ಲೋಕದರ್ಶನ ವರದಿ
ಗಜೇಂದ್ರಗಡ 02: ಕಾರ್ಮಿಕ ತಮ್ಮ ಬಡತನವನ್ನು ಹೋಗಲಾಡಿಸಲು ಅವರು ದಿನನಿತ್ಯದ ಕೆಲಸವನ್ನು ಮಾಡುತ್ತಾರೆ. ಕಾರ್ಮಿಕರನ್ನು ಎಂದಿಗೂ ಕೀಳರಿಮೆಯಿಂದ ಕಾಣಬಾರದು. ಕಾಯಕವೇ ಕೈಲಾಸ ವೆಂದ ಬಸವಣನವರು ಕಾಯಕ ನಿಷ್ಠೆಗೆ ಗೌರವ ನೀಡದ್ದರು. ನಮ್ಮ ಅಂಗಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಕಾರ್ಮಿಕರಂತೆ ಕಾಣದೆ ಸಹೋದರರಂತೆ ಕಾಣುತ್ತಿದ್ದೇವೆ ಎಂದು ಉದ್ಯಮಿ ಅಜಿತ್ ಕುಮಾರ್ ಭಾಗಮಾರ ಹೇಳಿದರು.
ಪಟ್ಟಣದ ಜೋಡುರಸ್ತೆಯಲ್ಲಿನ ಭಾಗಮಾರ ಅಂಗಡಿಯಲ್ಲಿ ಕೆಲಸ ಮಾಡುವ ಕಾರ್ಮಿಕ ದಿನಾಚರಣೆ ನಿಮಿತ್ಯವಾಗಿ ಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದ ಅವರು ನಮ್ಮ ಅಂಗಡಿಯಲ್ಲಿ 3 ದಶಕಗಳಿಗೂ ಹೆಚ್ಚು ಪ್ರಾಮಾಣಿಕವಾಗಿ ಕೆಲಸ ಮಾಡಿದ ಅವರಿಗೆ ಈ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಅವರಿಗೆ ಸೂಕ್ತ ಗೌರವ ಸಲ್ಲಿಸಿದ್ದು ನಮ್ಮಗೆ ತುಂಬಾ ಖುಷಿ ವಿಚಾರವಾಗಿದೆ.
ಈ ಪರಂಪರೆಯನ್ನು ನಮ್ಮ ತಂದೆಯವರಾದ ಅಶೋಕ ಕುಮಾರ ಭಾಗಮಾರ ಅವರು ಇಂತಹ ಸಮಾಜಮುಖಿ ಕಾರ್ಯಗಳಿಂದ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದರು. ಕಾರ್ಮಿಕರಾದಕಳಕಪ್ಪ ಹಿರೇಕೊಪ್ಪ, ರಾಮು ಜಗತಾಪ, ವಿರೇಶ ಅಂಗಡಿ, ಮೈಬು ಚಾಮಲಪೂರ, ಶಿವು ದೇಸಾಯಿ, ಹನಮಂತಸಿಂಗ, ಶಿವರಾಜ್ ಎಸ್. ಸನ್ಮಾನಿಸಲಾಯಿತು.
ಬಾಗಮಾರ ಕುಟುಂಬದ ಸರ್ವ ಸದಸ್ಯರು ಈ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು