ಜನಸಾಮಾನ್ಯರ ಆರೋಗ್ಯಕ್ಕಾಗಿ ಆಯುಷ್ಮಾನ್ ಭಾರತ: ಸಚಿವ ಪಾಟೀಲ

ಗದಗ 21:  ಇದ್ದುಳ್ಳುವರು ಆರೋಗ್ಯ ರಕ್ಷಣೆಗೆ  ವಿಶೇಷ ಆಸ್ವತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಾರೆ ಜನ ಸಾಮಾನ್ಯರು ಕೂಡ ಇಂತಹ ಚಿಕಿತ್ಸೆಗಳನ್ನು ಪಡೆಯಬೇಕು ಎಂದು ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ ಜಾರಿಗೊಳಿಸಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ನುಡಿದರು. 

        ಗದಗ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ವತ್ರೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,  ಪೊಲೀಸ್, ಕೌಶಲ್ಯಾಭಿವೃದ್ಧಿ, ಇಲಾಖೆಗಳು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಗದಗ ಮುನ್ಸಿಪಲ್ ಪದವಿ ಪೂರ್ವ ಕಾಲೇಜುಗಳ  ಸಂಯುಕ್ತ ಆಶ್ರಯದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಜರುಗಿದ ಆಯುಷ್ಮಾನ್ ಭಾರತ್- ಆರೋಗ್ಯ ಕನರ್ಾಟಕ ಪಾಕ್ಷಿಕ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

  ಆಯುಷ್ಮಾನ್ ಭಾರತ್  ವಿಶ್ವದಲ್ಲೇ ಅತಿದೊಡ್ಡ ಸರಕಾರಿ ಪ್ರಾಯೋಜಿತ ಆರೋಗ್ಯ ಯೋಜನೆ ಎಂಬ ಕೀತರ್ಿಗೆ ಪಾತ್ರವಾಗಿದೆ.  ದೇಶದ 10 ಕೋಟಿ ಕುಟುಂಬಗಳಿಗೆ ಯೋಜನೆ ಸೌಲಭ್ಯ ದೊರೆಯುತ್ತಿದೆ.  ಬಡಜನರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ಸಾಧ್ಯವಾಗಿದೆ.  ಈ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗಲು  ಆರೋಗ್ಯ ಇಲಾಖೆ ಸಕರ್ಾರಿ ಆಸ್ವತ್ರೆಗಳು, ವೈದ್ಯರು, ಹಾಗೂ ಆಶಾ ಕಾರ್ಯಕತರ್ೆಯರು ಕಾಳಜಿವಹಿಸಬೇಕು ಎಂದು  ಹೇಳಿದರು. 

ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ.ಸಲಗರೆ ಮಾತನಾಡಿ  ಪ್ರತಿಯೊಬ್ಬ ವ್ಯಕ್ತಿ ಉತ್ಸಾಹದಿಂದ ಜೀವಿಸಲು,   ಕೆಲಸ ಮಾಡಲು ಆರೋಗ್ಯ ಮುಖ್ಯ.  ಈ ಯೋಜನೆಯು ಬಿ.ಪಿ.ಎಲ್ ಕುಟುಂಬಗಳಿಗೆ 5 ಲಕ್ಷದವರಗಿನ  ಉಚಿತವಾಗಿ ಚಿಕಿತ್ಸೆ ದೊರಕಿದೆ. ಜನರು ಆರೋಗ್ಯವಾಗಿದ್ದರೆ ದೇಶ ಅಭಿವೃದ್ಧಿ ಹೊಂದುತ್ತದೆ ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವಿರೂಪಾಕ್ಷರಡ್ಡಿ ಮಾದಿನೂರು ಮಾತನಾಡಿ ಬಿಪಿಎಲ್ ಪಡಿತರ ಕಾಡರ್್ ಹೊಂದಿರುವವರು ಹಾಗೂ ರಾಷ್ಟ್ರೀಯ ಭೀಮಾ ಯೋಜನೆಯಲ್ಲಿ ನೊಂದಾಯಿತವಾಗಿರುವ ಫಲಾನುಭವಿಗಳಿಗೆ ಒಂದು ವರ್ಷಕ್ಕೆ ರೂ 5.00 ಲಕ್ಷಗಳವರೆಗೆ ಉಚಿತ ಚಿಕಿತ್ಸೆ ಲಭ್ಯವಿದೆ. ಎಪಿಲ್ ಕಾಡರ್್ದಾರರು ಅಥವಾ ಕಾಡರ್್ ಹೊಂದಿಲ್ಲದವರಿಗೆ ಸಹ ಪಾವತಿ ಆಧಾರದ ಮೇಲೆ ಸರ್ಕಾರಿ  ಪ್ಯಾಕೇಜ್ ದರದ 30ರಷ್ಟು ಚಿಕಿತ್ಸಾ ವೆಚ್ಚ ಲಭ್ಯವಿದ್ದು, ವಾಷರ್ಿಕ ಮಿತಿ ಪ್ರತಿ ಕುಟುಂಬಕ್ಕೆ ರೂ. 1.50 ಲಕ್ಷ ಇರುತ್ತದೆ. ಪಡಿತರ ಚೀಟಿ  ಮತ್ತು ಆಧಾರ್ ಕಾಡರ್್  ಹಾಜರುಪಡಿಸಿ ಚಿಕಿತ್ಸೆ ಪಡೆದುಕೊಳ್ಳಬಹುದು. ಗದಗ ಜಿಲ್ಲೆಯಿಂದ 67706 ಆಯುಷ್ಮಾನ್ ಭಾರತ್- ಆರೋಗ್ಯ ಕನರ್ಾಟಕ ಕಾಡರ್್ಗಳನ್ನು ಪಡೆದಿರುತ್ತಾರೆ ಎಂದರು. 

ಸಕರ್ಾರಿ ಆಸ್ಪತ್ರೆಗಳಲ್ಲಿ 4435 ಫಲಾನುಭವಿಗಳು  ಹಾಗೇ ಹೆಚ್ಚಿನ ಚಿಕಿತ್ಸೆಗಾಗಿ ಫಲಾನುಭವಿಗಳು  ಸಕರ್ಾರಿ ಆಸ್ಪತ್ರೆಯಿಂದ 3046 ರೆಫರಲ್ ಪತ್ರ ಪಡೆದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಗದಗ ಜಿಲ್ಲೆಯ ಖಾಸಗಿ ಆಸ್ಪತೆಗಳಲ್ಲಿ 1389 ಫಲಾನುಭವಿಗಳು ವೈದ್ಯಕೀಯ  ಚಿಕಿತ್ಸೆ ಪಡೆದಿದ್ದಾರೆ. ಎಂದರು. 

        ಗದಗ ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ ನೀಲಗುಂದ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಬಿ.ಸಿ ಕರಿಗೌಡ್ರ, ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿ ಡಾ. ವಾಯ್. ಕೆ. ಭಜಂತ್ರಿ, ತಾಲೂಕು ಆರೋಗ್ಯ ಅಧಿಕಾರಿ ಡಾ.ಎಸ್.ಎಸ್. ನಿಲಗುಂದ, ಮಲೇರಿಯಾ ಅಧಿಕಾರಿ ಅರುಂಧತಿ ಕುಲಕರ್ಣಿ , ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಬಿ.ಎಮ್ ಗೊಜನೂರು ಸಮಾರಂಭದಲ್ಲಿದ್ದರು. ಮಂಜರಿ ಹೊಂಬಳಿ ನಿರೂಪಿಸಿದರು, ಬಸವರಾಜ ಲಾಳಗಟ್ಟಿ ವಂದಿಸಿದರು.