ಬೆಂಗಳೂರು, ಮೇ 3, ಕಾರ್ಮಿಕರ ದಿನಾಚರಣೆ ಪ್ರಯುಕ್ತ ಸಿನರ್ಜಿಸಲ್ಯುಷನ್ಸ್ ಸಂಸ್ಥೆ ವತಿಯಿಂದ
ಕೊಡಗು, ಮೈಸೂರು ಮತ್ತು ಬೆಂಗಳೂರಿನಲ್ಲಿ ಪೌರಕಾರ್ಮಿಕರು ಮತ್ತು ಪೊಲೀಸರು ಬಳಸಲು
25,000 ಫೇಸ್ ಮಾಸ್ಕ್ ಮತ್ತು 300 ಲೀಟರ್ ಹ್ಯಾಂಡ್ ಸ್ಯಾನಿಟೈಸರ್ ಗಳನ್ನು
ವಿತರಿಸಿದೆ. ವಸತಿ ಸಚಿವ ವಿ. ಸೋಮಣ್ಣ, ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಅವರಿಗೆ ಮತ್ತು ಬೆಂಗಳೂರಿನ ಪೊಲೀಸ್ ಆಯುಕ್ತರ ಕಚೇರಿಗೆ ಇವುಗಳನ್ನು ಹಸ್ತಾಂತರಿಸಲಾಯಿತು.ಈ
ಉಪಕ್ರಮದ ಕುರಿತು ಮಾತನಾಡಿದ ಸಿನರ್ಜಿ ಸ್ಟ್ರಾಟೆಜಿಕ್ ಸೊಲ್ಯೂಷನ್ಸ್‌ನ ಸ್ಥಾಪಕ
ಮತ್ತು ಸಿಇಒ ಪ್ರದೀಪ್ಸತ್ಯ, “ಈ ಮುಂಚೂಣಿಯಲ್ಲಿರುವ ಕಾರ್ಯ ಪಡೆಯು ಮಾರಣಾಂತಿಕ
ಕೊರೋನವೈರಸ್ ವಿರುದ್ಧ ಕೆಚ್ಚೆದೆಯಿಂದ ಹೋರಾಡುತ್ತಿದೆ. ನಾವೆಲ್ಲರೂ ಸುರಕ್ಷಿತವಾಗಿರಲು
ನಮ್ಮ ಯೋಧರು ಅವರ ಕುಟುಂಬದೊಂದಿಗೆ ಕಳೆಯ ಬೇಕಾದ ಸಮಯವನ್ನು ನಮಗಾಗಿ ತ್ಯಾಗ
ಮಾಡುತ್ತಿದ್ದಾರೆ. ಈ ಸಮಯದಲ್ಲಿ (ಮಾಸ್ಕ್) ಮುಖಗವಸುಗಳು, ಹ್ಯಾಂಡ್ ಸ್ಯಾನಿಟೈಜರ್‌ಗಳು
ಮತ್ತು ಸೋಂಕು ನಿವಾರಕಗಳು ವೈರಸ್‌ನಿಂದ ರಕ್ಷಿಸಿಕೊಳ್ಳಲು ಲಭ್ಯ ವಿರುವ ಏಕೈಕ ರಕ್ಷಣಾ
ಉಪಕರಣಗಳಾಗಿವೆ. ಕಾರ್ಮಿಕ ದಿನದಂದು, ನಾಗರಿಕರನ್ನು ಕಾಪಾಡುವಲ್ಲಿ ದಣಿವರಿಯದ ಈ
ಯೋಧರ ನಿಸ್ವಾರ್ಥ ಸೇವೆಗಾಗಿ ನಾವು ಅವರಿಗೆ ನಮಸ್ಕರಿಸುತ್ತೇವೆ ಎಂದರು."ಈ
ಅಗತ್ಯದ ಸಮಯದಲ್ಲಿ ಪ್ರತಿ ಸಂಸ್ಥೆಯು ಮುಂದೆ ಬಂದು ತಮ್ಮ ಸೇವೆಯನ್ನು ಮಾಡಲು ನಾನು
ಪ್ರೋತ್ಸಾಹಿಸುತ್ತೇನೆ. ಕಾರ್ಪೊರೇಟ್‌ಗಳು, ವ್ಯಕ್ತಿಗಳು ಮತ್ತು ಸಮುದಾಯಗಳು ಒಗ್ಗೂಡಿ
ವೈರಸ್‌ನ ಹರಡುವಿಕೆಯನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಸರ್ಕಾರವನ್ನು ಬೆಂಬಲಿಸುವ
ಮಾರ್ಗಗಳನ್ನು ಕಂಡುಕೊಳ್ಳುವ ಸಮಯ ಇದಾಗಿದೆ ”ಎಂದು ಸಿನರ್ಜಿ ಸ್ಟ್ರಾಟೆಜಿಕ್
ಸೊಲ್ಯೂಷನ್ಸ್‌ನ ನಿರ್ದೇಶಕ ದಿಲೀಪ್ ಸತ್ಯ ಹೇಳಿದರು.