ಫೆ.16ರಂದು ಕೆ.ಎಸ್.ಈಶ್ವರಪ್ಪ ಭೀಮರಥ ಶಾಂತಿಯ ಸಂಭ್ರಮಾಚರಣೆ

ಬೆಂಗಳೂರು, ಫೆ.14 :  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ.ಕೆ.ಎಸ್.ಈಶ್ವರಪ್ಪರವರ ಭೀಮರಥ ಶಾಂತಿಯ ಸಂಭ್ರಮಾಚರಣೆ  ಫೆ.16ರಂದು ಬೆಳಗ್ಗೆ 10.30ಕ್ಕೆ ಅವರ ಶಿವಮೊಗ್ಗದ ಸ್ವಗೃಹದಲ್ಲಿ ನಡೆಯಲಿದೆ.ನಾಡಿನ  ಹಿರಿಯ ರಾಜಕಾರಣಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ  ಕೆ.ಎಸ್  ಈಶ್ವರಪ್ಪನವರ ಭೀಮರಥ ಶಾಂತಿಯ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಸಿದ್ಧತೆ ಜೋರಾಗಿದೆ.  ಶಿವಮೊಗ್ಗದಲ್ಲಿರುವ ಸಚಿವರ ಸ್ವಗೃಹದಲ್ಲಿ ಫೆಬ್ರವರಿ 16 ರಂದು ಬೆಳಿಗ್ಗೆ 10-30 ಕ್ಕೆನಡೆಯುವ ಅದ್ದೂರಿ ಭೀಮರಥ ಶಾಂತಿಯ ಸಂಭ್ರಮಾಚರಣೆಗೆ ನಾಡಿನ ಉದ್ದಗಲದಿಂದ ಆಗಮಿಸುವ  ಅಭಿಮಾನಿಗಳು, ಹಿತೈಷಿಗಳ ಸ್ವಾಗತಕ್ಕೆ ಅಂತಿಮ ಹಂತದ ತಯಾರಿ ಮುಂದುವರಿದಿದೆ ಎಂದು ಪ್ರಕಟಣೆ ತಿಳಿಸಿದೆ.ಕೆ.ಎಸ್.  ಈಶ್ವರಪ್ಪನವರ  ಭೀಮರಥ ಶಾಂತಿಯ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ದೇಶದ ವಿವಿಧೆಡೆಯಿಂದ  ರಾಜಕಾರಣಿಗಳು, ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು ಮತ್ತು ವಿವಿಧ ಸಂಘಟನೆಗಳ  ಪ್ರಮುಖರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮಂತ್ರಾಲಯದ  ಸುಬುಧೇಂದ್ರ ತೀರ್ಥ  ಸ್ವಾಮೀಜಿ, ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ, ಕಾಗಿನೆಲೆ  ಮಹಾಸಂಸ್ಥಾನದ  ನಿರಂಜನಾನಂದಪುರಿ ಸ್ವಾಮೀಜಿ, ಆದಿಚುಂಚನಗಿರಿ ಸ್ವಾಮೀಜಿಗಳಾದ  ಡಾ.ನಿರ್ಮಲಾನಂದ ಸ್ವಾಮೀಜಿ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ,  ಶಿವಮೊಗ್ಗದ ಬೆಕ್ಕಿನಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿಗಳು,  ವಾಲ್ಮೀಕಿ ಗುರುಪೀಠದ  ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿಗಳು, ಗೌರಿಗದ್ದೆ  ದತ್ತಾಶ್ರಮದ ಅವಧೂತರಾದ ವಿನಯ ಗುರೂಜೀ, ಪಂಚಮಸಾಲಿ ಜಗದ್ಗುರುಗಳಾದ ವಚನಾನಂದ ಸ್ವಾಮೀಜಿ,  ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ,  ಭಗೀರಥ   ಮಹಾಸಂಸ್ಥಾನದ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ, ಆದಿಚುಂಚನಗಿರಿ ಮಠದ ಪ್ರಸನ್ನನಾಥ  ಸ್ವಾಮೀಜಿ, ಶಿವಮೊಗ್ಗ ಬಸವಕೇಂದ್ರದ ಡಾ.ಬಸವ ಮರುಳಸಿದ್ಧ ಸ್ವಾಮೀಜಿ, ಶಿವಮೊಗ್ಗ  ರಾಮಕೃಷ್ಣ ವಿವೇಕಾನಂದ ಆಶ್ರಮದ ವಿನಯಾನಂದ ಸರಸ್ವತಿ ಸ್ವಾಮೀಜಿ, ಕೌಲಗುಡ್ಡ  ಸಿದ್ಧಾಶ್ರಮದ ಅಮರೇಶ್ವರ ಮಹಾರಾಜರು ಭಾಗವಹಿಸಲಿದ್ದಾರೆ.ವಿವಿಧ  ಪಕ್ಷಗಳ ಮುಖಂಡರು ಸಹ ಭೀಮರಥ ಶಾಂತಿಯ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ  ಪಾಲ್ಗೊಳ್ಳಲಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಸಿದ್ಧರಾಮಯ್ಯ, ಎಚ್ ಡಿ.ಕುಮಾರಸ್ವಾಮಿ ಮತ್ತು ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರು  ಭಾಗವಹಿಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಬಿಜೆಪಿ  ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಮಾಜಿ ಸಭಾಪತಿ ಡಿ.ಹೆಚ್  ಶಂಕರಮೂರ್ತಿ ಮತ್ತು ಆರ್ ಎಸ್ ಎಸ್ ಹಿರಿಯ ಕ್ಷೇತ್ರ ಪ್ರಚಾರಕರಾದ ಸು.ರಾಮಣ್ಣ ಅವರು  ಭೀಮರಥ ಶಾಂತಿಯ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.ರಾಜಕೀಯ  ಕ್ಷೇತ್ರದ ಒಡನಾಡಿಗಳು, ಧಾರ್ಮಿಕ ಮುಖಂಡರ ಸಮಾಗಮವಾಗಿ ಈ ಕಾರ್ಯಕ್ರಮ ನಡೆಯಲಿದ್ದು,  ಸಚಿವ ಕೆ.ಎಸ್ ಈಶ್ವರಪ್ಪನವರ ಅಭಿಮಾನಿಗಳು ಸಹ ಅದ್ಧೂರಿಯ ಸಂಭ್ರಮಾಚರಣೆಗೆ  ಸಾಕ್ಷಿಯಾಗಲಿದ್ದಾರೆ. ಆರ್  ಎಸ್ ಎಸ್ ಸಂಘಟನೆಯಲ್ಲಿ ಗುರುತಿಸಿಕೊಳ್ಳುವ ಮೂಲಕ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದ  ಕೆ.ಎಸ್. ಈಶ್ವರಪ್ಪನವರು ದೇಶಾದ್ಯಂತ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಈ  ಅಭಿಮಾನಿಗಳ ಸಮ್ಮುಖದಲ್ಲೇ ಭೀಮರಥ ಶಾಂತಿಯ ಸಂಭ್ರಮಾಚರಣೆ ಕಾರ್ಯಕ್ರಮ  ಹಮ್ಮಿಕೊಂಡಿರುವುದು ವಿಶೇಷವಾಗಿದೆ. ರಾಜಕೀಯ ಹೊರತುಪಡಿಸಿಯೂ ಅಪಾರ ಬಂಧು ಬಳಗವನ್ನು  ಹೊಂದಿರುವ ಈಶ್ವರಪ್ಪನವರ ಭೀಮರಥ ಶಾಂತಿಯ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಫೆಬ್ರವರಿ 16  ರಂದು ಆಗಮಿಸುವ ಗಣ್ಯರ ಆಗಮನಕ್ಕೆ ಸ್ವಾಗತ ಕೊರಲು ಶಿವಮೊಗ್ಗ ನಗರ ಸಿದ್ಧವಾಗಿ  ನಿಂತಿದೆ ಎಂದು ಪ್ರಕಟಣೆ ತಿಳಿಸಿದೆ.