ಬೆಂಗಳೂರು, ಏ.28,ಲಾಕ್‍ಡೌನ್‍ದಿಂದ ತೊಂದರೆಯಲ್ಲಿರುವ ಕಟ್ಟಡ ಕೂಲಿ ಕಾರ್ಮಿಕರಿಗೆ ಸರ್ಕಾರ ಘೋಷಣೆ ಮಾಡಿರುವ 2 ಸಾವಿರ ರೂ.ಸಹಾಯಧನ ಕೂಡಲೇ ಕೊಡುವ ವ್ಯವಸ್ಥೆಮಾಡಬೇಕು ಎಂದು ಫೆಡರೇಶನ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ರಾಜ್ಯ ಸಮಿತಿ ಸದಸ್ಯರು ಅಜೀಜ್ ಜಾಗಿರ್ದಾರ್ ಒತ್ತಾಯಿಸಿದ್ದಾರೆ.ಕೂಲಿ ಕಾರ್ಮಿಕರು ಮತ್ತು ರೈತರು ಕಷ್ಟದಲ್ಲಿದ್ದು, ಕೂಡಲೇ ಸರ್ಕಾರ ಅವರ ಸಹಾಯಕ್ಕೆ ಧಾವಿಸಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.ಕೇಂದ್ರ ಸರ್ಕಾರದಲ್ಲಿ ಪಿಎಂ ಕೇರ್ಸ್‌ನಲ್ಲಿ 10 ಸಾವಿರ ಕೋಟಿ ರೂ.ಗಳಷ್ಟು ಹಣ ಲಾಕ್‍ಡೌನ್ ಆಗಿದೆ. ಪ್ರಧಾನಿಯವರು ಕೂಡಲೇ ಆ ಹಣವನ್ನು ರಾಜ್ಯಗಳಿಗೆ ಹಂಚಿಕೆ ಮಾಡಬೇಕು. ಕಷ್ಟದಲ್ಲಿರುವವರಿಗೆ ಸಹಾಯ ಚಾಚಲು ರಾಜ್ಯ ಸರ್ಕಾರಗಳಿಗೆ ನೆರವಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ. ಸರ್ಕಾರಿ, ಸಹಕಾರಿ ಬ್ಯಾಂಕುಗಳು, ಸಹಕಾರಿ ಸಂಸ್ಥೆಗಳು ಹಾಗೂ ಮೈಕ್ರೋ ಫೈನಾನ್ಸಗಳು ಮೂರು ತಿಂಗಳವರೆಗೆ ಯಾವುದೇ ಸಾಲಗಾರರಿಂದ ಹಣ ವಸೂಲಿಗೆ ಮುಂದಾಗಬಾರದು. ಒಂದು ಇಂತಹ ಕಷ್ಟದ ಪರಿಸ್ಥಿತಿಯಲ್ಲಿಯೂ ಸಾಲ ವಸೂಲಾತಿಗೆ ಮುಂದಾದರೇ ಅಂತಹ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಲು ಸರಕಾರ ಮುಂದಾಗಬೇಕು ಅಜೀಜ್ ಜಾಗಿರ್ದಾರ್ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.