ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕೆಂದು ಆಶಾ ಕಾರ್ಯಕತರ್ೆಯರು ಬಿದಿಗಿಳಿದು ಪ್ರತಿಭಟನೆ

ಲೋಕದರ್ಶನ ವರದಿ

ಬೆಳಗಾವಿ 12 : ಬಾಕಿ ಇರುವ ಪ್ರೊತ್ಸಾಹಧನ ಬಿಡುಗಡೆ ಮಾಡಿ ಹಾಗೂ ಮಾಸಿಕ ವೇತನವನ್ನು ನಿರ್ಧರಿಸಿ ಎಂದು ಬೆಳಗಾವಿ ಜಿಲ್ಲಾ ಘಟಕದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕತರ್ೆಯರ ಸಂಘ ಬೃಹತ್ ಪ್ರತಿಭಟನೆ ನಡೆಸಿತು.

ಶುಕ್ರವಾರ ನಗರದಲ್ಲಿ ಆಶಾ ಕಾರ್ಯಕತರ್ೆಯರು ಆರೇಳು ತಿಂಗಳಾದರೂ ರಾಜ್ಯ ಸರಕಾರ ವೇತನ ನೀಡುತ್ತಿಲ್ಲ ಬಾಕಿ ಇರುವ ಪ್ರೊತ್ಸಾಹಧನವನ್ನು ಬಿಡುಗಡೆ ಮಾಡುತ್ತಿಲ್ಲ ವೇತನ ನೀಡದೆ ಆಶಾ ಕಾರ್ಯಕರ್ತಯರನ್ನು ಸರಕಾರ ದುಡಿಸಿಕೊಳ್ಳುತ್ತಿದೆ ಎಂದು ಆಶಾ ಕಾರ್ಯಕರ್ತಯರು ಬೃಹತ್ ಸಂಖ್ಯೆಯಲ್ಲಿ ಸೇರಿ ನಗರದ ಸರದಾರ ಮೈದಾನದಿಂದ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಆಶಾಕಾರ್ಯಕತರ್ೆಯರ ಸಂಘದ ಕಾರ್ಯದಶರ್ಿ ಡಿ.ನಾಗಲಕ್ಷ್ಮೀ ಮಾಥ್ಯಮಗಳೊಂದಿಗೆ ಮಾತನಾಡಿ ಸರಕಾರವು ವೇತನ ನೀಡದೆ ಕಾರ್ಯಕತರ್ೆಯರನ್ನು ದುಡಿಸಿಕೊಳ್ಳುತ್ತಿದೆ 3500ರೂಪಾಯಿ ಪ್ರೊತ್ಸಾಹ ಧನ ನೀಡುತ್ತೇನೆಂದು ಇದೀಗ ಕೇವಲ 1000 ರೂಪಾಯಿ ಮಾತ್ರ ನೀಡುತ್ತಿದೆ ಮಾಸಿಕ ಸಂಭಳವನ್ನು ಕೂಡ ನಿಧರ್ಿಷ್ಟ ಪಡಿಸಿಲ್ಲ ಆದಷ್ಟು ಬೇಗ ಪ್ರೊತ್ಸಾಹ ಧನ ನೀಡದಿದ್ದರೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುತ್ತೆವೆ ಎಂದು ಎಚ್ಚರಿಕೆ ನೀಡಿದರು

ಆಶಾ ಕಾರ್ಯಕತರ್ೆ ಪಾರ್ವತಿ ತಿಗಡಿ  ಮಾತನಾಡಿ ಸಾಕಷ್ಟು ಕೇಲಸ ನೀಡುತ್ತಾರೆ ಆದರೆ ಸಂಭಳ ನೀಡುವುದಿಲ್ಲ ಆಸ್ಪತ್ರೆಗಳಲ್ಲಿ ಗೌರವ ಕೊಡುತ್ತಿಲ್ಲ ತಾಯಿ ಮತ್ತು ಶಿಶು ಮರಣ ತಡೆಗಟ್ಟಲು ಕಾರ್ಯ ನಿರ್ವಹಿಸುತ್ತಿರುವ ನಮಗೆ ರಕ್ಷಣೆ ಇಲ್ಲ ಪತಿಯನ್ನು ಕಳೆದುಕೊಂಡವರುನಿರ್ಗತಿಕರು ಆಶಾಕಾರ್ಯಕತರ್ೆಯರಾಗಿ ಕಾರ್ಯ ನಿರ್ವಹಿಸುತ್ತಾರೆ ಅವರಿಗೆ ಸಂಬಳ ನೀಡದಿದ್ದರೆ ಜೀವನ ಸಾಗಿಸಲು ಹೇಗೆ ಸಾದ್ಯ ಎಂದರು

ಪ್ರತಿಭಟನೆಯಲ್ಲಿ ಮಹಾಂತೇಶ ಬಿಳ್ಳೂರ, ಲಕ್ಷ್ಮನ್ ಜಡ್ಡೆನ್ನವರ, ಗೀತಾ ರಾಯಗೊಳ ಸೇರಿದಂತೆ ಸಾವಿರಾರು ಕಾರ್ಯಕತರ್ೆಯರು ಉಪಸ್ಥಿತರಿದ್ದರು