ಶಿರಹಟ್ಟಿ ಪಟ್ಟಣದ ಬೀದಿ ದೀಪ, ಇಂದಿರಾ ಕ್ಯಾಂಟೀನ್ ಪ್ರಾರಂಭಿಸುವ ಕುರಿತು ಮನವಿ

ಲೋಕದರ್ಶನ ವರದಿ

ಶಿರಹಟ್ಟಿ 18: ಪಟ್ಟಣದ ಬಹು ತಿಂಗಳಗಳಿಂದ ಬೀದಿ ದೀಪಗಳು ಹತ್ತಲಾರದೇ ಕತ್ತಲಲ್ಲಿ ಓಡಾಡುವ ಪರಿಸ್ಥಿತಿ ನಿಮರ್ಾಣವಾಗಿದೆ. ಪಟ್ಟಣದ ಮಾಗಡಿ ರಸ್ತೆ ಮತ್ತು ಛಬ್ಬಿ ರಸ್ತೆಗಳಲ್ಲಿನ ಡಿವೈಡರಲ್ಲಿ ಹಾಕಲಾಗಿರುವ ಹೈ ಮಾಸ್ಕ  ಮತ್ತು ವೃತ್ತದಲ್ಲಿರುವ ಹೈಮಾಸ್ಕಗಳು ಹತ್ತದೇ ಇರುವುದರಿಂದ ಪಟ್ಟಣದ ಸಂಪೂಣರ್್ ಕತ್ತಲಲ್ಲಿ ಅಡಗಿದೆ. ಈ ಬಗ್ಗೆ ಪಪಂ ಮುಖ್ಯಾಧಿಕಾರಿಗಳ ಗಮನಕ್ಕೆ ತಂದರೂ ಸಹಿತವಾಗಿ ಯಾವುದೇ ಪ್ರಯೋಜನವಾಗಿಲ್ಲ ಎಂದು ಖಂಡಿಸಿ ತಹಶೀಲ್ದಾರವರರಿಗೆ ಮನವಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟ ಬಣ) ಸಲ್ಲಿಸಿದರು. 

ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸರ್ವ ಸದಸ್ಯರು ಪಟ್ಟಣದಲ್ಲಿ ಬೀದಿ ದೀಪಗಳು ಮತ್ತು ಇಂದಿರಾ ಕ್ಯಾಂಟೀನ್ ಆರಂಭಿಸುವಂತೆ ಒತ್ತಾಯಿಸಿ ತಹಶೀಲ್ದಾರ ಇವರಿಗೆ ಮನವಿ ಸಲ್ಲಿಸಿದರು. 

ಈ ಕುರಿತು ಕರವೇ ತಾಲೂಕಾಧ್ಯಕ್ಷ ರಫಿಕ ಕೆರಿಮನಿ ಮಾತನಾಡಿ, ಪಟ್ಟಣದಲ್ಲಿ ಮಾಗಡಿ ರಸ್ತೆ ಮತ್ತು ಛಬ್ಬಿ ರಸ್ತೆಗಳಲ್ಲಿನ ಡಿವೈಡರಗಳಲ್ಲಿ ನಿರ್ಮಾಣವಾಗಿರುವ ಬೀದಿ ದೀಪಗಳು ಹತ್ತದೇ ಸುಮಾರು ತಿಂಗಳಗಳೆ ಆಗಿದೆ. ಪಪಂ ಮುಖ್ಯಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮತ್ತು ಗಮನಕ್ಕೆ  ತಂದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ. ಜೊತೆಗೆ ಪಟ್ಟಣ ತಾಲೂಕಾ ಕೇಂದ್ರ ವಾಗಿರುವುದರಿಂದ  ದಿನನಿತ್ಯ ಸಾವಿರಾರು ಬಡವರುಕಚೇರಿ ಯ ಕೆಲಸಕ್ಕಾಗಿ ಆಗಮಿಸಿರುತ್ತಾರೆ. ಅವರಿಗೆ ಕಡಿಮೆ ಖಚರ್ಿನಲ್ಲಿ ಉಪಾಹಾರ ಮತ್ತು ಊಟಕ್ಕೆ ಅನುಕೂಲ ವಾಗಲು ರಾಜ್ಯ ಸರಕಾರ ಇಂದಿರಾ ಕ್ಯಾಂಟೀನ್ ನಿಮರ್ಿಸಿದೆ. ಆದರೆ ಈವರೆಗೆ ಆರಂಭವಾಗದೇ ಇರುವುದು ದುದರ್ೈವದ ಸಂಗತಿಯಾಗಿದೆ. ಈ ಎರೆಡು ಬೇಡಿಕೆಗಳು ಬೇಗನೆ ಈಡೇರದೇ ಹೋದರೆ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು. 

ಕಾರ್ಯಕ್ರಮದಲ್ಲಿ ಕರವೇ ಕಾಯರ್ಾಧ್ಯಕ್ಷ ಶ್ರೀನಿವಾಸ ಭಂಡಾರಿ, ದೇವಪ್ಪ ಬಟ್ಟೂರ, ನೂರಹುಸೇನ ಕಾರಬೂದಿ, ದಾದಾಫೀರ ಮುಳಗುಂದ, ಖಾದರ ಟಪಾಲ್, ಚಾಂದ ಕವಲೂರ, ಶಹರಾಬಾನು ಒಂಟಿ, ಕಲಾವತಿ ನಾವ್ಹಿ, ಯೋಗಿತಾ ದೇಸಾಯಿಪಟ್ಟಿ, ವಿಜಯಲಕ್ಷ್ಮೀ ತಳವಾರ, ಶೋಭಾ ಬಳಿಗೇರ, ರೇಖಾ ಮುಧೋಳಕರ,  ವೀಣಾ ಮುಧೋಳಕರ, ಲಕ್ಷ್ಮೀಬಾಯಿ ಮುಧೋಳಕರ, ಶೋಭಾ ದೊಡ್ಡೂರ ಮುಂತಾದವರು ಉಪಸ್ಥಿತರಿದ್ದರು.