ಕೂಲಿಕಾರರಿಗೆ ಕಳೆದ ಮೂರು ತಿಂಗಳಿಂದ ಕೂಲಿ ಹಣವನ್ನು ಸರ್ಕಾರ ಪಾವತಿಸಿಲ್ಲವೆಂದು ಆರೋಪ
ಬ್ಯಾಡಗಿ 24: ತಾಲೂಕಿನಲ್ಲಿ ಎಂಜಿ.ಎನ್ ಆರಿ್ಜ ಕಾಮಗಾರಿಗಳಲ್ಲಿ ತೊಡಗಿಕೊಂಡಂತಹ ಕೂಲಿಕಾರರಿಗೆ ಕಳೆದ ಮೂರು ತಿಂಗಳಿಂದ ಕೂಲಿ ಹಣವನ್ನು ಸರ್ಕಾರ ಪಾವತಿಸಿಲ್ಲವೆಂದು ಆರೋಪಿಸಿ ತಾಲೂಕಿನ ಎಂಜಿ.ಎನ್ ಆರ್ ಜಿ ಯ ನೂರಾರು ಕೂಲಿ ಕಾರ್ಮಿಕರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಸಾಮಾನ್ಯ ಅಂಚೆ ಪತ್ರಗಳನ್ನು ಬರೆದು ಅಂಚೆ ಡಬ್ಬಕ್ಕೆ ಹಾಕುವ ಮೂಲಕ ಮನವಿ ಮಾಡಿಕೊಂಡು ಒತ್ತಾಯಿಸಿದ್ದಾರೆ.ಮೂರು ತಿಂಗಳಿಂದ ಕೂಲಿಗಾರರಿಗೆ ಹಣ ಪಾವತಿಯಾಗದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನರು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಇದರ ಪರಿಣಾಮ,
ಮನರೇಗಾ ಕಾಮಗಾರಿಗಳಲ್ಲಿ ಭಾಗಿಯಾಗಲು ಕೂಲಿಕಾರರು ಹಿಂದೇಟು ಹಾಕುತ್ತಿದ್ದಾರೆ.ಆದರೆ, ಸಮರ್ಕವಾಗಿ ಕೂಲಿ ಹಣ ಬರದ ಹಿನ್ನೆಲೆಯಲ್ಲಿ ಜನರು ಮನರೇಗಾ ಕಾಮಗಾರಿಗಳಿಂದ ದೂರ ಉಳಿಯುತ್ತಿದ್ದಾರೆ.ಮನರೇಗಾ ಕಾಮಗಾರಿಗಳಲ್ಲಿ60:40 ಅನುಪಾತವನ್ನು ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ಅದರಂತೆ 100 ರೂಪಾಯಿಯಲ್ಲಿ ಶೇ.60 ರಷ್ಟು ಕೂಲಿಕಾರರಿಗೆ ಪಾವತಿಸಿದರೆ, ಶೇ.40 ರಷ್ಟನ್ನು ಸಾಮಗ್ರಿಗಳ ಖರೀದಿಗೆ ಬಳಸಬೇಕೆಂಬ ಕೇಂದ್ರ ಸರಕಾರದ ಆದೇಶವಿದೆ. ಆದರೆ, ಈ ಬಾರಿ ರಾಜ್ಯದ ಒಟ್ಟಾರೆ ಅನುಪಾತವನ್ನು ಗಮನಿಸಿದಾಗ ಶೇ.68ರಷ್ಟನ್ನು ಕೂಲಿಕಾರರಿಗಾಗಿ ಹಾಗೂ ಶೇ.32ರಷ್ಟನ್ನು ಸಾಮಗ್ರಿ ಬಿಲ್‌ಗೆ ಮೀಸಲಿಟ್ಟಿರುವುದು ಉತ್ತಮ ಬೆಳವಣಿಗೆ. ಆದರೆ, ಮೂರು ತಿಂಗಳಿಂದ ಕೂಲಿಗಾರರಿಗೆ ಹಣ ಪಾವತಿಯಾಗದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಜನರು ತೊಂದರೆ ಅನುಭವಿಸುವಂತಾಗಿದೆ. ಅಲ್ಲಲ್ಲಿ ಕೂಲಿಕಾರ್ಮಿಕರು ಸಾಲ ಮಾಡಿಕೊಂಡು ಸಾಲದ ಸುಳಿಯಲ್ಲಿ ಸಿಲುಕಿಸಾಲದ ಒತ್ತಡದಲ್ಲಿ ಒದ್ದಾಡುತ್ತಿದ್ದಾರೆ. ಆದ್ದರಿಂದ ಅಧಿಕಾರಿಗಳು ಏನೇನೂ ಸಬೂಬು ಹೇಳದೇ ಕೂಡಲೇ ಕೂಲಿ ಹಣ ಬಿಡುಗಡೆ ಮಾಡುವಂತೆ ಕಿಡಿ ಕಾರಿದ್ದಾರೆ.ನರೇಗಾ ಕೆಲಸ ಹಳ್ಳಿ ಕೂಲಿಕಾರ್ಮಿಕರ ಬದುಕಿಗೆ ಆಸರೆಯಾಗಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಮಗೆ ಬಹಳ ತೊಂದರೆಯಾಗಿದೆ. ಗ್ರಾಮೀಣ ಭಾಗದಲ್ಲಿ ಹಣವಿಲ್ಲದಿದ್ದರೇ ಹೊಟ್ಟೆಗೆ ಹಿಟ್ಟು ಹುಟ್ಟುವುದು ತೊಂದರೆಯಾಗಿದೆ.ಆದ್ದರಿಂದ ಮಾನ್ಯ ಪ್ರಧಾನ ಮಂತ್ರಿಗಳು ನಮ್ಮ ತಡೆ ಹಿಡಿದಿರುವ ಎಂಜಿ.ಎನ್ ಆರ್ ಜಿ ಕೂಲಿ ಕಾರ್ಮಿಕರ ಹಣವನ್ನು ಈ ಕೂಡಲೇ ಬಿಡುಗಡೆ ಗೊಳಿಸಿ ಬಡವರ ಬದುಕಿನ ಆಸಾ ಕಿರಣವಾಗುವಂತೆ ಮನವಿ ಮಾಡಿಕೊಂಡು ಆಗ್ರಹಿಸಿದ್ದಾರೆ.