ಸರಕಾರದ ಸೇವಾ ಭದ್ರತೆ ಇಲ್ಲದೆ ವೃತ್ತಿ ಎಂದರೆ ಅದು ವಿದ್ಯುತ್ ಗುತ್ತಿಗೆದಾರರ ವೃತ್ತಿ

ಶಿಗ್ಗಾವಿ,21 : ನರಗುಂದ ತಾಲೂಕಿನ ಕೊನ್ನೂರು ಬಳಿಯ ದೇವಸ್ಥಾನಕ್ಕೆ ಹೋಗುವ ಸಂದರ್ಭದಲ್ಲಿ ರಸ್ತೆ ಮಧ್ಯೆ ಅಪಘಾತವಾಗಿ ಕಾರಿನಲ್ಲಿದ್ದ ಹಾವೇರಿ ಜಿಲ್ಲಾ ವಿದ್ಯುತ್ ಗುತ್ತಿಗೆದಾರ ಸಂಘದ ಜಿಲ್ಲಾ ಮಾಜಿ ಕಾರ್ಯದರ್ಶಿ ರುದ್ರ​‍್ಪ ಅಂಗಡಿ ಅವರ ಪತ್ನಿ ಪುತ್ರ ಪುತ್ರಿ ಸಂಪೂರ್ಣ ಪರಿವಾರ ಅಪಘಾತದ ಸ್ಥಳದಲ್ಲಿ ದಾರುಣವಾಗಿ ಮರಣ ಹೊಪ್ಪಿದ್ದು ನಿಜಕ್ಕೂ ಸಂಘದ ಎಲ್ಲ ಸದಸ್ಯರಿಗೂ ದಿಗ್ಭ್ರಮೆ ಉಂಟು ಮಾಡಿತ್ತು ತಕ್ಷಣವೇ ಗುತ್ತಿಗೆದಾರರು ಪರಿವಾರದ ನೆರವಿಗೆ ನಿಂತು ಅಂತಿಮ ವಿಧಿ ವಿಧಾನ ಸಕಲ ವ್ಯವಸ್ಥೆ ಮಾಡಿದರು. 

ಹಾವೇರಿಯ ಜಿಲ್ಲಾ ಸಂಘದ ಕಚೇರಿಯಲ್ಲಿ ಸಭೆ ಮಾಡಿ ಇಡೀ ಪರಿವಾರಕ್ಕೆ ಹಾಗೂ ವಯೋಸಹಜ  ಉಪ್ಪಳಸಿಯ ಶಿವಯೋಗಿ ಮಲ್ಲಿಗಾರ ಅವರ ತಂದೆ ಅವರಿಗೂ ಸಾಂತ್ವನ ಹೇಳಿ ನಂತರ ಹಾವೇರಿಯಲ್ಲಿರುವ ದುರ್ದೈವಿ ರುದ್ರ​‍್ಪ ಅಂಗಡಿ ಅವರ ಮನೆಗೆ ಭೇಟಿ ಮಾಡಿ ವಯಸ್ಸಾಗಿರುವ ಅವರ ತಂದೆ ತಾಯಿಗಳನ್ನು ಭೇಟಿ ಮಾಡಿ ಧೈರ್ಯ ತುಂಬುವ ಕೆಲಸ ಮಾಡಿದರು ರಾಜ್ಯ ಗುತ್ತಿಗೆದಾರ ಸಂಘದ ಇತಿಹಾಸ ಪುಟದಲ್ಲಿ ಇಂತಹ ದುರಂತಗಳು ನಡೆದೇ ಇರಲಿಲ್ಲ ಇದು ನಿಜಕ್ಕೂ ದೊಡ್ಡ ಆಘಾತ ಉಂಟು ಮಾಡಿದೆ  ಜಿಲ್ಲಾ ಸಂಘ ನಿಮ್ಮ ಜೊತೆಗಿದೆ ಸಾಧ್ಯವಾಗುವು ಎಲ್ಲಾ ಅನುಕೂಲತೆಗಳು ಹಾಗೂ ಧನ ಸಹಾಯವನ್ನು ನಾವೆಲ್ಲರೂ ಒಟ್ಟಾಗಿ ಮಾಡುತ್ತೇವೆ ಯಾವುದೇ ಕಾರಣಕ್ಕೂ ಧೈರ್ಯ ಗೆಡಬೇಡಿ ಎಂದು ಮೃತರ ಪರಿವಾರಕ್ಕೆ ಧೈರ್ಯ ತುಂಬಿದರು. 

ಮಾಜಿ ಕೇಂದ್ರ ಸಮಿತಿ ಸದಸ್ಯ ಮಂಜುನಾಥ್ ಮನ್ನಣ್ಣವರ್ ಅವರ ಮನವಿಗೆ ಸ್ಪಂದಿಸಿ  ಸ್ಥಳೀಯರೇ ಆಗಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಅವರು ಘಟನೆ ತಿಳಿದು ಮನೆಗೆ ಭೇಟಿ ಮಾಡಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹಾಗೂ ಸಂಜೀವ್ ನೀರಲಗಿ ಗುತ್ತಿಗೆದಾರನ ಇಡೀ ಪರಿವಾರ ಇಹ ಲೋಕ ತ್ಯಜಿಸಿರುವುದು ನಮಗೂ ದುಃಖ ತಂದಿದೆ ಮಾನವೀಯತೆ ಆಧಾರದಲ್ಲಿ ಸರ್ಕಾರದಿಂದ ಸಾಧ್ಯವಾದ ಪರಿಹಾರ ಕೊಡಲಾಗುವುದು ಎಂದು ಭರವಸೆ ನೀಡಿದ್ದಾರೆ. 

ಜಿಲ್ಲಾ ಸಂಘದ ಗುತ್ತಿಗೆದಾರರ ಸಭೆಯಲ್ಲಿ ಮತ್ತು ಮೃತನ ಪರಿವಾರಕ್ಕೂ ಹಾವೇರಿ ತಾಲೂಕ ಅಧ್ಯಕ್ಷ ಗಂಗಾಧರ ಕರಬಸಣ್ಣವರ್ ತಿಳಿಸಿದರು. ಯಾವುದೇ ಸರಕಾರದ ಸೇವಾ ಭದ್ರತೆ  ಇಲ್ಲದೆ ಕಾರ್ಯ ನಿರ್ವಹಿಸುವ ವೃತ್ತಿ ಎಂದರೆ ಅದು ವಿದ್ಯುತ್ ಗುತ್ತಿಗೆದಾರರ ವೃತ್ತಿ ಕಣ್ಣಿಗೆ ಕಾಣದ ವಿದ್ಯುತ್ ಕಾಮಗಾರಿ ನಿರ್ವಹಿಸುವುದು ವೃತ್ತಿ ಜೀವನಕ್ಕೆ ಹಾಗೂ ಬದುಕಿಗೆ ದೊಡ್ಡ ಸವಾಲು ಕಳೆ 20 ವರ್ಷಗಳಿಂದಲೂ ಪರವಾನಿಗೆ ನೀಡುವ ಸಂದರ್ಭದಲ್ಲಿ ಗುತ್ತಿಗೆದಾರರಾಗಿ ಕನಿಷ್ಠ ಸಾಮಾಜಿಕ ಭದ್ರತೆ ಅವಕಾಶ ಮಾಡಿಕೊಡುವಂತೆ ಸರ್ಕಾರಗಳಿಗೆ ಮನವಿ ಮಾಡುತ್ತಾ ಬಂದಿದ್ದೇವೆ ಆದರೆ ಈವರೆಗೂ ಸರ್ಕಾರಗಳು ನಮಗೆ ಸ್ಪಂದಿಸಲಿಲ್ಲ  ಉಸ್ತುವಾರಿ ಸಚಿವ ಶಿವಾನಂದ್ ಪಾಟೀಲ ಅವರು ಸರ್ಕಾರದ ಮುಖ್ಯಮಂತ್ರಿಗಳ, ಉಪಮುಖ್ಯಮಂತ್ರಿಗಳ ಹಾಗೂ ಇಂಧನ ಸಚಿವರ ಗಮನಕ್ಕೆ ತಂದು ಗುತ್ತಿಗೆದಾರರ ಸೇವಾ ಭದ್ರತೆ ಕೊಡುವಲ್ಲಿ ವಿಶೇಷ ಆಸಕ್ತಿ ವಹಿಸಿ ಅನುಕೂಲ ಮಾಡಿಕೊಡಬೇಕೆಂದು ಸಚಿವರಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಗುತ್ತಿಗೆದಾರ ಸಂಘದ ರಾಜ್ಯ ಕೇಂದ್ರ ಸಮಿತಿಯ ಮಾಜಿ ಸದಸ್ಯರು ಆಗಿರುವ ಮಂಜುನಾಥ ಮಣ್ಣಣ್ಣವರ ಗುತ್ತೇದಾರರ ಪರವಾಗಿ ಮನವಿ ಮಾಡಿಕೊಂಡಿದ್ದಾರೆ.

ಕೇಂದ್ರ ಸಂಘದಿಂದ ಬರುವ ಸಹಾಯಧನ ಹಾಗೂ ಜಿಲ್ಲಾ ಸಂಘದ ಸದಸ್ಯರು ಕೊಡುತ್ತಿರುವ ಸಹಾಯಧನವನ್ನು ಒಟ್ಟು ಮಾಡಿ ಸಭೆ ಕರೆದು ಪರಿವಾರಕ್ಕೆ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ಕೇಂದ್ರ ಸಮಿತಿ ಸದಸ್ಯ ಆನಂದ ಹಾದಿಮನಿ ಹೇಳಿದರು.  

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರಾಜು ಪುಣ್ಯವಂತರ, ಬಸವರಾಜ ದೊಡ್ಮನಿ, ಶಿವಯೋಗಿ ಮಲ್ಲಿಗಾರ, ನಾಗಭೂಷಣ್ ಹಿರೇಮಠ, ಶ್ರೀ ಮಠದ ಮಹೇಶ್ ರಜಪೂತ್ ವಿವಿಧ ತಾಲೂಕಿನ ಅಧ್ಯಕ್ಷರೂ ಪದಾಧಿಕಾರಿಗಳು ಸಂಘದ ಸದಸ್ಯರು ಮೃತ ಪರಿವಾರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಧೈರ್ಯ ತುಂಬಿದರು.