ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ನೂತನ ಸದಸ್ಯೆರ ನೇಮಕ
ಹೊಸಪೇಟೆ 29: ನಗರದ ಐ.ಬಿ.ಭವನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ನೇಮಕಾತಿ ಆದೇಶ ಪತ್ರವನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ವಿಭಾಗದ ಅಧ್ಯಕ್ಷರಾದ ಡಾ. ಉದಿತ್‌ರಾಜ್ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮತ್ತು ರಾಜ್ಯಾಧ್ಯಕ್ಷರಾದ ಜಿ.ಎಸ್.ಮಂಜುನಾಥ ಹಾಗೂ ಜಿಲ್ಲಾಧ್ಯಕ್ಷರಾದ ಪಿ.ವೆಂಕಟೇಶಲು ಅನಮೋದನೆ ಮೇರೆಗೆ ಸಣ್ಣಕ್ಕಿ ಜಂಗಪ್ಪ ವಿಜಯನಗರ ಜಿಲ್ಲೆಯ ಗೌರವಾಧ್ಯಕ್ಷರು, ಹೆಚ್.ಕಣಿಮೆಪ್ಪ ವಿಜಯನಗರ ಜಿಲ್ಲೆಯ ಉಪಾಧ್ಯಕ್ಷರಾಗಿ, ನಿಸಾರ್ ಅಹಮದ್.ಕೆ. ವಿಜಯನಗರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ, ಅಬ್ದುಲ್ ಗಫೂರ್, ತಿಪ್ಪೇಸ್ವಾಮಿ ಮಠದ ವಿಜಯನಗರ ಜಿಲ್ಲೆಯ ಕಾರ್ಯದರ್ಶಿಗಳಾಗಿ” ಹುದ್ದೆಗೆ ನೇಮಿಸಲಾಯಿತು. ಈ ತಕ್ಷಣ ಜವಾಬ್ದಾರಿಯನ್ನು ವಹಿಸಿಕೊಂಡು, ಜಿಲ್ಲೆ, ತಾಲೂಕು, ಗ್ರಾಮ ವ್ಯಾಪ್ತಿಯಲ್ಲಿ ಅಸಂಘಟಿತ ಕಾರ್ಮಿಕರನ್ನು ಸಂಘಟಿಸಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಈ ನೇಮಕಾತಿಯನ್ನು ಜಿಲ್ಲಾಧ್ಯಕ್ಷರಾದ ಪಿ.ವೆಂಕೇಶಲು ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಗುಜ್ಜಲ್ ಲಿಂಗಣ್ಣ ನಾಯಕ, ಜಿಲ್ಲಾಧ್ಯಕ್ಷರಾದ ಪಿ.ವೆಂಕಟೇಶಲು, ಸೋಮಣ್ಣ, ಉಲ್ಲೇಶ, ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ಭಾಗಿಯಾಗಿದ್ದರು.