ಶ್ರೀನಿವಾಸ ಮಾನೆವರು ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ

A floral tribute to the portrait of Mr. Srinivasa Vivekananda

ಶ್ರೀನಿವಾಸ ಮಾನೆವರು ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ  

ಹಾನಗಲ್  13: ಶಾಸಕ ಶ್ರೀನಿವಾಸ ಮಾನೆ ಅವರ ಇಲ್ಲಿನ ಜನಸಂಪರ್ಕ ಕಚೇರಿಯಲ್ಲಿ ಯುವ ಮನಸ್ಸುಗಳ ಪ್ರೇರಣಾ ಶಕ್ತಿ ಸ್ವಾಮಿ ವಿವೇಕಾನಂದ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಗೌರವಾರ​‍್ಿಸಲಾಯಿತು. 

  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮರಗಡಿ ಮಾತನಾಡಿ ಸ್ವಾಮಿ ವಿವೇಕಾನಂದರು ಭಾರತಕ್ಕೆ ಮಾತ್ರವಲ್ಲದೇ ಇಡೀ ಪ್ರಪಂಚಕ್ಕೆ ಸ್ಪೂರ್ತಿ ತುಂಬಿದ್ದಾರೆ. ಇಂದಿಗೂ, ಎಂದಿಗೂ ಅವರು ಆಧ್ಯಾತ್ಮಿಕ ಗುರು, ಶ್ರೇಷ್ಠ ಆದರ್ಶ ವ್ಯಕ್ತಿ. ಯುವ ಸಮೂಹಕ್ಕೆ ನೀಡಿದ ಅವರ ಕರೆ ಏಳಿ, ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬುವುದು ಸರ್ವಕಾಲಕ್ಕೂ ನೆನೆಯುವ, ಒಳ್ಳೆಯ ಕೆಲಸಗಳಿಗೆ ಬಡಿದೆಚ್ಚರ ಮಾಡುವ ವಾಕ್ಯವಾಗಿದೆ. ಅವರ ತತ್ವ, ಸಿದ್ಧಾಂತಗಳನ್ನು ಪರಿಪಾಲಿಸುವ ಸಂಕಲ್ಪ ಗೈಯ್ಯುವ ಮೂಲಕ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಅಗತ್ಯವಿದೆ ಎಂದರು. 

     ಮುಖಂಡರಾದ ಗುರುರಾಜ್ ನಿಂಗೋಜಿ, ಶಿವು ಭದ್ರಾವತಿ, ಸುರೇಶ ನಾಗಣ್ಣನವರ, ಉಮೇಶ ಮಾಳಗಿ, ವಿನಯ ಬಂಕನಾಳ, ರೇಣುಕಾ ಚಾಕಾಪೂರ, ದುರ್ಗಪ್ಪ ಬಡಿಗೇರ ಸೇರಿದಂತೆ ಇನ್ನೂ ಹಲವರು ಉಪಸ್ಥಿತರಿದ್ದರು.