ಕಲಬುರಗಿಯಲ್ಲಿ 4 ವರ್ಷದ ಮಗು ಸೇರಿ 8 ಮಂದಿಗೆ ಕೊರೋನಾ ಸೋಂಕು, ಸೋಂಕಿತರ ಸಂಖ್ಯೆ 532

ಬೆಂಗಳೂರು, ಏ 29, ಕಲಬುರಗಿಯಲ್ಲಿ 4.6 ವರ್ಷದ ಹೆಣ್ಣು ಮಗು ಸೇರಿ ಮತ್ತೆ 8 ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 532ಕ್ಕೇರಿಕೆಯಾಗಿದೆ. ಇಲ್ಲಿಯವರೆಗೆ 21 ಜನರು ಮೃತಪಟ್ಟಿದ್ದು, 245 ಮಂದಿ ಗುಣಮುಖರಾಗಿದ್ದಾರೆ.395ರೋಗಿಯ ಸಂಪರ್ಕ ಹೊಂದಿದ್ದ 4.6 ವರ್ಷದ ಬಾಲಕಿ, 515ನೇ ರೋಗಿಯ ಸಂಪರ್ಕದಲ್ಲಿದ್ದು 28 ವರ್ಷದ ಯುವಕ, 425ನೇ ರೋಗಿಯ ಸಂಪರ್ಕದಲ್ಲಿದ್ದ 14 ವರ್ಷದ ಬಾಲಕಿ, 40 ವರ್ಷದ ಮಹಿಳೆ, 205ನೇ ರೋಗಿಯ ಸಂಪರ್ಕದಲ್ಲಿದ್ದ 22 ವರ್ಷದ ಯುವತಿ 20 ವರ್ಷದ ಯುವಕ, 17 ವರ್ಷದ ಯುವತಿ ಮತ್ತು 12 ವರ್ಷದ ಬಾಲಕಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಜೊತೆಗೆ, ಬೆಳಗಾವಿಯ ಹುಕ್ಕೇರಿಯಲ್ಲಿ ಕೂಡ 12 ವರ್ಷದ ಬಾಲಕನಿಗೆ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.