ಎಸ್ ವಿ ಪಿ ಮತ್ತು ಬಿ ಪ್ಯಾಕ್ ನಿಂದ ಬಿಬಿಎಂಪಿಗೆ 40 ಥರ್ಮಲ್ ಸ್ಕ್ಯಾನಿಂಗ್ ಮತ್ತು ಫೇಸ್ ಶೀಲ್ಡ್ ಗಳ ಹಸ್ತಾಂತರ

ಬೆಂಗಳೂರು, ಏ 29,ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಛೇರಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಆರೋಗ್ಯ ತಪಾಸಣೆ ಮಾಡುವ  ಉದ್ದೇಶದಿಂದ ಎಸ್.ವಿ.ಪಿ ಹಾಗೂ ಬಿ ಪ್ಯಾಕ್ ವತಿಯಿಂದ ಉಚಿತವಾಗಿ 40 ಥರ್ಮಲ್ ಸ್ಕ್ಯಾನಿಂಗ್  ಯಂತ್ರಗಳು ಹಾಗೂ 50 ಪೇಸ್ ಶೀಲ್ಡ್ ಗಳನ್ನು ಬುಧವಾರ ಹಸ್ತಾಂತರಿಸಲಾಯಿತು. ಮೇಯರ್ ಗೌತಮ್ ಕುಮಾರ್ ಅವರ ಕಚೇರಿಯಲ್ಲಿ  ಪ್ಯಾಕ್ ಸಿಇಒ ರೇವತಿ ಅಶೋಕ್, ಎಸ್ ವಿಪಿಯ ಆಡಳಿತ ಸಮಿತಿಯ ಪದ್ಮಶ್ರೀ ಬಲರಾಮ್ ಸ್ಯಾನಿಂಗ್ ಯಂತ್ರಗಳು ಹಾಗೂ  ಪೇಸ್ ಶೀಲ್ಡ್ ಗಳನ್ನು ಹಸ್ತಾಂತರಿಸಿದರು. ನಂತರ ಮಾತನಾಡಿದ ಗೌತಮ್ ಕುಮಾರ್, ಎಸ್ ವಿಪಿ ವತಿಯಿಂದ ಈಗಾಗಲೇ ಪಾಲಿಕೆಯ ಫೀವರ್ ಕ್ಲೀನಿಕ್, ಪ್ರಾಥಮಿಕ ಆರೋಗ್ಯ  ಕೇಂದ್ರ ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ 10 ಸಾವಿರ  ಪೇಸ್ ಶೀಲ್ಡ್, ಪೋಲೀಸ್ ಸಿಬ್ಬಂದಿಗೆ 20 ಸಾವಿರ ಪುನರ್ ಬಳಕೆ ಮುಖಗವಸುಗಳು ಹಾಗೂ 600  ಪಿಪಿಇ‌ ಕಿಟ್ ಗಳನ್ನು ನೀಡಲಾಗಿದೆ. ಅಲ್ಲದೆ 65 ಥರ್ಮಲ್ ಸ್ಕ್ಯಾನಿಂಗ್ ಗಳಲ್ಲಿ ಈಗಾಗಲೇ  35 ಥರ್ಮಲ್ ಸ್ಕ್ಯಾನಿಂಗ್ ಗಳನ್ನು ಆಸ್ಪತ್ರೆಗಳಿಗೆ ನೀಡಿದ್ದು, ಇಂದು 40 ಥರ್ಮಲ್  ಸ್ಕ್ಯಾನಿಂಗ್ ಗಳನ್ನು ಪಾಲಿಕೆ ನೀಡಿದೆ ಎಂದರು.ಈ ಸಂದರ್ಭದಲ್ಲಿ ಉಪಮೇಯರ್  ರಾಮಮೋಹನ ರಾಜು, ಮುಖ್ಯ ಆರೋಗ್ಯಾಧಿಕಾರಿ(ಕ್ಲಿನಿಕಲ್) ಡಾ. ನಿರ್ಮಲಾ ಬುಗ್ಗಿ, ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತರು ಸರ್ಫರಾಜ್ ಖಾನ್, ಬಿ ಪ್ಯಾಕ್ ಸಿ.ಇ.ಒ ಶ್ರೀಮತಿ ರೇವತಿ ಅಶೋಕ್, ಎಸ್.ವಿ.ಪಿಯ ಮ್ಯಾನೇಜ್ಮೆಂಟ್ ಕಮಿಟಿ ಶ್ರೀಮತಿ ಪದ್ಮಶ್ರೀ ಬಲರಾಮ್ ಹಾಗೂ ಇತರರು ಉಪಸ್ಥಿತರಿದ್ದರು.