ಡಿಕೆಶಿ ಯಿಂದ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ; ಸಚಿವ ಬೈರತಿ ಬಸವರಾಜ್

ಚಿತ್ರದುರ್ಗ, ಏ 27,ಬಡವವರಿಗೆ ವಿತರಿಸಲು ಹಂಚಿಕೆ ಮಾಡಿರುವ ಪಡಿತರ ಅಕ್ಕಿಯನ್ನು ಮಾರಾಟ ಮಾಡಲಾಗಿದೆ ಎಂದು ಪ್ರದೇಶ ಕಾಂಗ್ರೆಸ್  ಅಧ್ಯಕ್ಷ ಡಿ.ಕೆ.ಶಿವಕುಮಾರ್  ಅವರು   ಮಾಡಿರುವ  ಆರೋಪವನ್ನು  ತೀವ್ರವಾಗಿ ಆಕ್ಷೇಪಿಸಿರುವ   ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜ್,    ಬಡವರಿಗೆ ವಿತರಿಸಲು  ಹಂಚಿಕೆ ಮಾಡಿರುವ  ಅಕ್ಕಿಯನ್ನು  ಮಾರಾಟ ಮಾಡಬಹುದೇ  ಎಂಬುದುನ್ನು   ಸರ್ಕಾರ  ಊಹಿಸುವುದೂ  ಸಾಧ್ಯವಿಲ್ಲ   ಎಂದು ಸೋಮವಾರ ಹೇಳಿದ್ದಾರೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು,   ಸಂಕಷ್ಟ ಸಮಯದಲ್ಲಿ  ರಾಜ್ಯದ   ಬಡವರಿಗೆ ಆಹಾರ ಧಾನ್ಯ ಪೂರೈಸಲು   ರಾಜ್ಯ ಸರ್ಕಾರ  ಅತ್ಯಂತ ಪ್ರಾಮಾಣಿಕವಾಗಿ  ಕಾರ್ಯನಿರ್ವಹಿಸುತ್ತಿದೆ ಎಂದು ಬಲವಾಗಿ ಸಮರ್ಥಿಸಿಕೊಂಡರು.
ಪ್ರದೇಶ ಕಾಂಗ್ರೆಸ್  ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ   ಹೆಚ್.ಡಿ.ಕುಮಾರಸ್ವಾಮಿ. ರಾಜ್ಯ ಬಿಜೆಪಿ  ಸರ್ಕಾರ  ಆಡಳಿತದಲ್ಲಿ  ಸದಾ ಮೊಸರಲ್ಲಿ  ಕಲ್ಲು ಹುಡುಕುವ ವ್ಯರ್ಥ ಪ್ರಯತ್ನ ನಡೆಸುತ್ತಿದ್ದಾರೆ,  ಇಂತಹ ಆರೋಪಗಳನ್ನು ಡಿ.ಕೆ. ಶಿವಕುಮಾರ್ ಅವರಂತಹ ನಾಯಕರಿಂದ  ನಾನು    ನಿರೀಕ್ಷಿಸಿರಲಿಲ್ಲ ಎಂದರು ಪಾದರಾಯನ ಪುರದಲ್ಲಿ ವಶಕ್ಕೆ ಪಡೆದವರನ್ನು.  ರಾಮನಗರ ಜೈಲಿಗೆ  ಸ್ಥಳಾಂತರಿಸಿದ  ಪ್ರಶ್ನೆಗೆ ಉತ್ತರಿಸಿದ  ಸಚಿವ  ಬೈರತಿ ಬಸವರಾಜ,  ಬಂಧಿಗಳ ವರ್ಗಾವಣೆ  ಸುರಕ್ಷತಾ ಕ್ರಮಗಳನ್ನು ಆಧರಿಸಿ ಕೈಗೊಳ್ಳಲಾಗಿತ್ತು. ರಾಮನಗರದಲ್ಲಿ ಅಶಾಂತಿ ಸೃಷ್ಟಿಸಬೇಕೆಂಬ ಯಾವುದೇ ಉದ್ದೇಶ ಸರ್ಕಾರಕ್ಕೆ ಇರಲಿಲ್ಲ  ಎಂದು ಸಮರ್ಥಿಸಿಕೊಂಡರು.