ಲೋಕದರ್ಶನ ವರದಿ
ಹೂವಿನಹಡಗಲಿ 17: ತಾಲೂಕಿನ ಸೋಗಿ ಗ್ರಾಮದಲ್ಲಿ ನಡೆದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬಳ್ಳಾರಿ ಹಾಗೂ ಬಾಲ ಬಸವೇಶ್ವರ ಪರಿಶಿಷ್ಠ ಜಾತಿ ಜಾನಪದ ಕಲಾ ಸಂಘ ರಿ ವತಿಯಿಂದ ಗ್ರಾಮೀಣ ಕ್ರೀಡೋತ್ಸವದ ಉದ್ಘಾಟನೆ ಮಾಡಿದ, ಸೋಗಿ ಜಿಲ್ಲಾ ಪಂಚಾಯತ್ ಜಿಲ್ಲಾ ಪಂ.ಸದಸ್ಯರಾದ ಪಿ.ವಿಜಯಕುಮಾರ್, ಗ್ರಾಮೀಣ ಕ್ರೀಡೆಗಳು ಬೌದ್ಧಿಕ ವಿಕಾಸನಕ್ಕೆ ಪ್ರೇರಣೆ ನೀಡುತ್ತವೆ, ಕೋಕೋ, ಕಬ್ಬಡ್ಡಿ, ವಾಲಿಬಾಲ್ ಪಂದ್ಯಾವಳಿ, ಮನಸ್ಸನ್ನು ಕೇಂದ್ರೀಕರಿಸಿ ಏಕಾಗ್ರತೆಯ ಗುರಿ ಮುಟ್ಟಲು ಆದರಿಸುತ್ತವೆ, ಆಟಗಳಲ್ಲಿ ತರಬೇತಿ ಮುಖ್ಯ
ಶ್ರದ್ಧೆ ಭಕ್ತಿ, ವಿನಯ, ಕಲಿಕೆಗೆ ಪೂರಕವಾಗಿ ನಿರಂತರ ಪ್ರಯತ್ನ ಪಟ್ಟರೆ ಕ್ರೀಡೆಗಳನ್ನು ಎದುರಿಸಲು ಸಾಧ್ಯ, ಅಸಾದ್ಯ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ, ಮಕ್ಕಳಿಗೆ, ಆಟಗಾರರಿಗೆ ಪ್ರೋತ್ಸಾಹಿಸುವ ಕೈಗಳು ಅವರನ್ನು ಹುರಿದುಂಬಿಸುವ ಪೋಷಕರು, ಶಿಕ್ಷಕರು, ಅವರಲ್ಲಿ ಲವಲವಿಕೆಯಿಂದ ನಡೆದುಕೊಳ್ಳಲು, ಬೆನ್ನು ತಟ್ಟಿ ಹುರುಪು ಉತ್ಸಾಹ ತುಂಬುವ ಕೆಲಸ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಲ್ಲಪ್ಪ ಮುಖ್ಯ ಶಿಕ್ಷಕರು ಮಾತನಾಡಿದರು, ಗ್ರಾ.ಪಂ.ಅಧ್ಯಕ್ಷೆ ಹೇಮಕ್ಕ ಕುಬೇರಪ್ಪ, ಸೋಗಿ ತಾ.ಪಂ. ಸದಸ್ಯ ನಾರಾಯಣ ಸ್ವಾಮಿ,ಸಿ. ಗಂಗೇಶ್ ಶಿಕ್ಷಕರು, ನಿಂಗಪ್ಪ ಪಿಡಿಒ ಸೋಗಿ, ಡಿ.ನಿರ್ಮಲಮ್ಮ ಎಸ್ ಡಿಎಂಸಿ ಅಧ್ಯಕ್ಷರು ಸ.ಹಿ.ಪ್ರಾ.ಶಾಲೆ, ಕೆ.ರುದ್ರಪ್ಪ ಬ.ಅ.ಸದಸ್ಯರು ಬಾಗಲಕೋಟೆ, ಕೆ.ವಿರೂಪಾಕ್ಷಪ್ಪ ಶಿಲ್ಪಿ, ಸೊಗಿ ಗ್ರಾ.ಪಂ. ಸದಸ್ಯರಾದ, ಪತ್ರೆಪ್ಪ, ಯಲ್ಲಪ್ಪ, ಎಲ್ಲಾ ಸಿಬ್ಬಂದಿ ವರ್ಗ, ಬಾಲ ಬಸವೇಶ್ವರ ಪರಿಶಿಷ್ಠ ಜಾತಿ ಮತ್ತು ಜಾನಪದ ಕಲಾ ಸಂಘ ರಿ ಅಧ್ಯಕ್ಷ ಪಿ.ಪರಮೇಶಪ್ಪ, ಉಪಅಧ್ಯಕ್ಷ. ಬಸವರಾಜ್, ಎಸ್. ಮುದ್ದುರುಗಪ್ಪ, ದಂಡ್ಯಪ್ಪ, ಮೈಲಾರೆಪ್ಪ, ಸೋಗಮ್ಮನವರ ದಂಡ್ಯಪ್ಪ, ಕಾರ್ಯಕ್ರಮದ ಪ್ರಾರ್ಥನೆ ಶಾಲಾ ಮಕ್ಕಳಿಂದ, ಸ್ವಾಗತ ಕೆ.ಮಂಜುನಾಥ್ ಶಿಕ್ಷಕರು, ನಿರೂಪಣೆ ಗುರುಪಾದಪ್ಪ ಶಿಕ್ಷಕರು, ಮಹಾಂತೇಶ್ ಶಿಕ್ಷಕರು ವಂದಿಸಿದರು.ಮತ್ತಿತರರು ಉಪಸ್ಥಿತರಿದ್ದರು.