ಶೂನ್ಯ ಮಲೇರಿಯಾ ನನ್ನಿಂದ ಪ್ರಾರಂಭ ಘೋಷಣೆಯಡಿ ವಿಶ್ವ ಮಲೇರಿಯಾ ದಿನಾಚರಣೆ

ಗದಗ 25:  ಗ್ರಾಮೀಣ ಹಾಗೂ ನಗರ ಪ್ರದೇಶದ  ಜನರಲ್ಲಿ ಮಲೇರಿಯಾ ಕುರಿತು  ಜಾಗೃತಿ ಮೂಡಿಸುವ ಮೂಲಕ   ಗದಗ ಜಿಲ್ಲೆಯನ್ನು ಮಲೇರಿಯ ಮುಕ್ತ ಜಿಲ್ಲೆಯನ್ನಾಗಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಂಡು ನಿಂತ ನೀರು ಸರಾಗವಾಗಿ ಹರಿದುಹೋಗುವಂತೆ ಮೂಡುವುದರ ಮೂಲಕ ಮಲೇರಿಯಾ ಬಾರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ  ಡಾ. ವಿರುಪಾಕ್ಷರೆಡ್ಡಿ ಮಾದಿನೂರ ನುಡಿದರು.   

ಗದಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಸಭಾಂಗಣದಲ್ಲಿಂದು ಶೂನ್ಯ ಮಲೇರಿಯಾ ನನ್ನಿಂದ  ಪ್ರಾರಂಭ ಘೋಷಣೆಯಡಿ  ಜರುಗಿದ  ವಿಶ್ವ ಮಲೇರಿಯಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ  ಡಾ. ಅರುಂಧತಿ ಕೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ  ಮಲೇರಿಯಾ ಅನಾದಿ ಕಾಲದಿಂದಲೂ ಬಂದಿರುವ ಸಾಂಕ್ರಾಮಿಕ ರೋಗವಾಗಿದ್ದು ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವದರ ಮೂಲಕ ಮಲೇರಿಯಾ ತಡೆಗಟ್ಟಬಹುದು.  ಜಿಲ್ಲೆಯಲ್ಲಿ   2017 ರಲ್ಲಿ ಒಟ್ಟು 198 ಮಲೇರಿಯಾ ಪ್ರಕರಣಗಳು , 2018 ರಲ್ಲಿ ಒಟ್ಟು 115 ಮಲೇರಿಯಾ ಪ್ರಕರಣಗಳು ಹಾಗೂ 2019 (ಮಾರ್ಚವರೆಗೆ) ಒಟ್ಟು 12 ಮಲೇರಿಯಾ ಪ್ರಕರಣಗಳು ಖಚಿತವಾಗಿದ್ದು ಗಣನೀಯವಾಗಿ ಮಲೇರಿಯ ಪ್ರಕರಣಗಳು ಇಳಿಮುಖವಾಗಿವೆ.   ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ  ಆರೋಗ್ಯಕರ ಪರಿಸರ ನಿಮರ್ಿಸುವ ನಿಟ್ಟಿನಲ್ಲಿ   ಪ್ರತಿಯೊಬ್ಬರೂ ಮಲೇರಿಯಾ ಕುರಿತು ಜಾಗ್ರತಿ ವಹಿಸಬೇಕಾಗಿದೆ.  ಎಲ್ಲ ಸಕರ್ಾರಿ ಆಸ್ಪತ್ರೆಗಳಲ್ಲಿ ಮಲೇರಿಯಾ ರೋಗಕ್ಕೆ ಉಚಿತ ಚಿಕಿತ್ಸೆ ನೀಡಲಾಗುವುದು  ಎಂದು ಡಾ. ಅರುಂಧತಿ ಕೆ ತಿಳಿಸಿದರು. 

       ಸಹಾಯಕ ಕೀಟಶಾಸ್ತ್ರಜ್ಞರಾದ  ಅನ್ನಪೂರ್ಣ ಶೆಟ್ಟರ್ ಅವರು ಉಪನ್ಯಾಸ ನೀಡಿ  ಮಲೇರಿಯಾವು ಅನಾಫೆಲಿಸ್ ಹೆಣ್ಣು ಸೊಳ್ಳೆಯಿಂದ ಬರುವ ಸಾಂಕ್ರಾಮಿಕ ರೋಗವಾಗಿದ್ದು ಜವಳು ಪ್ರದೇಶದಲ್ಲಿ ನಿಂತ ನೀರಲ್ಲಿ ಮಲೇರಿಯಾ ರೋಗ ಹರಡುವ ಸಾಧ್ಯತೆ ಹೆಚ್ಚು.    ತೀವ್ರ ಜ್ವರ, ತಲೆನೋವು, ವಾಂತಿ   ಮಲೇರಿಯಾ ರೋಗದ  ಸ್ವರೂಪಗಳಾಗಿವೆ.   ಮಲೇರಿಯಾ ಪ್ರಕರಣಗಳನ್ನು ಸಂಶಯಾಸ್ಪದ, ಖಚಿತ ರೋಗ ಹಾಗೂ ತೀವ್ರತರ ಎಂದು ಗುರುತಿಸಲಾಗುತ್ತದೆ.    ರಕ್ತ ಲೇಪನಗಳನ್ನು ಸಂಗ್ರಹಿಸಿದ 24 ಗಂಟೆಗಳ ಒಳಗೆ ಪರೀಕ್ಷೆಗೆ ಒಳಪಡಿಸಿ ಮಲೇರಿಯಾ ಧನಾತ್ಮಕ ಪ್ರಕರಣಗಳಿಗೆ  ಚಿಕಿತ್ಸೆ ಗಾಗಿ ಕ್ರಮ ಕೈಗೊಳ್ಳಲಾಗುತ್ತದೆ

       ಮಲೇರಿಯಾ ಜೈವಿಕ ನಿಯಂತ್ರಣ ಕ್ರಮಗಳ ಅಡಿಯಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳಲ್ಲಿ ಲಾವರ್ಾಹಾರಿ ಮೀನುಗಳನ್ನು   ಬಿಡುವ ಮೂಲಕ , ದೀರ್ಘಕಾಲಿಕ ಕೀಟನಾಟಕ ಉಪಚರಿತ ಸೊಳ್ಳೆ ಪರದೆಗಳನ್ನು ಉಪಯೋಗಿಸುವುದು, ಬೇವಿನ ಸೊಪ್ಪು ಹೊಗೆ ಹಾಕುವುದರ ಮೂಲಕ,  ಸುತ್ತ ಮುತ್ತ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳುವುದರ ಮೂಲಕ ಮಲೇರಿಯಾ ರೋಗವನ್ನು  ತಡೆಗಟ್ಟಬಹುದು. ವಲಸೆ ಬಂದ ಕಟ್ಟಡ ಕೆಲಸನಿರತ ಕಾಮರ್ಿಕರುಗಳಿಂದ ಮಲೇರಿಯಾ ರೋಗ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮಲೇರಿಯಾ ಕುರಿತು ಅರಿವು ಮೂಡಿಸುವುದು,  ಸೊಳ್ಳೆ ಕಚ್ಚುವುದನ್ನು ತಡೆಗಟ್ಟುವುದು,    ಮಾತ್ರೆ ಮೂಲಕ ಚಿಕಿತ್ಸೆ ನೀಡುವುದು ಹಾಗೂ   ಆದಷ್ಟು  ಬೇಗನೆ ರಕ್ತ ಪರೀಕ್ಷೆ ಮಾಡಿಸುವುದು ಈ ನಾಲ್ಕು ಅಂಶಗಳನ್ನು ಅಳವಡಿಸಿಕೊಂಡರೆ    ಮಲೇರಿಯಾ ತಡೆಗಟ್ಟಬಹುದಾಗಿದೆ. ಎಂದು ಅನ್ನಪೂರ್ಣ ಶೆಟ್ಟರ್ ತಿಳಿಸಿದರು. 

ಕಾರ್ಯಕ್ರಮದಲ್ಲಿ  ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ಸತೀಶ ಬಸರಿಗಿಡದ, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಎಸ್.ಎಮ್. ಹೊನಕೇರಿ ,  ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ವಾಯ್ ಕೆ ಭಜಂತ್ರಿ,  ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ. ರೇಣುಕಾ ಕೊರನವರ,  ರೋಣ ತಾಲೂಕಾ ಆರೋಗ್ಯಾಧಿಕಾರಿ ಡಾ. ಭಜಂತ್ರಿ,   ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ ಎಚ್.   ಡಿ.ಎಚ್.ಎಸ್. ಮಹಾಜನ ವಿವಿ,  ಗೀತಾ ಕಾಂಬಳೆ, ಯರಗುಡಿ, ಎಮ್.ಎಚ್.ಕದಾಂಪುರ, ಅಜಯ ಕುಮಾರ್ ಕಲಾಲ, ಆರ್.ಎ. ಬಿಲ್ಲಾಳ, ವೈ.ವೈ. ಹಕ್ಕಿ,  ಕೋಳಿವಾಡ, ಅನಿತಾ, ಪರಮೆಶ್ವರಪ್ಪ, ಕರಡಿಗುಡ್ಡ   ಮೃತ್ಯುಂಜಯ ಹಿರೇಮಠ,   ಐ.ಎಸ್. ಚಿಲ್ಮಿ,  ಅನಿತಾ, ಎಸ್.ಎಸ್.ಕುಬಸದ ಆರೋಗ್ಯ ಇಲಾಖೆಯ   ಸಿಬ್ಬಂದಿಗಳು   ಉಪಸ್ಥಿತರಿದ್ದರು.