ಕೊಪ್ಪಳ 19: ಸರ್ವ ಧರ್ಮವನ್ನು ಸಮಾನವಾಗಿ ಕಾಣಿ ಮತ್ತು ಸಮಾನವಾಗಿ ಪ್ರೀತಿಸಿ ಎಂದು ಸಾರಿದ ಕೀತರ್ಿ ವೇಮನರದ್ದಾಗಿ ಎಂದು ಕೊಪ್ಪಳ ಜಿಲ್ಲಾ ಪಂಚಾಯತ ಅಧ್ಯಕ್ಷ ಹೆಚ್. ವಿಶ್ವನಾಥರೆಡ್ಡಿ ಅವರು ಹೇಳಿದರು.
ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಕಿನ್ನಾಳ ರಸ್ತೆಯ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಶನಿವಾರದಂದು ಆಯೋಜಿಸದ ಮಹಾಯೋಗಿ ವೇಮನ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿನ ಅಂಕು-ಡೊಂಕು ವ್ಯವಸ್ಥೆಯನ್ನು ತಿಂದ್ದುವಂತಹ ಪ್ರಯತ್ನ ಮತ್ತು ಅಂತಹ ವ್ಯವಸ್ಥೆಗಳ ವಿರುದ್ಧ ಕಟೋರವಾಗಿ ಪ್ರತಿಭಟಿಸಿದ ಮಹಾಯೋಗಿ ವೇಮನರ ಸ್ವಭಾವವು ವಿಶೇಷವಾಗಿದೆ. ಆರಂಭದಲ್ಲಿ ದುಷ್ಚಟಗಳಿಗೆ ಬಲಿಯಾಗಿದ್ದ ವೇಮನರು ಸ್ತ್ರೀಕುಲದ ಸಿಂಹಸ್ವಪ್ನ ಹೇಮರೆಡ್ಡಿ ಮಲ್ಲಮನವರ ಆಶರ್ಿವಾದದಿಂದ ಎಲ್ಲಾ ದುಷ್ಚಟಗಳನ್ನು ಬಿಟ್ಟು, ಆತ್ಮವಾದಿ ನೆಲೆಯಿಂದ ಮಾನವತಾವಾದಿ ನೆಲೆಗೆ ಪದ್ಯಗಳನ್ನು ರಚಿಸುವುದರ ಮೂಲಕ ಸಾಮಾಜದ ಸುಧಾರಣೆಗಾಗಿ ಹೋರಾಡಿ ಮಹಾಯೋಗಿಗಳಾಗಿದ್ದಾರೆ. ಮೇಮನರು ತಮ್ಮ ಸಮಕಾಲಿನ ಸಮಾಜದಲ್ಲಿ ಇರುವಂತಹ ಮೂಡನಂಬಿಕೆ, ದುರಾಚಾರ, ಧಮರ್ಾಚಾರ, ಅನೈತಿಕತೆ, ಅನೇಕ ಅನಿಷ್ಠ ಪದ್ದತಿಗಳ ವಿರುದ್ಧ ಪ್ರತಿಭಟಿಸಿದ್ದಾರೆ. ಮನುಷ್ಯನು ದುಷ್ಚಟಗಳಿಗೆ ಬಲಿಯಾಗುವುದು ಸಹಜ. ಆದರೆ ಇದರಿಂದ ಮನುಷ್ಯನು ಮತ್ತು ಅವನ ಹೆಸರು ಎರಡೂ ಉಳಿಯುವುದಿಲ್ಲ. ನಾವು ಮಾಡುವಂತಹ ಒಳ್ಳೆಯ ಕಾರ್ಯಗಳು ಶಾಶ್ವತವಾಗಿ ಉಳಿಯುತ್ತವೆ ಎಂಬುವುದಕ್ಕೆ ವೇಮನರು ಒಂದು ಉದಾಹರಣೆಯಾಗಿದ್ದಾರೆ. ಎಲ್ಲರೂ ವೇಮನರ ಆದರ್ಶ ಮತ್ತು ಮಾರ್ಗದರ್ಶನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿಶೇಷವಾಗಿ ಯುವಕರು ವೇಮನರ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾ ಪಂಚಾಯತ ಅಧ್ಯಕ್ಷ ಹೆಚ್. ವಿಶ್ವನಾಥರೆಡ್ಡಿ ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಮಾತನಾಡಿ, ಸಮಾಜದಲ್ಲಿ ಪರಿವರ್ತನೆಗಳನ್ನು ಮಾಡಿದಾಗ ಕವಿ, ಸಂತ, ಜ್ಞಾನಿಯಾಗಬಹುದು ಎಂಬುವುದಕ್ಕೆ ಕಾರಣ ಮಹಾಯೋಗಿ ವೇಮನರು. ಆದ್ದರಿಂದ ಮಕ್ಕಳ ಉತ್ತಮ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿ. ಸಮಾಜದಲ್ಲಿನ ಅತ್ಯಂತ ಕೆಟ್ಟ ನಡುವಳಿಕೆಗಳನ್ನು ವೇಮನರು ನಿಷ್ಕ್ರಿಯವಾಗಿ ಖಂಡಿಸಿದ್ದಾರೆ ಎಂಬುವುದು ಅವರ ಪದ್ಯಗಳನ್ನು ನೋಡಿದಾಗ ನಮಗೆ ತಿಳಿಯುತ್ತದೆ. 14ನೇ ಶತಮಾನದಲ್ಲಿ ತೆಲಗು ನಾಡಿನ ರಾಜ ಮನೆತನದಲ್ಲಿ ಜನಿಸಿದ್ದರು ಕೂಡ ಮಹಾಯೋಗಿ ವೇಮನರನ್ನು ಕನರ್ಾಟಕವು ಸಹ ಸ್ವೀಕರಿಸಿದೆ. "ಏನಾದರೂ ಆಗು ನೀನು ಮಾನವನಾಗು" ಎಂಬ ವೇಮನರ ಚರಿತ್ರೆಯನ್ವಯ ಎಲ್ಲರೂ ನಡೆಯಬೇಕಿದೆ ಎಂದರು.
ಜಿಲ್ಲೆಯ ಯಲಬುಗರ್ಾ ತಾಲೂಕಿನ ಹಿರೇವಂಕಲಕುಂಟ ಗ್ರಾಮದ ಸಕರ್ಾರಿ ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ. ಎಸ್.ವಿ. ಡಾಣಿ ಅವರು ಮಹಾಯೋಗಿ ವೇಮನರ ಕುರಿತು ವಿಶೇಷ ಉಪನ್ಯಾಸ ನೀಡಿ, ಕನರ್ಾಟಕದಲ್ಲಿ ಸಾರ್ವಜ್ಞರು ಹಾಗೆಯೇ ಆಂದ್ರಪ್ರದೇಶದಲ್ಲಿ ವೇಮನರು. ಆರಂಭದಲ್ಲಿ ವೇಮನರು ಯೌವನ ವ್ಯವಸ್ಥೆಯಲ್ಲಿದ್ದರು. ಆದರೆ ತನ್ನ ಅಣ್ಣನ ಪತ್ನಿಯಾದ ಹೇಮರಡ್ಡಿ ಮಲ್ಲಮ್ಮ ಅವರ ಆಶ್ರಯದಲ್ಲಿ ಬೆಳೆದು. ನಂತರ ಅತ್ತಿಗೆಯು ನೀಡಿದ ಬೋದನೆಯನ್ನು ಅರಿತುಕೊಂಡು ಅಂದಿನ ಕಾಲದ ಸ್ಥಿತಿಗತಿಗಳಿಂದ ಅವರಿಗೆ ಮಹಾಯೋಗಿಗಳಾಗಲು ಪ್ರೇರಣೆಯಾಯಿತು. ಕಷ್ಟ, ಸುಖ ಹಾಗೂ ದುಃಖಗಳನ್ನು ಅನುಭವಿಸಿದ ವೇಮನರು ನಂತರ ಮಹಾನ ಯೋಗಿಗಳಾದರು. ಅವರು ತಮ್ಮ ಕವನಗಳಲ್ಲಿ ಅಸ್ಪೃಶ್ಯತೆಯ ವಿರುದ್ಧ ನೇರವಾಗಿ ಹೇಳುವಂತ ವ್ಯಕ್ತಿಗಳಾಗಿದ್ದರು. ವೇಮನರು ಸಂಚಾರಿಯಾಗಿದ್ದು, ವಯಕ್ತಿಕ ಮಾಹಿತಿಯು ಸ್ಪಷ್ಟವಾಗಿ ಲಭ್ಯ ಇಲ್ಲ.
ಆದರೂ ಕಂಡವಿಡರೆಡ್ಡಿ ಮನೆತನದವರು ಎಂದು ಹೇಳಲಾಗುತ್ತದೆ. ವೇಮನರು ಸುಮಾರು ಐದು ಸಾವಿರಕ್ಕೂ ಹೆಚ್ಚು ಕವನಗಳನ್ನು ಬರೆದಿರಬಹುದು ಎಂದು ಹೇಳಲಾಗುತ್ತದೆ. ತಮ್ಮ ಕವನಗಳಲ್ಲಿ ಜೀವನ ಮುಖಿ ಸಂದೇಶಗಳನ್ನು ಸಾರಿದ್ದಾರೆ. ಮೂಡನಂಬಿಕೆ, ಮೌಡ್ಯತೆಯನ್ನು ಹೋಗಲಾಡಿಸಲು ಸಹ ಪ್ರಯತ್ನಿಸಿದ್ದಾರೆ. ವೇಮನರ ಗುರು ಅಭಿರಾಮ ರಾಗಿದ್ದು, ಗುರುವನ್ನು ತನ್ನ ಪದ್ಯಗಳಲ್ಲಿ ಶಾಶ್ವತಗೊಳಿಸಿದ್ದಾರೆ. ವೇಮನರ ಸಾಹಿತ್ಯಗಳನ್ನು ಬ್ರೀಟಿಷ್ ಅಧಿಕಾರಿಗಳು ಆಂಗ್ಲ ಭಾಷೆಯಲ್ಲಿ ಪ್ರಕಟಿಸಿದ್ದಾರೆ. ಅದಲ್ಲದೇ ಕನ್ನಡ ಮತ್ತು ವಿವಿಧ ಭಾಷೆಗಳಲ್ಲಿಯೂ ಸಹ ವೇಮನ ಕಾವ್ಯಗಳು ಭಾಷಾಂತರಿಸಲಾಗಿದ್ದು, ಕನರ್ಾಟಕದಲ್ಲಿ ಲಭ್ಯ ಇವೆ. ಮಹಾಯೋಗಿ ವೇಮನರು ಪ್ರತಿಯೊಬ್ಬರ ಮನದಲ್ಲಿದ್ದಾರೆ ಎಂದರು.
ಸಮಾರಂಭದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷರಾದ ಹೆಚ್.ಎಲ್. ಹಿರೇಗೌಡರ್, ಎಸ್.ಬಿ ನಾಗರಳ್ಳಿ ಹಾಗೂ ರಾಜಶೇಖರ ಹಿಟ್ನಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕ ಕೃಷ್ಣಮೂತರ್ಿ ದೇಸಾಯಿ, ತಹಶೀಲ್ದಾರ ಜೆ.ಬಿ. ಮಜ್ಗಿ, ನಗರ ಪೊಲೀಸ್ ಠಾಣೆಯ ಸಿ.ಪಿ.ಐ. ಶಿವಾನಂದ ವಾಲಿಕಾರ, ಮುಖಂಡರುಗಳಾದ ಪ್ರಭು ಹೆಬ್ಬಾಳ, ಸಿ.ವಿ ಚಂದ್ರಶೇಖರ, ಸುರೇಶ ಭೂಮರಡ್ಡಿ, ಬಸವರೆಡ್ಡಿ ಹಳ್ಳಿಕೇರಿ, ಬಸವರಾಜ ವೆಂಕಾರೆಡ್ಡಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.