ಹೂವಿನಹಡಗಲಿ: ಮೆಕ್ಕೆಜೋಳ ಹೊಲಕ್ಕೆ ಕೃಷಿ ನಿದರ್ೇಶಕರು ಭೇಟಿ

ಲೋಕದರ್ಶನ ವರದಿ

ಹೂವಿನಹಡಗಲಿ 20: ತಾಲೂಕಿನ ನಂದಿಹಳ್ಳಿ ಗ್ರಾಮದ ನೀರಾವರಿ ಪ್ರದೇಶದಲ್ಲಿ ಈಗಾಗಲೇ ಬಿತ್ತನೆ ಮಾಡಿರುವ ಮೆಕ್ಕೆಜೋಳ ಬೆಳೆಗೆ ಸೈನಿಕ ಹುಳು ಬಾಧೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಬಳ್ಳಾರಿ ಜಂಟಿ ಕೃಷಿ ನಿದರ್ೇಶಕ ಡಾ.ಮಲ್ಲಿಕಾರ್ಜುನ  ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಕಳೆದ ಒಂದು ತಿಂಗಳ ಹಿಂದೆ ನೀರಾವರಿ ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ ಗ್ರಾಮದ ರೈತ ಅರುಣಿ ಬಸವರಾಜ ಈಚೆಗೆ ಬೆಳೆಯಲ್ಲಿ ಸೈನಿಕ ಹುಳುಗಳು ಹೆಚ್ಚಾಗಿದ್ದರಿಂದ ಕೃಷಿ ಜಂಟಿ ನಿದರ್ೇಶಕರು ಬೆಳೆಯನ್ನು ವೀಕ್ಷಿಸಿದ ಅವರು ರೈತರು ಕೀಟ ಬಾಧೆಯನ್ನು ಆರಂಭಿಕ ಹಂತದಲ್ಲಿ ಗುರುತಿಸುವುದರಿಂದ ರೋಗ ನಿಯಂತ್ರಿಸಬಹುದು.ಜತೆಗೆ ಕೀಟನಾಶಕಗಳನ್ನು ಬಳಕೆಯಿಂದ ರೋಗ ಹತೋಟಿಗೆ ತರಬಹುದು ಎಂದರು.

ಸೈನಿಕ ಹುಳು ಬಾಧೆ ಕಾಣಿಸಿಕೊಂಡಿರುವ ಹೊಲಗಳಿಗೆ ಕಳೆದ ಒಂದು ವಾರದಿಂದ ನಿರಂತರ ಕೃಷಿ ಅಧಿಕಾರಿಗಳು ಭೇಟಿ ನೀಡಿ ರೈತರಿಗೆ ಅಗತ್ಯ ಸಲಹೆಗಳನ್ನು ನೀಡಿದ್ದಾರೆ. ಕೀಟ ನಾಶಕಗಳನ್ನು ಸಿಂಪರಣೆಯಿಂದ ರೋಗ ಹತೋಟಿಗೆ ಬಂದಿದೆ ಎಂದು ಸಹಾಯಕ ಕೃಷಿ ನಿದರ್ೇಶಕ ನೀಲಾನಾಯ್ಕ ಮಾಹಿತಿ ನೀಡಿದರು. 

ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಂದಾಳು ಹನುಮಂತಪ್ಪ, ಶ್ರೀಹರಿ, ಕೃಷಿ ಇಲಾಖೆ ಸೌಜನ್ಯ, ಸವಿತಾ, ರೈತರಾದ ಅರುಣಿ ಬಸವರಾಜ, ಪಿ.ವಿ.ಬಸವರಾಜ, ವಿ.ಬಿ.ಶಿವಾನಂದ, ಕಂಠಿ ಆದರ್ಶ, ಎಂ.ವಿರುಪಾಕ್ಷಿ, ಅರುಣಿ ರುದ್ರಪ್ಪ ಇದ್ದರು.