ಲೋಕದರ್ಶನ ವರದಿ
ಗದಗ: ಗದಗ-ಬೆಟಗೇರಿ ನಗರದ ಮಧ್ಯ ಭಾಗದಲ್ಲಿರುವ ಸುಮಾರು ದಶಕಗಳ ಹಿಂದೆ ಅನೇಕ ಕೊಳಚೆ ಪ್ರದೇಶಗಳು ಸ್ಲಂ ಕಾಯ್ದೆ ಪ್ರಕಾರ ಅಧಿಕೈತವಾಗಿ ಘೋಷಣೆ ಮಾಡಲಾಗಿದೆ. ಇಂತಹ ಸ್ಲಂ ಪ್ರದೇಶಗಳಲ್ಲಿ ಕುಟುಂಬಗಳು ವಾಸಿಸುತ್ತಿರುವ ಜಾಗೆಯಲ್ಲಿ ಮನೆಗಳನ್ನು ನಿರ್ಮಿಸಿ ಕೊಡುವುದನ್ನು ಬಿಟ್ಟು ನಗರಸಭೆ ಪೌರಾಯುಕ್ತರು ರಾಜೀವ ಆವಾಜ್ ಯೋಜನೆಡಿಯಲ್ಲಿ ನಗರದ ಗಂಗಿಮಡಿ ಹತ್ತಿರ ನಿಮರ್ಿಸಲಾಗುತ್ತಿರುವ ವಸತಿ ಮನೆಗಳಿಗೆ ಘೋಷಿತ ಸ್ಲಂ ಪ್ರದೇಶಗಳನ್ನು ನಗರಸಭೆಯಿಂದ ಬಲವಂತದ ಸಮೀಕ್ಷೆ ನಡೆಸಲಾಗುತ್ತಿದ್ದು, ನಗರದ ಮಧ್ಯ ಭಾಗದಲ್ಲಿರುವ ಸ್ಲಂ ಪ್ರದೇಶದ ಸಾವಿರಾರು ಕುಟುಂಬಗಳಿಗೆ ಎತ್ತಂಗಡಿ ಮಾಡಲು ಪೌರಾಯುಕ್ತರು ಹುನ್ನಾರ ನಡೆಸುತ್ತಿದ್ದಾರೆ. ಕೂಡಲೇ ನಗರದ ಘೋಷಿತ ಸ್ಲಂ ಪ್ರದೇಶಗಳ ಸಮೀಕ್ಷೆ ಕೈಬಿಡಬೇಕೆಂದು ಆಗ್ರಹಿಸಿ ಸ್ಲಂ ಜನಾಂದೋಲನ ಕನರ್ಾಟಕ ಮತ್ತು ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣ ಸಮಿತಿಯ ನೂರಾರು ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಈ ಹಿಂದೆ ನಗರದಲ್ಲಿಯ ಅಘೋಷಿತ ಮತ್ತು ವಸತಿರಹಿತರ ಕುಟುಂಬಗಳ ಸಮೀಕ್ಷೆ ಮಾಡಿರುವ ಜಿಲ್ಲಾಡಳಿತ ಹಾಗೂ ನಗರಸಭೆ ಮೂದಲು ಅಂತಹ ಕುಟುಂಬಗಳಿಗೆ ವಸತಿ ಕಲ್ಪಿಸಲು ಆದ್ಯತೆ ನೀಡಬೇಕು. ಘೋಷಣೆಯಾಗಿರುವ ಕೊಳಚೆ ಪ್ರದೇಶಗಳಲ್ಲಿಯ ಮನೆಗಳನ್ನು ನಿಮರ್ಿಸಲು ಈಗಾಗಲೇ ಕನರ್ಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಪ್ರಸ್ತಾವನೆ ಸಕರ್ಾರಕ್ಕೆ ಸಲ್ಲಿಸಲಾಗಿದ್ದು. ಇದನ್ನು ಅರಿಯದ ನಗರಸಭೆ ಪೌರಾಯುಕ್ತರು ಉದ್ದೇಶ ಪೂರ್ವಕವಾಗಿ ಸುಮಾರು ದಶಕಗಳಿಂದ ಕೊಳಗೇರಿಗಳಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿರುವ ಸಾವಿರಾರು ಸ್ಲಂ ನಿವಾಸಿಗಳನ್ನು ಬಲವಂತವಾಗಿ ಎತ್ತಂಗಡಿ ಮಾಡಲು ಹುನ್ನಾರ ನಡೆಸುತ್ತಿರುವುದನ್ನು ಸ್ಲಂ ಸಮಿತಿ ಪದಾಧಿಕಾರಿಗಳು ಮನವಿಯ ಮೂಲಕ ಖಂಡಿಸಿದ್ದಾರೆ.
ಗದಗ-ಬೆಟಗೇರಿ ನಗರದಲ್ಲಿಯ ಘೋಷಿತವಾಗಿರುವ ಸ್ಲಂ ಪ್ರದೇಶಗಳ ಅಭಿವೃಧ್ದಿಯನ್ನು ಪಡಿಸಬೇಕಾದ ಪೌರಾಯುಕ್ತರು ಕೊಳಗೇರಿ ಜನರನ್ನು ಒಕ್ಕಲೆಬಸಲು ಪ್ರಯತ್ನ ನಡೆಸುತ್ತಿದ್ದಾರೆ, ಜಿಲ್ಲಾಧಿಕಾರಿಗಳು ಕೊಡಲೆ ಘೋಷಿತ ಸ್ಲಂ ಪ್ರದೇಶಗಳ ಸಮೀಕ್ಷೆಯನ್ನು ಕೈಬಿಡಲು ಪೌರಾಯುಕ್ತರಿಗೆ ಸೊಚಿಸಬೇಕು.
ಸ್ಲಂ ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಇಂತಹ ಪೌರಾಯುಕ್ತರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು, ನಗರದ ಎಲ್ಲಾ ಸ್ಲಂ ಪ್ರದೇಶದ ಕುಟುಂಬಗಳಿಗೆ ಫಾರ್ಮ ನಂ:3 ವಿತರಿಸಬೇಕು, 348 ವಸತಿರಹಿತ ಕುಟುಂಬಗಳಿಗೆ ಮೂದಲು ಆದ್ಯತೆ ನೀಡಿ ರಾಜೀವ ಆವಾಜ್ ಯೋಜನೆಡಿಯಲ್ಲಿ ನಿಮರ್ಿಸಲಾಗುತ್ತಿರುವ ಮನೆಗಳನ್ನು ಹಂಚಿಕೆ ಮಾಡಬೇಕು, ಸ್ಲಂ ಪ್ರದೇಶಗಳ ಸಮಸ್ಯ ಹಾಗೂ ಅಭಿವೃದ್ಧಿ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕುಂದು-ಕೊರತೆಗಳ ಸಭೆಯನ್ನು ಕರೆಯಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಒಂದು ವೇಳೆ ಸ್ಲಂ ಸಮಿತಿಯ ಬೇಡಿಕೆಗಳನ್ನು ಕಡೆಗಣಿಸಿದರೆ ನಗರಸಭೆಯ ಮುಂದೆ ಅನಿದರ್ಿಷ್ಟ ಧರಣಿ ಸತ್ಯಾಗ್ರಹ ನಡೆಸಲಾಗುವುದೆಂದು ಮನವಿಯ ಮೂಲಕ ಎಚ್ಚರಿಸಲಾಗಿದೆ. ಮನವಿ ನೀಡುವ ಸಂದರ್ಭದಲ್ಲಿ ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷರಾದ ಇಮ್ತಿಯಾಜ.ಆರ್.ಮಾನ್ವಿ, ಉಪಾಧ್ಯಕ್ಷ ರವಿಕುಮಾರ ಬೆಳಮಕರ, ಜಿಲ್ಲಾ ಸಮಿತಿ ಸದಸ್ಯರಾದ ಇಬ್ರಾಹಿಂ ಮುಲ್ಲಾ, ಅಬುಬಕರ ಮಕಾನದಾರ, ಪರವೀನಬಾನು ಹವಾಲ್ದಾರ, ಮಹಿಳಾ ಸಮಿತಿ ಸಂಚಾಲಕಿ ಮೆಹರುನಿಸಾ ಢಾಲಾಯತ, ಸಂಘಟನಾ ಸಂಚಾಲಕಿ ತಮನ್ನಾ ಧಾರವಾಡ, ಯುವ ಸಮಿತಿ ಸಂಚಾಲಕ ಉಸ್ಮಾನ ಚಿತ್ತಾಪೂರ, ಸಂಘಟನಾ ಸಂಚಾಲಕ ರಪೀಕ ಧಾರವಾಡ, ಮೆಹಬೂಬಸಾಬ ಗಚ್ಚಿ, ಮಮ್ತಾಜಬೇಗಂ ಮಕಾನದಾರ, ಮಲೇಶಪ್ಪ ಕಲಾಲ, ಮದರ್ಾನಬಿ ಬಳ್ಳಾರಿ, ಕಮಲವ್ವ ಚಲವಾದಿ, ಶರೀಫಾ ಕಣರ್ಾಚಿ, ಸಾಕ್ರುಬಾಯಿ ಗೋಸಾವಿ, ದಾದು ಗೋಸಾವಿ ಹಾಗೂ ಗದಗ-ಬೆಟಗೇರಿ ನಗರದ ನೂರಾರು ಸ್ಲಂ ನಿವಾಸಿಗಳು ಉಪಸ್ಥಿತರಿದ್ದರು.