ಲೋಕದರ್ಶನ ವರದಿ
ವಿಜಯಪುರ 20: "ಮಹಾದಾಯಿ ವಿಚಾರದಲ್ಲಿ 7 ಟಿ.ಎಂ.ಸಿ ನೀರಿಗಾಗಿ ಐದು ಜಿಲ್ಲೆಯ ಜನತೆ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ ತಿಕೋಟಾ ಭಾಗದಲ್ಲಿ ಯಾವುದೇ ಹೋರಾಟವಿಲ್ಲದೆ, ನಿಮ್ಮ ಪರವಾಗಿ ನಾನೊಬ್ಬನೆ ಏಕಾಂಗಿಯಾಗಿ ಹೋರಾಟ ಮಾಡಿ, 7ಟಿ.ಎಂ.ಸಿ ನೀರನ್ನು ನಿಮ್ಮ ಜಮೀನಿಗೆ ಹರಿಸುತ್ತಿದ್ದೇನೆ" ಎಂದು ಮಾಜಿ ಜಲಸಂಪನ್ಮೂಲ ಸಚಿವ, ಶಾಸಕ ಎಂ.ಬಿ.ಪಾಟೀಲ್ ಹೇಳಿದರು.
ತಮ್ಮ ಸ್ವಕ್ಷೇತ್ರದ ತಿಕೋಟದಲ್ಲಿ ಇಂದು ತುಬಚಿ-ಬಬಲೇಶ್ವರ ಏತನೀರಾವರಿ ಯೋಜನೆ ಪಶ್ಚಿಮ ಕಾಲುವೆಗೆ ಪ್ರಾಯೋಗಿಕವಾಗಿ ನೀರು ಹರಿಸಿ ಮಾತನಾಡಿದ ಅವರು "ಈ ಯೋಜನೆಗೆ ಮೊದಲು 3.8ಟಿ.ಎಂ.ಸಿ ನೀರನ್ನು ಹಂಚಿಕೆ ಮಾಡಲಾಗಿತ್ತು. ಗೋದಾವರಿ-ಕೊಲ್ಲಾವರಂ ಕಣಿವೆಯ ಉಳಿತಾಯದಡಿ ಮತ್ತೆ 3ಟಿ.ಎಂ.ಸಿ ನೀರನ್ನು ನನ್ನ ಕ್ಷೇತ್ರದ ಜನತೆಯ ಮೇಲಿನ ಪ್ರೀತಿಗಾಗಿ ನೀಡಿದೆ. ಆದರೆ ಇದೇ ಪ್ರಮಾಣದ ನೀರನ್ನು ಪಡೆಯಲು ಗದಗ-ಬೆಳಗಾವಿ-ಧಾರವಾಡ ಸೇರಿದಂತೆ ಐದು ಜಿಲ್ಲೆಯ ಜನರು ಮಹದಾಯಿ ವಿಚಾರದಲ್ಲಿ ನಿರಂತರ ಹೋರಾಟ ಮಾಡುತ್ತಿದ್ದಾರೆ. ಈ ಭಾಗದ ಜನ ಸುದೈವಿಗಳು ನಿಮಗೆ ಹೋರಾಟವಿಲ್ಲದೇ ನೀರು ಹರಿಯುತ್ತಿದೆ. ಆದರೆ ಇದಕ್ಕಾಗಿ ನೀವು ಹೋರಾಟ ಮಾಡರಿಲ್ಲಿಕ್ಕಿಲ್ಲ. ನಾನು ಜಲಸಂಪನ್ಮೂಲ ಸಚಿವನಾಗಿದ್ದರೂ ಒಂದು ಹೋಬಳಿಗೆ 3600 ಕೋಟಿ ಹಣ ತರಲು ಹೋರಾಟ ಮಾಡಿದ್ದೇನೆ" ಎಂದರು.
"ನಾನು ಎಂದಿಗೂ ಹೇಳದ ವಿಚಾರವನ್ನು ನೀರು ಹರಿಯುತ್ತಿರುವ ಈ ಸಂದರ್ಭದಲ್ಲಿ ಹೇಳುತ್ತಿದ್ದೇನೆ. ಕನರ್ಾಟಕ ನೀರಾವರಿ ನಿಗಮದ ಬೋಡರ್್ ಮಿಟಿಂಗ್ನಲ್ಲಿ ಈ ಯೋಜನೆಗೆ ಇಷ್ಟು ದೊಡ್ಡ ಮೊತ್ತದ ಹಣ ಕೊಡಲು ಆಗುವದಿಲ್ಲ ಎಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದರು. ನಾನು ಇದು ನನ್ನ ಸ್ವಕ್ಷೇತ್ರ, ಈ ಯೋಜನೆ ನನ್ನ ಕನಸಿನ ಯೋಜನೆ, ಇದಕ್ಕೆ ಹಣ ಕೊಡದಿದ್ದರೇ ಹೇಗೆ? ಎಂದು ಸಿಟ್ಟಿನಿಂದ ಅಂದೇ ಜಲಸಂಪನ್ಮೂಲ ಖಾತೆ ರಾಜೀನಾಮೆ ನೀಡಿ, ಹೊರಬರಲು ಫೈಲ್ ಎತ್ತಿಕೊಂಡೆ. ಅದೇ ಸಭೆಯಲ್ಲಿದ್ದ ನಿಗಮ ತಾಂತ್ರಿಕ ನಿದರ್ೆಶಕ ಡಾ.ವಿ.ಪಿ.ಹುಗ್ಗಿ ನನ್ನ ಕೋಪ ಗಮನಿಸಿ, ಕೈಮುಗಿದು ಶಾಂತರಾಗುವಂತೆ ವಿನಂತಿಸಿದರು. ನಂತರ ಸುಮ್ಮನಾದೆ. ನನ್ನ ಸಿಟ್ಟನ್ನು ಗಮನಿಸಿದ ಸಿದ್ದರಾಮಯ್ಯನವರೇ ಸಂಜೆ ಮತ್ತೆ ಬರ ಹೇಳಿ, ಈ ಯೋಜನೆಯ ಕಡತ ಮಂಜೂರು ಮಾಡಿ, ಇಷ್ಟು ದೊಡ್ಡ ಮೊತ್ತದ ಹಣವನ್ನು ನೀಡಿದರು" ಎಂದು ಎಂ.ಬಿ.ಪಾಟೀಲ್ ವಿವರಿಸಿದರು.
ಹಿರಿಯ ಮುಖಂಡ ಕೆ.ಆರ್.ಮೆಂಡೆಗಾರ ವಕೀಲರು ಮಾತನಾಡಿ ಜಿಲ್ಲೆಯ ಅತ್ಯಂತ ಎತ್ತರದ ಈ ಪ್ರದೇಶದಲ್ಲಿ ನೀರು ಹರಿಸುವ ಮೂಲಕ ಈ ಭಾಗದ ರೈತರ ಬದುಕು ಬಂಗಾರಗೊಳಿಸಿದ್ದಾರೆ. ಅವರು ಇನ್ನೂ ಇಲ್ಲಿ ಮಾಡುವ ಕೆಲಸಗಳು ಏನು ಉಳಿದಿಲ್ಲ. ಅವರನ್ನು ನಾಡಿನ ಮುಖ್ಯಮಂತ್ರಿಗಳಾಗಿ ನೋಡುವ ಆಸೆ ಕೈಗೂಡಲಿ ಎಂದರು.
ಕಾರ್ಯನಿರ್ವಹಕ ಅಭಿಯಂತರ ಶಂಕರ ರಾಠೋಡ, ಡಾ.ವಿ.ಪಿ.ಹುಗ್ಗಿ, ತಮ್ಮಣ್ಣ ಹಂಗರಗಿ, ಅಭಯಕುಮಾರ ನಾಂದ್ರೆಕರ, ಪ್ರಕಾಶ ಗಣಿ, ಭಾಗೀರಥಿ ತೇಲಿ, ತಾ.ಪಂ ಸದಸ್ಯೆ ಪ್ರಭಾವತಿ ನಾಟಿಕಾರ, ರಾಜು ಮಸಳಿ ಬಿಜ್ಜರಗಿ, ಮಲ್ಲಿಕಾರ್ಜುನ ಲೋಣಿ, ಬಾಬುಗೌಡ ಬಿರಾದಾರ, ಎ.ಕೆ.ಬಿರಾದಾರ, ಸಿದ್ದು ಗೌಡನವರ, ಗುರುಲಿಂಗ ಮಾಳಿ, ಸುಭಾಶ ಅಕ್ಕಿ, ಜಾಕಿರ ಬಾಗವಾನ ಸೇರಿದಂತೆ ತಿಕೋಟಾ, ಬಿಜ್ಜರಗಿ, ಬಾಬಾನಗರ, ಕನಮಡಿ, ಘೋಣಸಗಿ, ಕಳ್ಳಕವಟಗಿ ಮತ್ತಿತರೆ ಗ್ರಾಮಸ್ಥರು ಉಪಸ್ಥಿತರಿದ್ದರು.