ಗ್ರಾಮ ಪಂಚಾಯತಿ ಮತ್ತು ಗ್ರಾಮಸ್ಥರ ಸಹಕಾರದಲ್ಲಿ ಕಾಮಗಾರಿ ಪ್ರಗತೀ
ಬೀಳಗಿ 22 : ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್, ಇವರಿಂದ ತಾಲೂಕಿನ ಸುನಗ ಗ್ರಾಮ ಪಂಚಾಯತಿ ವ್ಯಾಪ್ತಿಯ ಸುನಗ ತಾಂಡಾದಲ್ಲಿ 6 ಎಕರೆ ವಿಸ್ತೀರ್ಣದ ಕೆರೆಯನ್ನು ಯೋಜನೆಯವತಿಯಿಂದ ಅಂದಾಜು 10ಲಕ್ಷ ಮೊತ್ತದಲ್ಲಿ ಕೆರೆಯ ಉಳು ತೆಗೆಯುವ ಕಾಮಗಾರಿಯು ತಾಲೂಕ ಯೋಜನಾಧಿಕಾರಿ ಸುಬ್ರಾಯ್ ಕೆ. ಗೌಡ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಣಮಂತ ಪವಾರ್, ಸದಸ್ಯ ಪ್ರಭು ಲಮಾಣಿ, ಮಲ್ಲಪ್ಪ ತೋಳಮಟ್ಟಿ, ಕೃಷಿ ಮೇಲ್ವಿಚಾರಕ ದ್ಯಾಮಣ್ಣ ದ್ಯಾಮಣ್ಣವರ ಸೇರಿದಂತೆ ಇತರರು ಇದ್ದರು. ಗ್ರಾಮ ಪಂಚಾಯತಿ ಮತ್ತು ಗ್ರಾಮಸ್ಥರ ಸಹಕಾರದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.