ಪ್ರೇರಣಾ ಪ್ರಿ ಪ್ರೈಮರಿ ಶಾಲೆಯ ವಾರ್ಷಿಕೋತ್ಸವ

Anniversary of Prerana Pre Primary School

ಪ್ರೇರಣಾ ಪ್ರಿ ಪ್ರೈಮರಿ ಶಾಲೆಯ ವಾರ್ಷಿಕೋತ್ಸವ 

ನೇಸರಗಿ, 05; ಹೆಚ್ಚಿನ ಅಂಕ ಗಳಿಸಲು ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚಿನ ನಿಗಾ ವಹಿಸಬೇಕೆಂದು ನೇಸರಗಿ ವೃತ್ತ ಶಿಕ್ಷಣ ಇಲಾಖೆ ಸಿಆರ್‌ಪಿ ಸಿದ್ದನಗೌಡ ಪಾಟೀಲ ಹೇಳಿದರು. ಗ್ರಾಮದ ಪ್ರೇರಣಾ ಪ್ರಿ ಪ್ರೈಮರಿ ಶಾಲೆಯ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಮಹಾತ್ಮರ ಜೀವನ ಚರಿತ್ರೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವದರಿಂದ ಒಳ್ಳೆಯ ವ್ಯಕ್ತಿಗಳಾಗಬೇಕೆಂದರು. ಪ್ರೇರಣಾ ಶಾಲೆಯ ಸಿಇಓ ಗೀರೀಶ ಚಿನ್ನಪ್ಪಗೌಡರ ಮಾತನಾಡಿ, ನಮ್ಮ ಹಿಂದಿನ ಹಿರಿಯರು ನಮಗೆ ಆದರ್ಶವಾದಿಗಳಾಗಬೇಕು. ಅವರಿಗೆ ಗೌರವ ಕೊಡುವ ಮೂಲಕ ಅವರ ಜೀವನ ಉತ್ತಮವಾಗಿರಲು ಶ್ರಮಿಸುವುದು ಉತ್ತಮ ವಿದ್ಯಾರ್ಥಿಗಳ ಲಕ್ಷಣವಾಗಿದೆ ಎಂದರು. ಸಾಹಿತಿ ಸಿ.ವೈ.ಮೆಣಸಿನಕಾಯಿ ಮಾತನಾಡಿ, ಸತತ ಅಧ್ಯಯನ, ಮಹಾತ್ಮರ ವ್ಯಕ್ತಿತ್ವ ಅನುಕರಣೆ, ಉತ್ತಮ ಆರೋಗ್ಯ ಕಾಪಾಡುವದರೊಂದಿಗೆ ಉತ್ತಮ ವಿದ್ಯಾರ್ಥಿಗಳಾಗಬಹುದೆಂದರು. ಕಾರ್ಯಕ್ರಮದಲ್ಲಿ ಪ್ರೇರಣಾ ಶಾಲೆಯ ಸಂಚಾಲಕ ಮಹೇಶ ಕಲಕುಟಕರ, ಮುಖ್ಯೋಪಾದ್ಯಾಯಿನಿ ಸುಜಾತಾ ಹೊಸಮನಿ, ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಇದ್ದರು.