ಇರಾನ್‌ನಲ್ಲೂ 5.1 ತೀವ್ರತೆಯ ಭೂಕಂಪನ

ಮಾಸ್ಕೋ, ಡಿಸೆಂಬರ್ 27 (ಸ್ಪುಟ್ನಿಕ್) ನೈರುತ್ಯ ಇರಾನಿನ  ಬುಶೆಹ್ರ್ ಪರಮಾಣು ವಿದ್ಯುತ್ ಸ್ಥಾವರದಿಂದ ಸುಮಾರು 50 ಕಿಲೋಮೀಟರ್  ದೂರದಲ್ಲಿ   ಶುಕ್ರವಾರ 5.1 ತೀವ್ರತೆಯ ಭೂಕಂಪನ ದಾಖಲಾಗಿದೆ.ಅಮೆರಿಕದ   ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆ ಇದನ್ನು ಖಚಿತಪಡಿಸಿದೆ. ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆ ಮೂಲಗಳ ಪ್ರಕಾರ  ಭೂಕಂಪನ ಕೇಂದ್ರಬಿಂದು  38.3 ಕಿಲೋಮೀಟರ್ ಆಳದಲ್ಲಿತ್ತು ಎಂದು ಹೇಳಲಾಗಿದೆ.ಆದರೆ ಆಸ್ತಿ- ಪಾಸ್ತಿಗೆ  ಹಾನಿಯಾಗಿರುವ ಬಗ್ಗೆ  ಯಾವುದೇ  ವರದಿ ಬಂದಿಲ್ಲ ಎಂದೂ  ಅಧಿಕಾರಿಗಳು ಹೇಳಿದ್ದಾರೆ.