ಬೆಂಗಳೂರು,ಏ. 23,ರಾಜ್ಯದಲ್ಲಿ ಇಂದು 16 ಹೊಸ ಕೋವಿಡ್ ಪ್ರಕರಣಗಳು ಖಚಿತವಾಗಿದ್ದು, ಒಟ್ಟಾರೆ ಸೊಂಕಿತರ ಸಂಖ್ಯೆ 443ಕ್ಕೆ ಏರಿದೆ.ಇಲ್ಲಿಯವರೆಗೆ ಸೋಂಕಿನಿಂದ ಒಟ್ಟು 17 ಜನರು ಮೃತಪಟ್ಟಿದ್ದು ಮತ್ತು 141 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.ಸೋಂಕಿತ 428, ವಿಜಯಪುರದ 32 ವರ್ಷದ ವ್ಯಕ್ತಿಯಾಗಿದ್ದು, ಅವರು ಸೋಂಕಿತ 221ರ ಸಂಪರ್ಕದಲ್ಲಿದ್ದರು. ಅವರನ್ನು ವಿಜಯಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತೆ 429 ವಿಜಯಪುರದ 25 ವರ್ಷದ ಮಹಿಳೆಯಾಗಿದ್ದು, ಅವರ ಸೋಂಕಿಗೆ ಕಾರಣವಾದ ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದೆ. ಅವರನ್ನು ಕೂಡ ವಿಜಯಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಂಕಿತ 430 ಹುಬ್ಬಳ್ಳಿ-ಧಾರವಾಡದ 30 ವರ್ಷದ ಮಹಿಳೆಯಾಗಿದ್ದು, ಇವರು ಸೋಂಕಿತ 236ರ ಸಂಪರ್ಕದಲ್ಲಿದ್ದರು. ಸೋಂಕಿತ 431 ಹುಬ್ಬಳ್ಳಿ ಧಾರವಾಡದ ಬಾಲಕಿಯಾಗಿದ್ದು, ಸೋಂಕಿತೆ 236ರ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ.ಸೋಂಕಿತ 432 ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವೃದ್ಧೆಯಾಗಿದ್ದು, ಅವರು ಸೋಂಕಿತೆ 390ರ ಸಂಪರ್ಕದಲ್ಲಿದ್ದರು. ಅವರನ್ನು ಜಿಲ್ಲೆಯ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.ಸೋಂಕಿತರಾದ 433, 434, 435, 436,437, 438, 439, 440, 441, ಬೆಂಗಳೂರು ನಗರದ ನಿವಾಸಿಗಳಾಗಿದ್ದು, ಎಲ್ಲರೂ ಪುರುಷರು. ಅವರೆಲ್ಲರೂ ಸೋಂಕಿತ 419ರ ಸಂಪರ್ಕದಲ್ಲಿದ್ದರು. ಅವರನ್ನು ನಿಗದಿತ ಆಸ್ಪತ್ರೆಗೆ ಸೇರಿಸಲಾಗಿದೆ.ಸೋಂಕಿತ442 ಮಂಡ್ಯ ಜಿಲ್ಲೆಯ 47 ವರ್ಷದ ಪುರುಷ ವ್ಯಕ್ತವಾಗಿದ್ದು, ಅವರು ಸೋಂಕಿತ 171, 371ರ ಸಂಪರ್ಕದಲ್ಲಿದ್ದರು. ಸೋಂಕಿತ 443, ಮಂಡ್ಯ ಜಿಲ್ಲೆಯ ಮಳವಳ್ಳಿಯ, 28 ವರ್ಷದ ಮಹಿಳೆಯಾಗಿದ್ದು, ಅವರು ರೋಗಿ 179ರ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ.