ಸಂಬರಗಿ 12: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಬಿಜಾಪುರ ಮಿರಾಜ್ ರೈಲು ಮಾರ್ಗದ ಕುರಿತು ಲೋಕಸಭೆಯಲ್ಲಿ ಶೀಘ್ರದಲ್ಲೇ ಪ್ರಸ್ತಾಪ ಮಂಡಿಸುವುದಾಗಿ ಮತ್ತು ರೈಲು ಮಾರ್ಗಕ್ಕೆ ಪ್ರಯತ್ನ ಮಾಡುತ್ತೇನೆ ಎಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದೆ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಖಾಜಿಗಿ ಕಾರ್ಯಕ್ರಮ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರದೇಶದ ಜನರು ಬಿಜಾಪುರದಿಂದ ಪುಣೆಗೆ ಮತ್ತು ಮುಂಬೈ ಅಂತರರಾಜ್ಯ ಮಾರುಕಟ್ಟೆಗೆ ಸಾಕಷ್ಟು ಸಂಪರ್ಕ ಹೊಂದಿರುವುದರಿಂದ, ಹಲವು ವರ್ಷಗಳಿಂದ ರೈಲ್ವೆ ಬೇಡಿಕೆ ಇದೆ ಎಂದು ಹೇಳಿದರು. ಮೀರಜ್ ಶೆಡಬಾಳ ವಿಜಯಪುರ ರೈಲು ಮಾರ್ಗವು ಕೇಂದ್ರದ ಗಮನಕ್ಕೆ ತರಲಾಗುವುದು ಮತ್ತು ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು. ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಕೇಂದ್ರದಿಂದ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸುವ ಮೂಲಕ, ಲೋಕಸಭಾ ಕ್ಷೇತ್ರವು ರಾಜ್ಯದಲ್ಲಿ ಮಾತ್ರವಲ್ಲದೇ ದೇಶದಲ್ಲೇ ಮಾದರಿ ಕ್ಷೇತ್ರವಾಗಿ ಮಾಡುತ್ತೇನೆ. ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಕಾರ್ಯಗಳನ್ನು ಅನುಷ್ಠಾನಗೊಳಿಸಲಾಗುವುದು. ಇವು ಜನರ ಸಮಸ್ಯೆಗಳು, ಅವುಗಳನ್ನು ಪರಿಹರಿಸಲು ನನ್ನ ನಿರಂತರ ಪ್ರಯತ್ನಗಳಿಗೆ ಜನರ ಸಹಕಾರ ಮುಖ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಸದಾಶಿವ್ ಬುಟಾಳಿ, ದಿಗ್ವಿಜಯ್ ದೇಸಾಯಿ,ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತರ ರಮೇಶ್ ಶಿಂದಗಿ,ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಮಾಧ್ಯಮ ಪ್ರತಿನಿಧಿ ರಾವಸಾಹೆಬ ಐವಾಳೆ, ಚಂದ್ರಕಾಂತ್ ಇಮ್ಮಡಿ ,ಬಸವರಾಜ ಭೂಟಾಳಿ, ಸಚಿನ್ ಭೂಟಾಳಿ ಅಸ್ಲಂ ಉಪಸ್ಥಿತರಿದ್ದರು. ಫೋಟೋ , ಕುಮಾರಿ ಪ್ರಿಯಾಂಕಾ ಜಾರಕಿಹೊಳಿ ಅವರು ಅಥಣಿ, ವಿಧಾನಸಭಾ ಕ್ಷೇತ್ರದ ಜನರ ಸಮಸ್ಯೆ ಪರ್ಯಾಯ ಮಾಡಲು ಹೋಗುತ್ತಿರುವ ಚಿತ್ರ ದಿಗ್ವಿಜಯ ಪವರ್ ದೇಸಾಯಿ ರಾವಸಾಹೇಬ್ ಐಹೋಳಿ ಚಂದ್ರಕಾಂತ್, ಇಮ್ಡಿ, ರಮೇಶ್ ಸಿಂದಗಿ ಇನ್ನಿತರು.