ಸಿಂದಗಿ 29: ಪ್ರತಿ ಮನೆಯಲ್ಲಿ ಮಾಡಿದ ಅಡುಗೆಯಲ್ಲಿ ಕುಟುಂಬ ಜೊತೆಗೂಡಿ ಮಾಡುವುದು ಊಟವಾದರೆ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ದೇವರ ಹೆಸರಿನಲ್ಲಿ ಮಾಡುವ ಅಡುಗೆ ಮಹಾಪ್ರಸಾದವಾಗುತ್ತದೆ. ಪ್ರಸಾದ ಸೇವಿಸುವದರಲ್ಲಿ ಬಹಳ ಮಹತ್ವವಿದೆ ಎಂದು ಕಾವ್ಯ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಚಂದ್ರಶೇಖರ ನಾಗರಬೆಟ್ಟ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಅಯ್ಯಪ್ಪ ಸ್ವಾಮಿ ಸನ್ನಿದಿಯಲ್ಲಿ ಪ್ರಸಾದ ಕಾಮತ್ ಅವರ ವತಿಯಿಂದ ನಡೆದ ಮಹಾಪೂಜೆಯಲ್ಲಿ ಭಾಗವಹಿಸಿ ಮಾತನಾಡಿ, ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಸತತ ಒಂದು ತಿಂಗಳಿನಿಂದ ಚಳಿಯನ್ನದೆ ಅವರು ಮಾಡುವ ಭಕ್ತಿ ಸೇವೆ ನಂತರ ಮಕರ ಸಂಕ್ರಾಂತಿ ದಿನದಂದು ಮಕರ ಜ್ಯೋತಿಯ ದರ್ಶನ ಪಡೆದು ತಮ್ಮ ಜೀವನ ಪಾವನ ಪಡೆಸಿಕೊಳ್ಳುತ್ತಾರೆ ಅಂತಹ ಸೇವಾಧಾರಿಗಳ ಸೇವೆಯಲ್ಲಿ ಪಾಲ್ಗೊಂಡು ನಾವೆಲ್ಲರು ಪ್ರಸಾದ ಸೇವನೆ ಮಾಡುವುದು ಪೂಣ್ಯದ ಕಾರ್ಯವಾಗಿದೆ ಎಂದರು
ಬಳಿಕ ವರ್ತಕರಾದ ಗುರುಪ್ರಸಾದ್ ಕಾಮತ್ ಮಾತನಾಡಿ, ಅಯ್ಯಪ್ಪ ಸ್ವಾಮಿಯ ರಥವು ಬಹಳ ಕಠಿಣ ಆದರೆ ವರವು ಅಷ್ಟೇ ಸುಲಭ ಎಷ್ಟೇ ಆಚಾರ ವಿಚಾರದಿಂದ ಮಾಲಾದಾರಿಗಳು ಅಯ್ಯಪ್ಪ ಸ್ವಾಮಿಯ ಸೇವೆಯನ್ನು ಮಾಡುತ್ತಾರೆ ಕಟ್ಟುನಿಟ್ಟಾದ ವೃತವನ್ನು ಆಚರಿಸುತ್ತಾರೋ ಅಷ್ಟು ಪುಣ್ಯ ಪ್ರಾಪ್ತಿ ದೊರೆಯುವುದರಲ್ಲಿ ಸಂದೇಹವಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಗುರುಸ್ವಾಮಿ ಕಿರಣ್ ಶಿವಶಿಂಪಿ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಜನ ಮಾಲಾಧಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ನಂತರ ಎಲ್ಲ ಮಾಲಾದಾರಿಗಳಿಗೂ ಸೇರಿದಂತೆ ಭಕ್ತಾದಿಗಳಿಗೆ ಗುರುಪ್ರಸಾದ್ ಕಾಮತ್ ಇವರಿಂದ ಅನ್ನಪ್ರಸಾದ ಸೇವೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಕಾನಿಪ ಧ್ವನಿ ಸಂಘದ ಅಧ್ಯಕ್ಷ ಪಂಡಿತ ಯಂಪೂರೆ, ಕಸಾಪ ಅದ್ಯಕ್ಷ ಶಿವು ಬಡಾನೂರ, ಮಲ್ಲನಗೌಡ ಪಾಟೀಲ ಇಬ್ರಾಹೀಂಪುರ, ಡಾ. ಪ್ರಶಾಂತ್ ಬಮ್ಮಣ್ಣಿ, ಡಾ. ಚಿದಾನಂದ ಅರಳಗುಂಡಗಿ, ಸಂಗಣ್ಣ ಕುಂಬಾರ, ಜಯಪ್ರಕಾಶ ಈಳಗೇರ, ಪ್ರಕಾಶ್ ಲೋಣಿ, ಗಂಗಾಧರ್ ಕಿಣಗಿ, ಬಸವರಾಜ ಶಿವಶಿಂಪಗೇರ, ಶಂಕರಗೌಡ ಬನ್ನೆಟ್ಟಿ, ಅಣ್ಣಾರಾವ ಜಂಬಗಿ, ಶಿವು ರೆಬಿನಾಳ, ಶಾಂತೂ ಬಿರಾದಾರ, ಶ್ರೀಪಾದ ಮಲ್ಲೇದ, ಶರಣು ಅರಳಗುಂಡಗಿ, ರುದ್ರಯ್ಯ ಹಿರೇಮಠ, ರಾಜು ಉಪ್ಪಿನ, ಸೇರಿದಂತೆ ಪತ್ರಕರ್ತ ವಿಜಯಕುಮಾರ್ ಪತ್ತಾರ ಭಾಗವಹಿಸಿದ್ದರು