ಗದಗ : ಗದಗ ಜಿಲ್ಲೆಯಲ್ಲಿ ಪ್ರತಿಯೊಬ್ಬ ರೈತರು ತಮ್ಮ ಜಾನುವಾರುಗಳಿಗೆ ಕಾಲು ಮತ್ತು ಬಾಯಿ ಲಸಿಕೆ ಹಾಕಿಸಿ ಸಹಕರಿಸಬೇಕೆಂದು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ (ದಿ. 4ರಂದು) ಜಾನುವಾರುಗಳಿಗೆ ಮುಂಜಾಗ್ರತಾ ಕ್ರಮವಾಗಿ ಕಾಲು ಮತ್ತು ಬಾಯಿ ಬೇನೆ ಲಸಿಕೆ ಹಾಕುವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಾನುವಾರುಗಳಿಗೆ ಲಸಿಕೆ ಕಾರ್ಯಕ್ರಮ ಕುರಿತು ಪ್ರತಿ ಗ್ರಾಮ ಪಂಚಾಯತಿಗಳಿಗೆ ಮಾಹಿತಿ ನೀಡಿ ವ್ಯಾಪಕ ಪ್ರಚಾರಕ್ಕೆ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳು ತಿಳಿಸಿದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿದರ್ೇಶಕ ಡಾ. ಚೆನ್ನಕೇಶವಯ್ಯ ಜಾನುವಾರುಗಳಿಗೆ ಲಸಿಕಾ ಕಾರ್ಯಕ್ರಮವನ್ನು ಜಿಲ್ಲೆಯು ಸೇರಿದಂತೆ ರಾಜ್ಯಾದ್ಯಂತ ಅಕ್ಟೋಬರ್ 14 ರಿಂದ ನವೆಂಬರ್ 04 ವರೆಗೆ ರಾಜ್ಯಾದ್ಯಾಂತ ಹಮ್ಮಿಕೊಳ್ಳಲಾಗಿದೆ ಎಂದರು. ಗದಗ ಜಿಲ್ಲೆಯಲ್ಲಿ ಒಟ್ಟು 1,83,044 ಜಾನುವಾರುಗಳಿಗೆ ಲಸಿಕೆಯನ್ನು ಹಾಕಲಾಗುವುದು. ಇದಕ್ಕಾಗಿ ಪಶುವೈದ್ಯಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ 16 ತಂಡಗಳನ್ನು, ಒಟ್ಟು 102 ಲಸಿಕೆದಾರರನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 326 ಗ್ರಾಮಗಳಿದ್ದು, 106 ಗ್ರಾಮಪಂಚಾಯತಿ ಹಾಗೂ ಒಟ್ಟು 1172 ಬ್ಲಾಕ್ ಗಳನ್ನು ಸಂಖ್ಯೆಗಳನ್ನು ರಚನೆ ಮಾಡಿ ಲಸಿಕಾ ತಂಡಗಳಿಗೆ ಗದುಗಿನ ಕರ್ನಾಟಕ ಹಾಲು ಒಕ್ಕೂಟದವರು ವಾಹನಗಳ ಸೌಲಭ್ಯ ನೀಡಿದ್ದಾರೆ. ಪ್ರತಿ ರೈತರ ಮನೆಗೆ ಬೇಟಿ ನೀಡಿ ಅವರ ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ಹಾಕಿ ಆನ್ಲೈನ್ನಲ್ಲಿ ಮಾಹಿತಿ ಭರಿಸುತ್ತಾರೆ ಎಂದು ಡಾ ಚೆನ್ನಕೇಶವಯ್ಯ ನುಡಿದರು.
ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಸೂರ್ಯಸೇನ, ಕರ್ನಾಟಕ ಹಾಲು ಉತ್ಪಾದಕರ ಸಹಕಾರ ಸಂಘದ ಡಾ. ಬಿ.ಎಸ್.ಅಂಗಡಿ ಡಾ. ಮಡಿವಾಳರ, ಡಾ. ಪಿ.ಎಸ್.ಜೆಟ್ಟಣ್ಣವರ ಜಿಲ್ಲೆಯ ಪಶುಪಾಲನಾ ಇಲಾಖೆಯ ಸಹಾಯಕ ನಿದರ್ೇಶಕರಾದ ಡಾ. ಎಸ್.ಎಸ್.ಪಾಟೀಲ, ಡಾ. ತಿಪ್ಪಣ್ಣ.ಎಸ್.ತಳಕಲ್ಲ, ಡಾ. ನಿಂಗಪ್ಪ.ಓಲೆಕಾರ, ಡಾ. ಹೆಚ್.ಬಿ.ಹುಲಗಣ್ಣವರ, ಡಾ. ಎಸ್.ವ್ಹಿ.ತಿಗರಿಮಠ, ಡಾ. ಎಸ್.ಎಸ್.ಹೊಸಮಠ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.