ಗದಗ 25: ಸಿ.ಎಸ್.ಪಾಟೀಲ್ ಬಾಲಕೀಯರ ಪ್ರೌಢಶಾಲೆ ಗದಗದಲ್ಲಿ ದಿ. 25ರಂದು ಏರ್ಪಡಿಸಿದ ರಾಷ್ಟ್ರೀಯ ಜಂತುಹುಳ ನಿವಾರಣಾ ದಿನದ ಉದ್ಘಾಟನೆ
ಆರೋಗ್ಯ ಇಲಾಖೆಯಲ್ಲಿ ಇರುವ ಕಾರ್ಯಕ್ರಮಗಳ ಸದುಪಯೋಗವನ್ನು ಪಡೆದುಕೊಳ್ಳಲು ಭಾಗವಹಿಸಿದ ಎಲ್ಲಾ ಶಾಲಾ ಮಕ್ಕಳನ್ನು ಉದ್ದೇಶಿಸಿ ಅಧ್ಯಕ್ಷತೆಯನ್ನು ವಹಿಸಿದ ವೀರನಗೌಡಾ ಪಾಟೀಲ ಕಾರ್ಯದರ್ಶಿ ಗಳು ವಿದ್ಯಾವರ್ಧಕ ಸಂಸ್ಥೆ ಗದಗ ಇವರು ಮಾತನಾಡುತ್ತಾ ಹೇಳಿದರು.
ಇಂದು ದೇಶದಾದ್ಯಂತ 1ರಿಂದ 19 ವರ್ಷದ ಒಳಗಿನ ಎಲ್ಲ ಮಕ್ಕಳಿಗೆ ಶಾಲೆ ಮತ್ತು ಅಂಗನವಾಡಿಗಳಲ್ಲಿ ಜಂತುಹುಳು ನಿವಾರಣಾ ಮಾತ್ರೆಯನ್ನು ನೀಡಲಾಗುವುದು. ಈ ಉಪಯೋಗವನ್ನು ಎಲ್ಲರು ಪಡೆದುಕೊಂಡು ಮಕ್ಕಳಲ್ಲಿ ಕಂಡುಬರುವ ರಕ್ತಹೀನತೆ ಮತ್ತು ಅಪೌಷ್ಠಿಕತೆಯನ್ನು ತಡೆಗಟ್ಟಿ ಆರೋಗ್ಯವಂತರನ್ನಾಗಿಸಲು ಕರೆನೀಡಿದರು.
ರಾಜ್ಯದಿಂದ ಆಗಮಿಸಿದ ಗದಗ ನೂಡಲ್ ಅಧಿಕಾರಿಗಳಾದ ಡಾ. ಪದ್ಮಾ ಎಮ್.ಆರ್ ಇವರು ಉಧ್ಘಾಟನೆಯನ್ನು ನೇರವೆರಿಸಿ ಮಾತನಾಡುತ್ತಾ ಜಂತುಹುಳು ಭಾದೆಯಿಂದ ಮಕ್ಕಳಲ್ಲಿ ಸುಸ್ತು, ನಿಶಕ್ತಿ ಹಾಗೂ ಇನ್ನಿತರ ಆರೋಗ್ಯ ಸಮಸ್ಯೆಗಳು ಕಂಡುಬರುವದರಿಂದ ಬೆಳವಣಿಗೆ ಕುಂಟಿತವಾಗುತ್ತದೆ ಆದ್ದರಿಂದ ಅಲ್ಬೆಂಡಿಜಾಲ್ ಮಾತ್ರೆಯನ್ನು ಎಲ್ಲಾ ಮಕ್ಕಳು ತೆಗೆದುಕೊಳ್ಳಲು ತಿಳಿಸಿದರು.
ಡಾ. ಬಿ.ಎಮ್.ಗೊಜನೂರ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳು ಪ್ರಸ್ಥಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಪ್ರಮುಖ್ಯತೆ ಬಗ್ಗೆ ತಿಳಿಸಿದರು. ಇಂದು ಗದಗ ಜಿಲ್ಲೆಯಾದ್ಯಂತ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿರುವ 1ರಿಂದ 19ವರ್ಷದೊಳಗಿನ 367412 ಮಕ್ಕಳಿಗೆ ಅಲ್ಬೆಂಡಿಜಾಲ್ ಮಾತ್ರೆಯನ್ನು ಆಶಾ ಕಾರ್ಯಕತರ್ೆಯರು, ಅಂಗನವಾಡಿ ಕಾರ್ಯಕತರ್ೆಯರು ಹಾಗೂ ಆರೋಗ್ಯ ಸಿಬ್ಬಂದಿಯವರಿಂದ ನೀಡಲಾಗುತ್ತಿದೆ. ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ದಿ. 30ರಂದು ಮಾಫ್ ಅಫ್ ದಿನದಂದು ನೀಡಲಾಗುತ್ತಿದೆ ಎಂದು ತಿಳಿಸಿದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ ಎಸ್.ಎಸ್.ಕೆಳದಿಮಠ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಹರವಲಯ ಗದಗ, ಶಿಡಿ.ಐ.ಅಸುಂಡಿ ಶಿಕ್ಷಣಾಧಿಕಾರಿಗಳು ಬಿಸಿಊಟ ಜಿಲ್ಲಾ ಪಂಚಾಯತ ಗದಗ, ಕೆ.ವಾಯ್.ವಿಭೂತಿ ಸಹಾಯಕ ನಿದರ್ೇಶಕರು ತಾಲೂಕಾ ಪಂಚಾಯತ ಗದಗ, ಡಾ. ಎಸ್.ಎಸ್. ನೀಲಗುಂದ ತಾಲೂಕಾ ಆರೋಗ್ಯಾಧಿಕಾರಿಗಳು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಶಾಲಾ ಮಕ್ಕಳು ಪ್ರಾರ್ಥನೆಯನ್ನು ಮಾಡಿದರು ಎನ್.ವಿ.ಜೋಶಿ ಮುಖ್ಯಾಧ್ಯಾಪಕರು ಸಿ.ಎಸ್.ಪಾಟೀಲ್ ಬಾಲಕೀಯರ ಪ್ರೌಢಶಾಲೆ ಗದಗ ಇವರು ಸ್ವಾಗತಿಸಿದರು ಕೆ.ಆಯ್ ಪಾಟೀಲ್ ಶಿಕ್ಷಕರು ವಂದಿಸಿದರು. ಪದ್ಮಾವತಿ ಚಿಲ್ಲಾಳ ನಿರೂಪಿಸಿದರು ಸಭೆಯಲ್ಲಿ ಹೆಚ್.ಬಿ.ಗದಿಗೆಣ್ಣವರ, ಶಿವಕುಮಾರ ಹೂಗಾರ, ಡಾ. ಪ್ರೇಮಾ ಎಫ್ ಭಾಬಣ್ಣವರ, ಡಾ. ಗೀತಾ ಧನಗರ, ಡಾ. ಶ್ರವಣಕುಮಾರ ಬೀರಾದಾರ, ಡಾ. ಚಂದ್ರಯ್ಯಾ ಹೊಸಮಠ, ಡಾ. ಮಂಜುನಾಥ ಮರಿಗೌಡರ, ಡಾ. ಮಹೇಶ ಹೂಗಾರ ಮಂಜುನಾಥ ತಳವಾರ, ಎಸ್.ಸಿ.ಕರಡಿಗುಡ್ಡ, ಡಿ.ಡಿ.ಚವಡಿ, ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.