರ್ಯಕರ್ತೆಯರು ಸಾರ್ವಜನಿಕರ ಆರೋಗ್ಯ ತಪಾಸಣೆಗಾಗಿ ಮನೆ ಮನೆಗೆ ಭೇಟಿಕೊಟ್ಟ ಸಂದರ್ಭದಲ್ಲಿ ಅವರ ಮೇಲೆ ಹಲ್ಲೆ ಮಾಡಿದ ಕೋಮುವಾದಿಗಳನ್ನು ಸಮರ್ಥನೆ ಮಾಡಿಕೊಂಡ ಶಾಸಕ ಜಮೀರ್ ಅಹ್ಮದ್ ಅವರ ವರ್ತನೆ ಹಾಗೂ ನಿನ್ನೆ ಪಾದರಾಯನನಪುರದ ಕೊರೋನಾ ಶಂಕಿತರ ತಪಾಸಣೆಗೆ ಸಹಕರಿಸದೇ, ಶಾಸಕರೇ ಬಂದು ನಮಗೆ ಹೇಳಲಿ ಎಂದಿರುವುದು, ಈ ಎಲ್ಲಾ ಘಟನೆಗಳ ಹಿಂದೆ ಸ್ಥಳೀಯ ಶಾಸಕರಾದ ಜಮೀರ್ ಅಹಮದ್ ಇರುವುದು ಕಂಡು ಬರುತ್ತಿದೆ. ಇದನ್ನು ಬಿಜೆಪಿ ಬೆಂಗಳೂರು ಕೇಂದ್ರ ಘಟಕ ಖಂಡಿಸುತ್ತದೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆರೋಗ್ಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೊಲೀಸರು ನಮ್ಮನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕೆಲಸ ನಿರ್ವಹಿಸುತ್ತಿದ್ದಾರೆ. ಗೃಹ ಸಚಿವರು ಮತ್ತು ಪೋಲಿಸ್ ಇಲಾಖೆ ಈ ದುಷ್ಕರ್ಮಿಗಳಿಗೆ ಪಾಠ ಕಲಿಸಬೇಕು ಹಾಗೂ ಬೆಂಗಳೂರಿನಲ್ಲಿ ಭಯೋತ್ಪಾದಕರನ್ನು ನಾವು ಬಯಸುವುದಿಲ್ಲ. ಇಡೀ ದೇಶ ಲಾಕ್ ಡೌನ್ ಪಾಲನೆ ಮಾಡುತ್ತಿದ್ದಾಗ, ಇಂತಹ ನೀಚರು ಕಾನೂನು ಉಲ್ಲಂಘನೆ ಮಾಡಿ, ತಮ್ಮನ್ನು ರಕ್ಷಿಸಲು ಬಂದಿರುವವರ ಮೇಲೆ ಹಲ್ಲೆ ಮಾಡುವಂತಹ ಹೀನ ಮನಸ್ಥಿತಿಯವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಹಾಗೂ ಸಾರ್ವಜನಿಕ ಆಸ್ತಿ ಹಾನಿ ಮಾಡಿದವರ ವಿರುದ್ಧ ಅವರ ಆಸ್ತಿ ಜಪ್ತಿ ಜಪ್ತಿ ಮಾಡಿ ಸರ್ಕಾರ ವಶಪಡಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.ಪಾದರಾಯನಪುರದಲ್ಲಿ ಶಂಕಿತರ ತಪಾಸಣೆಗೆ ಬೆಳಿಗ್ಗೆ ಬರಬೇಕಾಗಿತ್ತು, ನನಗೆ ಹೇಳಿ ಬರಬೇಕಾಗಿತ್ತು, ಮುಂಚೆಯೇ ಹೇಳಿದ್ದರೆ ಮಸೀದಿಯಿಂದ ಹೇಳಿಸುತ್ತಿದ್ದೆ ಎಂದು ಹೇಳಿರುವುದು ಇಲ್ಲಿ ನಮ್ಮ ಮಣ್ಣಿನ ಕಾನೂನು ಅನ್ವಯಿಸುತ್ತದೆಯೋ ? ಅಥವಾ ಬೇರೆ ಕಾನೂನು ಅನ್ವಯಿಸುತ್ತದೆಯೂ ? ಈ ಎಲ್ಲಾ ಘಟನೆಗಳ ಹಿಂದೆ ಸ್ಥಳೀಯ ಶಾಸಕರಿರುವುದು ಅವರ ಮಾತನಲ್ಲೇ ವ್ಯಕ್ತವಾಗುತ್ತಿದೆ. ಈ ಕೂಡಲೇ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕ ಜಮೀರ್ ಅಹಮದ್ ರವರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜ್ಯದ ಜನರ ಕ್ಷಮೆಯಾಚಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.