ಅನುದಾನದಡಿ ರೂ.12ಲಕ್ಷ ವೆಚ್ಚದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಒದಗಿಸಿದ : ಶ್ರೀನಿವಾಸ ಮಾನೆ
ಹಾನಗಲ್ 26: ತಮ್ಮ ಅನುದಾನದಡಿ ರೂ.12ಲಕ್ಷ ವೆಚ್ಚದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಒದಗಿಸಿದ ನೂತನ ವಾಹನಕ್ಕೆ ಶಾಸಕ ಶ್ರೀನಿವಾಸ ಮಾನೆ ಹಸಿರು ನಿಶಾನೆ ತೋರಿದರು.
ಹಾನಗಲ್ ಪೊಲೀಸ್ ಠಾಣೆಗೆ ಕಳೆದ ಕೆಲ ತಿಂಗಳಿನಿಂದ ವಾಹನ ಇಲ್ಲದೇ ತುರ್ತು ಸಂದರ್ಭದಲ್ಲಿ ಸಮಸ್ಯೆ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ನೂತನ ವಾಹನ ಒದಗಿಸಲಾಗಿದೆ. ಶಾಂತಿ, ಸುವ್ಯವಸ್ಥೆ ಕಾಪಾಡಲು ಶ್ರಮಿಸುವ ಪೊಲೀಸರ ಸಮಸ್ಯೆಗಳಿಗೂ ಪ್ರಾಮಾಣಿಕವಾಗಿ ಸ್ಪಂದಿಸಲಾಗಿದ್ದು, ಅಗತ್ಯ ಸೌಲಭ್ಯ ದೊರಕಿಸಲಾಗಿದೆ. ಜನಸ್ನೇಹಿಯಾಗಿ ಪೊಲೀಸರು ಕರ್ತವ್ಯ ನಿರ್ವಹಿಸಲಿ. ಪೊಲೀಸರೆಂದರೆ ಭಯ ಅಲ್ಲ ಭರವಸೆ ಮೂಡಲಿ ಎಂದು ಇದೇ ಸಂದರ್ಭದಲ್ಲಿ ಶಾಸಕ ಮಾನೆ ಹೇಳಿದರು.
ಸಂದರ್ಭದಲ್ಲಿ ಶಿಗ್ಗಾಂವಿ ಡಿವೈಎಸ್ಪಿ ಗುರುಶಾಂತಪ್ಪ, ಸಿಪಿಐ ಆಂಜನೇಯ ಎನ್.ಎಚ್,ಪಿ.ಎಸ್.ಐ. ಸಂಪತ್ ಆನಿಕಿವಿ, ಪುರಸಭೆ ಸದಸ್ಯ ನಾಗಪ್ಪ ಸದವತ್ತಿ, ಮುಖಂಡರಾದ ಆದರ್ಶ ಶೆಟ್ಟಿ, ರಾಜು ಗುಡಿ, ನಿವೃತ್ತ ಶಿಕ್ಷಕ ಕೆ.ಎಲ್.ದೇಶಪಾಂಡೆ,ತಾಪಂ ಮಾಜಿಸದಸ್ಯ ರಾಮಣ್ಣ ಶೇಷಗಿರಿ ಸೇರಿದಂತೆ ಅನೇಕರಿದ್ದರು.