ಬೆಂಗಳೂರು, ಏ 27, ಬೆಂಗಳೂರು ನಗರದ ಯಲಹಂಕ ಸಮೀಪದ ಮಿಟ್ಟಗಾನಹಳ್ಳಿ ಗ್ರಾಮದಲ್ಲಿ ಸುಮಾರು ೧,೩೫,೧೭೦ ರೂ. ಮೌಲ್ಯದ ನಕಲಿ ಮದ್ಯವನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಪಿ.ಎಸ್.ಶ್ರೀನಾಥ್ ತಿಳಿಸಿದ್ದಾರೆ.ಕಣ್ಣೂರು ಗ್ರಾಮ ಪಂಚಾಯಿತಿ, ಮಿಟ್ಟಗಾನಹಳ್ಳಿಯ ಮುನಿರಾಜು.ಸಿ.ಬಿನ್ ಚನ್ನಪ್ಪ ಎಂಬುವರ ಮನೆಯಲ್ಲಿ ನಕಲಿ ಮದ್ಯವನ್ನು ತಯಾರಿಸುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ದಾಳಿ ನಡೆಸಿ
ನಕಲಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ದಾಳಿ ನಡೆದ ಸ್ಥಳದಲ್ಲಿ ಒಟ್ಟು ೨.೨೫೦ ಲೀಟರ್ ನಕಲಿ ಮದ್ಯ (ಮೌಲ್ಯ ರೂ.೨.೨೫೦/-), ವಿವಿಧ ಬ್ರಾಂಡ್‌ಗಳ ೧೫.೬೪೦ ಲೇಬಲ್‌ಗಳು (ಮೌಲ್ಯ ರೂ.೪೬,೯೨೦/-), ಒಟ್ಟು ೧೪,೮೯೦ ನಕಲಿ ಎಕ್ಸೈಸ್ ಅಡೆಸಿವ್ ಲೇಬಲ್‌ಗಳು (ಮೌಲ್ಯ ರೂ.೧೪,೮೯೦/-), ವಿವಿಧ ಬ್ರಾಂಡ್‌ಗಳ ಹಾಗೂ ಬ್ರಾಂಡ್ ಹೆಸರು ಇಲ್ಲದಂತಹ ಒಟ್ಟು ೫೪.೪೦೦ ಕಿಲೋ ನಕಲಿ ಮುಚ್ಚಳಗಳು, ನೊಂದಣಿ ಸಂಖ್ಯೆ ಕೆಎ೫೩-ಇಡಬ್ಲ್ಯೂ-೦೩೯೦ ಇರುವ ಬಿಳಿ ಬಣ್ಣದ ಹೊಂಡಾ ಆಕ್ಟೀವಾ ೪ಜಿ ದ್ವಿಚಕ್ರ ವಾಹನ (ಮೌಲ್ಯ ರೂ.೬೦,೦೦೦/-) ಹಾಗೂ ನಕಲಿ ಮದ್ಯದ ಬಾಟಲುಗಳ ಕ್ಯಾಪ್ ತ್ರೆಡ್ಡಿಂಗ್ ಮಾಡಲು ಬಳಸುವ ಒಂದು ಕಬ್ಬಿಣದ ಹ್ಯಾಂಡ್ ಮೆಷಿನ್ (ಮೌಲ್ಯ ರೂ.೨೫,೦೦೦/-) ಗಳನ್ನು ಇಲಾಖಾ ವಶಕ್ಕೆ ತೆಗೆದುಕೊಳ್ಳಲಾಗಿದೆ. ಸ್ಥಳದಲ್ಲಿದ್ದ ಆರೋಪಿಗಳಾದ ಮುನಿರಾಜು.ಸಿ ಬಿನ್ ಚನ್ನಪ್ಪ ಹಾಗೂ ಚೇತನ್‌ಕುಮಾರ್.ಎಂ ಬಿನ್ ಮುನಿರಾಜು ಇವರುಗಳನ್ನು ದಸ್ತಗಿರಿ ಮಾಡಲಾಗಿದೆ ಪಿ.ಎಸ್. ಶ್ರೀನಾಥ್ ತಿಳಿಸಿದ್ದಾರೆ.