ಕಾನೂನು ಪ್ರಕಾರ ಸ್ಪೀಕರ್ ಅವರಿಂದ ಕ್ರಮ'

ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಅವರು ತಿಳುವಳಿಕೆ ಉಳ್ಳವರು, ಅನುಭವಿಗಳು. ಅವರು ಅತೃಪ್ತ ಶಾಸಕರ ರಾಜೀನಾಮೆ ಬಿಕ್ಕಟ್ಟು ವಿಷಯದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್  ಖರ್ಗ್ ಹೇಳಿದ್ದಾರೆ.  ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಾಸಕರು ಇಂದು ಸಂಜೆ ಆರು ಗಂಟೆಯೊಳಗೆ ಹಾಜರಾಗಿ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ತಿಳಿಸುವಂತೆ ಸುಪ್ರೀಂಕೋಟರ್್ ಸೂಚಿಸಿದೆ. ಅದರಂತೆ ಶಾಸಕರು ಇಂದು ಹಾಜರಾಗುವ ಸಾಧ್ಯತೆ ಇದೆ ಎಂದು ಹೇಳಿದರು.  ಸ್ಪೀಕರ್ ಅವರು ಸಂವಿಧಾನದ 192 ವಿಧಿ ಮತ್ತು ಶೆಡ್ಯೂಲ್ಡ್ 10ರ ಪ್ರಕಾರ ಯಾವೆಲ್ಲಾ ಸಾಧ್ಯತೆಗಳಿವೆಯೋ ಅವೆಲ್ಲವನ್ನೂ ಪರಿಶೀಲಿಸಲಿದ್ದಾರೆ.  ಅವರು ಸಾಕಷ್ಟು ಕಾನೂನು ತಿಳುವಳಿಕೆ ಇರುವವರು.  ಕಾನೂನಿಗೆ ಅನುಗುಣವಾಗಿ ಅವರು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.