ಮತದಾರರ ಪಟ್ಟಿ ಪರಿಶೀಲನೆಗೆ ಮೋಬೈಲ್ ಆಪ್ ಬಳಕೆಗೆ ಸಲಹೆ

ಗದಗ 23:  ಸೆಪ್ಟಂಬರ್ 25ರಿಂದ ಅಕ್ಟೋಬರ್ 15 ರವರೆಗೆ ಮತದಾರ ಪಟ್ಟಿಯ ಪರಿಶೀಲನಾ ಕಾರ್ಯ ಜರುಗಲಿದೆ. ದಿ. 01-01-2020ಕ್ಕೆ 18 ವರ್ಷ ಪೂರ್ಣಗೊಳ್ಳುವ ಮತದಾರರು  ತಮ್ಮನ್ನು ಮತದಾರ ಪಟ್ಟಿಗೆ ಸೇರ್ಪಡೆಗೊಳ್ಳಲು ಭಾರತ ಚುನಾವಣಾ ಆಯೋಗವು ವೋಟ್ರ ಹೆಲ್ಪಲೈನ್ ಮೋಬೈಲ್ ಆಪನ್ನು ಪರಿಚಯಿಸಿದೆ ಎಂದು ಅಪರ ಜಿಲ್ಲಾಧಿಕಾರಿ ಶಿವಾನಚಿದ ಕರಾಳೆ ತಿಳಿಸಿದರು. ಜಿಲ್ಲಾಧಿಕಾರಿ ಸಭಾಂಗಣದಲ್ಲಿಂದು ಜರುಗಿದ ಮತದಾರರ ಪಟ್ಟಿ ಪರಿಶೀಲನಾ  ಕಾರ್ಯಕ್ರಮದಲ್ಲಿಂದು ಅವರು ಮಾತನಾಡಿದರು. 

ಮತದಾರರ ಪಟ್ಟಿಯಲ್ಲಿರುವ ಮತದಾರರ ವಿವರಗಳನ್ನು ಪರಿಶೀಲಿಸಲು  ಹೆಸರನ್ನು ತೆಗೆದು ಹಾಕಲು, ಪರಿಶೀಲನೆ ಮತ್ತು ಧೃಢೀಕರಣ, ತಿದ್ದುಪಡಿಗಳಿಗಾಗಿ ಆಪ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.  ಪಾಸಪೋಟರ್್, ಚಾಲನಾ ಪರವಾನಿಗೆ, ಆಧಾರ ಪತ್ರ, ಪಡಿತರ ಚೀಟಿ, ಸರಕಾರಿ ಅರೆ ಸರಕಾರಿ ನೌಕರರು ಹೊಂದಿರುವ ಗುರುತಿನ ಚೀಟಿ, ಬ್ಯಾಂಕ್ ಪಾಸ್ಬುಕ್, ರೈತರ ಗುರುತಿನ ಚೀಟಿ, ಚುನಾವಣಾ ಆಯೋಗ ಅನುಮೋದಿಸಿರುವ ಯಾವುದೇ ದಾಖಲೆಗಳನ್ನು ಇವುಗಳಲ್ಲಿ ಒಂದನ್ನು ದಾಖಲೆ ರೂಪದಲ್ಲಿ  ಮೊಬೈಲ್ ಆಪ್ ಮೂಲಕ ಅಪಲೋಡ ಮಾಡಬಹುದಾಗಿದೆ.  ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ತಿಳಿಸಿದರು.  ಈ ಮೋಬೈಲ್ ಆಪನ್ನು ಗೂಗಲೆ ಪ್ಲೇಸ್ಟೋರ ಮೂಲಕ ಪಡೆದುಕೊಳ್ಳಬಹುದಾಗಿದೆ. ಮತದಾರರ ಪಟ್ಟಿಯ ಪರಿಶೀಲನಾ ಕಾರ್ಯದ ಅಂಗವಾಗಿ  ಈಗಾಗಲೇ ನೋಂದಾಣಿಯಾಗಿರುವ ಮತದಾರರು ತಮ್ಮ ಹಾಗೂ ಕುಟುಂಬ ಸದಸ್ಯರುಗಳ ಹೆಸರುಗಳ  ಸರಿಯಾಗಿ ನೋಂದಣಿಯಾಗಿರುವ ಬಗ್ಗೆ ಆಯೋಗದ ವೆಬ್ಸೈಟ್ ಎನ್.ವಿ.ಎಸ್.ಪಿ ಪೋರ್ಟಲ್, ಮತದಾರರ 1950 ಸಹಾಯವಾಣಿಗೆ ಕರೆ ಮಾಡಿ ಅಥವಾ  ಸಾಮಾನ್ಯ ಸೇವಾ  ಕೇಂದ್ರ, ಮತದಾರ ನೋಂದಣಿ ಕಛೇರಿ, ಅಟಲ್ ಜನ ಸ್ನೇಹಿ ಕೇಂದ್ರ, ಗ್ರಾಮ ಪಂಚಾಯತಗಳಲ್ಲಿಯ ಬಾಪೂಜಿ ಸೇವಾ ಕೇಂದ್ರ  ಅಲ್ಲದೆ ಮತಗಟ್ಟೆ ಅಧಿಕಾರಿ ಬಳಿ ಇರುವ ಮತದಾರ ಪಟ್ಟಿಯಲ್ಲಿ ಪರಿಶೀಲಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿದರ್ೇಶಕ ಟಿ ದಿನೇಶ, ವಿವಿಧ ಇಲಾಖೆ ಅಧಿಕಾರಿಗಳು, ವಿವಿಧ ಕಾಲೇಜುಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ವೋಟರ ಹೆಲ್ಪಲೈನ್ ಆಪನ್ನು ಗೂಗಲೆ ಪ್ಲೇ ಸ್ಟೋರ ಮೂಲಕ ಪಡೆಯಬಹುದಾಗಿದೆ.