ಅಂಬೇಡ್ಕರ್ ಜಯಂತ್ಯೋತ್ಸವ: ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ

Ambedkar Jayanti: Free bags distributed to children

ಲೋಕದರ್ಶನ ವರದಿ 

ಅಂಬೇಡ್ಕರ್ ಜಯಂತ್ಯೋತ್ಸವ: ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ  

ಕಂಪ್ಲಿ 14: ಸ್ಥಳೀಯ 22ನೇ ವಾರ್ಡಿನ ಎಂಡಿಕ್ಯಾಂಪಿನಲ್ಲಿ ಜೈ ಭೀಮ್ ಜನ ಶಕ್ತಿ ಸಂಘಟನೆಯಿಂದ 134ನೇ ಅಂಬೇಡ್ಕರ್ ಜಯಂತ್ಯೋತ್ಸವ ಅಂಗವಾಗಿ ಶಾಸಕ ಜೆ.ಎನ್‌.ಗಣೇಶ ಅವರ ಸುಪುತ್ರ ಗೋಕುಲ ನಾಯಕ ನೇತೃತ್ವದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್‌ಗಳನ್ನು ಸೋಮವಾರ ವಿತರಿಸಿದರು. ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಪುಷ್ಪ ಅರ​‍್ಿಸಿದ ನಂತರ ಮಾತನಾಡಿ, ಅಂಬೇಡ್ಕರ್ ಕೊಡುಗೆ ಬಹಳಷ್ಟಿದ್ದು, ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು, ದೇಶದ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದರು. ಜೈ ಭೀಮ್ ಜನ ಶಕ್ತಿ ಸಂಘಟನೆ ಅಧ್ಯಕ್ಷ ಎನ್‌.ಗಂಗಣ್ಣ ಮಾತನಾಡಿ, ಅಂಬೇಡ್ಕರ್ ಅವರ ಹಾದಿಯಲ್ಲಿ ನಡೆಯಬೇಕು. ಮಕ್ಕಳಿಗೆ ಶಿಕ್ಷಣ ನೀಡಬೇಕು. ಸೂರ್ಯಹಿಚಂದ್ರ ಇರುವವರೆಗೂ ಅಂಬೇಡ್ಕರ್ ಅವರ ಸಿದ್ಧಾಂತ ಮತ್ತು ವಿಚಾರಗಳು ಜೀವಂತವಾಗಿ ಇರುತ್ತವೆ. ಅವರ ಆಸೆಯದಂತೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದರು. ಪುರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ರಾಮಣ್ಣ ಮಾತನಾಡಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಕೆ.ಎಸ್‌.ಚಾಂದ್ ಬಾಷಾ, ವೀರಾಂಜನೇಯ, ಟಿ.ವಿ.ಸುದರ್ಶನರೆಡ್ಡಿ, ಸ.ಕಿ.ಪ್ರಾ.ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಕಾಳಿಂಗ, ಶಿಕ್ಷಕಿಯರಾದ ಸರಸ್ವತಿ, ಲತಾ, ನಿರ್ಮಿಲ, ಜೈ ಭೀಮ್ ಜನ ಶಕ್ತಿ ಸಂಘಟನೆ ಉಪಾಧ್ಯಕ್ಷ ಬಿ.ಕೆ.ವಿರುಪಾಕ್ಷಿ, ಮುಖಂಡರಾದ ಬಿ.ಸಿದ್ದಪ್ಪ, ಬ್ರಹ್ಮಯ್ಯ, ಸುಧಕರ, ಬಿ.ಕೆ.ವಿರುಪಾಕ್ಷಿ, ಕೊಟ್ಟೂರು ರಮೇಶ, ಶೇಖರ, ಪ್ರಸಾದ್, ಹುಲುಗಪ್ಪ, ಯಲ್ಲಪ್ಪ, ಪಿ.ರಾಜ, ಶಶಿಕುಮಾರ ಸೇರಿದಂತೆ ಅನೇಕರಿದ್ದರು. ಅಂಬೇಡ್ಕರ್ ವೃತ್ತ: ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ಅಸ್ಪೃಶ್ಯರ ವಿಮೋಚನೆ ಸಮಿತಿಯಿಂದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತ್ಯೋತ್ಸವ ವಿಜೃಂಭಣೆಯಿಂದ ಆಚರಿಸಿದರು. ಈ ಸಂದರ್ಭದಲ್ಲಿ ಸಮಿತಿ ರಾಜ್ಯ ಉಪಾಧ್ಯಕ್ಷ ಕೆ.ಲಕ್ಷ್ಮಣ, ಜಿಲ್ಲಾಧ್ಯಕ್ಷ ಎನ್‌.ಬುಜ್ಜಿಕುಮಾರ ಸೇರಿದಂತೆ ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.