ವಧು-ವರರ ಸಮಾವೇಶ

Bride and Groom Convention

ವಿಜಯಪುರ ಜ.13: ನಿಜ ಶರಣ ಅಂಬಿಗರ ಚೌಡಯ್ಯನವರ ಸಮಾಜದ ವತಿಯಿಂದ ಜನವರಿ 19ರಂದು ಗದಗ ನಗರದ ಹುಬ್ಬಳ್ಳಿ ರಸ್ತೆಯಲ್ಲಿರುವ ಮುಳಗುಂದ ನಾಕಾ ಹತ್ತಿರದ ಕ್ಲಾರ್ಕ್ಸ ಇನ್ ಸ್ಟಾರ್ ಹೊಟೆಲ್ನಲ್ಲಿ ವಧು- ವರರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.  

ಸಮಾವೇಶದಲ್ಲಿ ವಧು ವರರ ಫೋಟೋ ಇಮೇಜ್ ಹಾಗೂ ವಿಡಿಯೋಗಳನ್ನು ಸಿೊಥನ್ ಪ್ಲೇ ಮೂಲಕ ತೋರಿಸಲಾಗುವುದು. ಸಮಾವೇಶದಲ್ಲಿ ಭಾಗವಹಿಸಲು ಇಚ್ಚಿಸುವವರು ತಮ್ಮ ಹೆಸರುನ್ನು ನೋಂದಾಯಿಸಿಕೊಳ್ಳಲು ಪ್ರತಿಯೊಬ್ಬ ಪ್ರತಿನಿಧಿಗೆ 1 ಸಾವಿರ ಪ್ರವೇಶ ಶುಲ್ಕ ಇರುವುದು. ಸಮಾವೇಶದಲ್ಲಿ ಯಾವುದೇ ಏಜೆಂಟರಿಗೆ ಹಾಗೂ ಮದ್ಯವರ್ತಿಗಳಿಗೆ ಅವಕಾಶವಿರುವುದಿಲ್ಲ. ತಮ್ಮ ಭಾವಚಿತ್ರ ಬಯೋಡೇಟಾ, ಪ್ರವೇಶ ಶುಲ್ಕದೊಂದಿಗೆ ಸಮಾವೇಶದ ಸಂಚಾಲಕರಾದ ದೇವೇಂದ್ರ ಅಂಬಿಗೇರ ಮೋ ಸಂಖ್ಯೆ ಹಾಗೂ ವಾಟ್ಸ್ಪ ನಂ 9880638379 ಮೂಲಕ ಕಳುಹಿಸಿಕೊಡುವಂತೆ, ಹಾಗೂ ಸಮಾಜದ ಯುವಕ, ಯುವತಿಯರು ಹಾಗೂ ಪಾಲಕರು ಸೇರಿದಂತೆ ಸಮಾಜದ ಬಂದುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿಜಯಪುರದ ಜ್ಞಾನಗಂಗಾ ವಿವಿಧೋದ್ದೇಶಗಳ ಸಹಕಾರಿ ಸಂಘದ ನಿರ್ದೇಶಕರಾದ ಶಿವಾನಂದ .ಅಂಬಿಗೇರ ಮೋ.ಸಂಖ್ಯೆ 9448342873 ಪ್ರಕಟಣೆಯಲ್ಲಿ ತಿಳಿಸಿದ್ದಾರೆ.