ಬೆಂಗಳೂರು,
ಏ.20, ರಾಜ್ಯದಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ ದಿನೇ ದಿನೇ
ಹೆಚ್ಚಾಗುತ್ತಿದ್ದು, ಸೋಮವಾರ ಸೋಂಕಿತರ ಸಂಖ್ಯೆ 395ಕ್ಕೆ ಏರಿಕೆ ಆಗಿದೆ.ಸೂರ್ಯ ನಗರಿ
ಕಲಬುರಗಿ ಜಿಲ್ಲೆಯಲ್ಲೇ ಇಂದು ಐದು ಹೊಸ ಕೊರೊನಾ ಸೋಂಕು ದೃಢಪಟ್ಟಿರುವುದಾಗಿ ಆರೋಗ್ಯ
ಇಲಾಖೆ ಸ್ಪಷ್ಟಪಡಿಸಿದ್ದು, ಇದೀಗ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 27 ಕ್ಕೆ ಏರಿಕೆ
ಆಗಿದೆ.ದೇಶದಲ್ಲೇ ಮೊದಲ ಬಾರಿಗೆ ಕೊರೊನಾ ಸೋಂಕಿಗೆ ಕಲಬುರಗಿ ವೃದ್ಧ ಬಲಿಯಾಗಿದ್ದು,
ಇದೀಗ ಜಿಲ್ಲೆಯಲ್ಲಿ ಮತ್ತೆ ಹೊಸ ಐದು ಪ್ರಕರಣಗಳು ಕಲಬುರಗಿಯಲ್ಲೇ ವರದಿ
ಆಗಿರುವುದರಿಂದ ಮತ್ತಷ್ಟು ಆತಂಕ ಹೆಚ್ಚಿಸಿದೆ.ರೋಗಿ ಸಂಖ್ಯೆ 175 ಅವರ
ಸಂಪರ್ಕದಲ್ಲಿದ್ದ 17ವರ್ಷದ (ರೋಗಿ ಸಂಖ್ಯೆ-391) ಕಲಬುರಗಿಯ ಯುವಕನಲ್ಲಿ ಸೋಂಕು
ದೃಢಪಟ್ಟಿದೆ. ರೋಗಿ ಸಂಖ್ಯೆ 205 ರ ಸಂಪರ್ಕದಲ್ಲಿದ್ದ 13 ವರ್ಷದ (ರೋಗಿ ಸಂಖ್ಯೆ-392)
ಬಾಲಕ, 30 ವರ್ಷದ ಮಹಿಳೆ ಸೇರಿ 19 ವರ್ಷದ ಯುವಕನಿಗೆ ಸೋಂಕು ತಗುಲಿದೆ.ಇನ್ನು,
ರೋಗಿ ಸಂಖ್ಯೆ 177ರ ಸಂಪರ್ಕದಲ್ಲಿದ್ದ 50ವರ್ಷದ ಪುರುಷನಿಗೆ (394) ಕೊರೊನಾ ಸೋಂಕು
ದೃಢಪಟ್ಟಿದೆ.ಸದ್ಯ ಸೋಂಕಿತ ಐವರನ್ನು ಕಲಬುರಗಿ ನಗರದ ಇಎಸ್ ಐ ಆಸ್ಪತ್ರೆಯ ಐಸೋಲೇಷನ್
ವಾರ್ಡ್ ಗೆ ಸ್ಥಳಾಂತರ ಮಾಡಲಾಗಿದೆ.ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಈಗಾಗಲೇ ಮೂವರು
ಮೃತಪಟ್ಟಿದ್ದು, ಮೂವರು ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.