ಧಾರವಾಡ, ಏ.29,ಕೆಸಿಸಿ ಬ್ಯಾಂಕ್ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬುಧವಾರ 10 ಲಕ್ಷ ರೂಪಾಯಿಗಳ ಚೆಕ್‍ನ್ನು ಸಲ್ಲಿಸಲಾಯಿತು.ಬ್ಯಾಂಕಿನ ಅಧ್ಯಕ್ಷ ಬಾಪುಗೌಡ ಪಾಟೀಲ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರ ಮೂಲಕ ಚೆಕ್ ಸಲ್ಲಿಸಲಾಯಿತು. ಕೊರೊನಾ ವೈರಸ್ ಹರಡುವಿಕೆಯಿಂದ ಜನಜೀವನ ಅಸ್ತವ್ಯವಸ್ತಗೊಂಡಿದೆ. ಈ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರಕಾರ ನಿರಂತರ ಶ್ರಮಿಸುತ್ತಿದೆ. ಸರಕಾರದ ಚಾಣಾಕ್ಷತನದ ಕಾರ್ಯವೈಖರಿಯಿಂದ ಪರಿಸ್ಥಿತಿ ಗಂಭೀರ ಹಂತ ತಲುಪಿಲ್ಲ ಎಂಬುದು ಸಮಾಧಾನದ ಸಂಗತಿ. ’ಸರಕಾರಕ್ಕೆ ಈ ಸಂದರ್ಭದಲ್ಲಿ ಆರ್ಥಿಕ ನೆರವು ನೀಡುವ ಸಲುವಾಗಿ ಬ್ಯಾಂಕ್ ಮತ್ತು ಬ್ಯಾಂಕಿನ ಸಿಬ್ಬಂದಿ ಸಂಗ್ರಹಿಸಿದ 10 ಲಕ್ಷ ರೂಪಾಯಿಗಳ ಚೆಕ್‍ನ್ನು ಸಲ್ಲಿಸಲಾಯಿತು. ಅವಿಭಜಿತ ಧಾರವಾಡ ಜಿಲ್ಲೆಯ ಕಾರ್ಯವ್ಯಾಪ್ತಿ ಹೊಂದಿರುವ ಬ್ಯಾಂಕಿನ ಅಧೀನದ ಸಹಕಾರ ಸಂಘಗಳ ವತಿಯಿಂದ ಈಗಾಗಲೇ 19,20,800 ರೂಪಾಯಿಗಳನ್ನು ಸಂಗ್ರಹಿಸಿ ಸಹಕಾರ ಇಲಾಖೆಯ ಉಪನಿಬಂಧಕರ ಮೂಲಕ ಪರಿಹಾರ ನಿಧಿಗೆ ಸಲ್ಲಿಸಲಾಗಿದೆ’ ಎಂದು ಬ್ಯಾಂಕಿನ ಅಧ್ಯಕ್ಷ ಬಾಪುಗೌಡ ಪಾಟೀಲ ತಿಳಿಸಿದರು. ಬ್ಯಾಂಕಿನ ನಿರ್ದೇಶಕರಾದ ಮಲ್ಲಿಕಾರ್ಜುನ ಹೊರಕೇರಿ, ನಿಂಗನಗೌಡ ಮರಿಗೌಡರ, ಉಮೇಶ ಭೂಮಣ್ಣವರ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಮುನಿಯಪ್ಪ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.