ಹೈದರಾಬಾದ್, ಏಪ್ರಿಲ್ 30,ಕೊರೊನಾವೈರಸ್ ಸೋಂಕು ದೃಢಪಟ್ಟಿದ್ದ 45 ದಿನದ ಗಂಡು ಶಿಶು ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ ಇಲ್ಲಿನ ಗಾಂಧಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮನೆಗೆ ಕಳುಹಿಸಲಾಗಿದೆ.‘ಕೋವಿಡ್ -19 ಸೋಂಕು ತಗುಲಿದ್ದ ಮಹಬೂಬ್‌ನಗರ ಜಿಲ್ಲೆಯ ಗಂಡು ಶಿಶುವನ್ನು ಗುಣಪಡಿಸಲಾಗಿದೆ. ಗಾಂಧಿ ಆಸ್ಪತ್ರೆಯಿಂದ ಶಿಶುವನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ.’ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶಕರು ಬುಧವಾರ ರಾತ್ರಿ ಆರೋಗ್ಯ ಮಾಹಿತಿ ಸಂಚಿಕೆಯಲ್ಲಿ ಹೇಳಿದ್ದಾರೆ. 20 ದಿನದ ಮಗುವಿಗೆ ತನ್ನ ತಂದೆಯಿಂದ ಸೋಂಕು ತಗುಲಿತ್ತು. ಆಸ್ಪತ್ರೆಯಿಂದ ಬಿಡುಗಡೆ ಸಮಯದಲ್ಲಿ ಮಗುವಿಗೆ 45 ದಿನ ತುಂಬಿದೆ. ನಗರದ ಸರ್ಕಾರಿ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಮಗು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಬಹುಶ: ಇಡೀ ದೇಶದಲ್ಲೇ ಸೋಂಕು ದೃಢಪಟ್ಟಿರುವ ಅತಿ ಚಿಕ್ಕ ವಯಸ್ಸಿನವಾಗಿದ್ದಾನೆ.