ಬೆಂಗಳೂರು, ಏಪ್ರಿಲ್ 28,ರಾಜ್ಯದಲ್ಲಿ ಉಂಟಾಗಿರುವ ಕೊರೋನಾ ವೈರಸ್ ಆರೋಗ್ಯ ತುರ್ತು ಸಂದರ್ಭದಲ್ಲಿ ವೈದ್ಯಕೀಯ ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಂದ ಇಂಟರ್ನ್‍ಶಿಪ್ ತರಬೇತಿಗೆ ರಾಜ್ಯ ಸರ್ಕಾರ ಅರ್ಜಿ ಆಹ್ವಾನಿಸಿದೆ.ಕೊವಿಡ್ - 19 ನಿಂದ ಉಂಟಾಗಿರುವ ಸಮಸ್ಯೆ ಸವಾಲುಗಳನ್ನು ಎದರಿಸಲು ಸಾರ್ವಜನಿಕರಿಗೆ ಹಾಗೂ ಸರ್ಕಾರಕ್ಕೆ ಸಹಾಯವಾಗುವಂತೆ ದತ್ತಾಂಶಗಳ ವಿಶ್ಲೇಷಣೆ ಹಾಗೂ ಸಾಕ್ಷಾಧಾರ ನೀತಿ ನಿರೂಪಣೆಗಾಗಿ ಅವಶ್ಯವಿರುವ ಅಂಶಗಳನ್ನು ಪಡೆಯಲು ಇಂಟರ್ನ್‍ಶಿಪ್ ರೂಪದಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಂದ 3 ತಿಂಗಳ ಇಂಟರ್ನ್‍ಶಿಪ್ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ.
ಇಂಟರ್ನ್‍ಶಿಪ್ ಮಾಡುವ ಅಭ್ಯರ್ಥಿಗಳಿಗೆ ಯಾವುದೇ ಸಂಭಾವನೆ ಇರುವುದಿಲ್ಲ ಆದರೆ ಅಭ್ಯರ್ಥಿಗಳಿಗೆ ಉನ್ನತ ಮಟ್ಟದ ಸರ್ಕಾರಿ ಅಧಿಕಾರಿಗಳು, ಸಂಶೋಧಕರು ಹಾಗೂ ವಿದ್ವಾಂಸರ ಜೊತೆ ಕೆಲಸ ನಿರ್ವಹಿಸುವ ಅವಕಾಶ ದೊರೆಯಲಿದೆ. ಅಭ್ಯರ್ಥಿಗಳು ಅನ್‍ಲೈನ್ ಮೂಲಕ 3 ತಿಂಗಳ ವರೆಗೆ ಕೆಲಸ ಮಾಹಬಹುದಾಗಿದ್ದು, ಅಂತಹವರಿಗೆ ಸರ್ಕಾರದಿಂದ ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದ್ದಾರೆ. ಅಭ್ಯರ್ಥಿಗಳು ಒಂದು ವಾರದೊಳಗೆ http:evasindhu.karnataka.gov.in ವೆಬ್‍ಸೈಟ್‍ನಲ್ಲಿ ಹೆಚ್ಚಿನ ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.