ಪ್ರಾಥಮಿಕ ಗ್ರಾ.ಕೃ.ಸ.ಸಂಘದ ಚುನಾವಣೆ ಬಿಜೆಪಿ ಭರ್ಜರಿ ಗೆಲುವು .ಕಾಂಗ್ರೆಸ್ ಹಿನ್ನಡೆ
ಹೂವಿನಹಡಗಲಿ 13: ತಾಲೂಕಿನ ಹೊಳಗುಂದಿ ವಿವಿದೊದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ 12 ನಿರ್ದೆಶಕರ ಸ್ಥಾನಗಳಿಗೆ ಭಾನುವಾರ ಬಾವಿಹಳ್ಳಿ ಸಂಘದ ಕಚೇರಿಯಲ್ಲಿ ಚುನಾವಣೆ ನಡೆಯಿತು.
ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಮತದಾರರು ಹುರುಪಿನಿಂದ ಮತ ಚಲಾಯಿಸಿದರು. ಸಂಜೆ ನಡೆದ ಮತದಾನ ಫಲಿತಾಂಶದಲ್ಲಿ ಬಿಜೆಪಿ ಬೆಂಬಲಿತ ಏಳು ಜನ ಮತ್ತು ಕಾಂಗ್ರೆಸ್ ಬೆಂಬಲಿತ ಐದು ಜನರು ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಪ್ರತಿ ಬಾರಿ ಸೊಸೈಟಿ ಕಾಂಗ್ರೆಸ್ ಆಡಳಿತ ನಡೆಸಿದೆ. ಈ ಬಾರಿ ಬಿಜೆಪಿ ಏಳು ಸ್ಥಾನ ಮೂಲಕ ಭರ್ಜರಿ ಗೆಲುವು ದಾಖಲಿಸಿದೆಕಾಂಗ್ರೆಸ್ ಗೆ ಮುಖಭಂಗವಾಗಿದೆ. ಬಿಜೆಪಿ ಬೆಂಬಲಿತರಾದ ಹೆಚ.ಗುರುಬಸವರಾಜ.ಎಂ.ನೆಪೋಲಿಯನ್. ಕರಿಬಸಪ್ಪ ಕಾತ್ರಿಕಿ.ಎಸ್.ಬಿ.ಪತ್ರಿಬಸಪ್ಪ. ಕೊಟ್ರೇಶ. ಹೆಚ್.ಚಂದ್ರಮ್ಮ. ಎನ್.ಎಸ್.ಸುಮಂಗಲ ಹಾಗೂ ಕಾಂಗ್ರೆಸ್ ಬೆಂಬಲಿತರಾದ ಚಾವಡಿ ಗುಡದೀರಗೌಡ.ಸಿಜೆ.ವೀರನಗೌಡ .ವೀರೇಶ ದೇವರಮನಿ. ಪರಸರಾಮಪ್ಪ.ಮೃತ್ಯುಂಜಯ. ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿ ಪವನ್‌ಕುಮಾರ ತಿಳಿಸಿದ್ದಾರೆ.