ವಿಜಯಪುರ: ದೈಹಿಕ ಸದೃಢತೆಗೆ ಕ್ರೀಡೆಗಳು ಸಹಕಾರಿ: ಡಾ.ಕಟ್ಟಿ

ಲೋಕದರ್ಶನ ವರದಿ

ವಿಜಯಪುರ 12: ಮಾನವನ ದೈಹಿಕ, ಮಾನಸಿಕ ವಿಕಾಸಕ್ಕೆ ಕ್ರೀಡೆಗಳು ಸಹಕಾರಿಯಾಗಿವೆ ಎಂದು ಜಿಲ್ಲಾ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಎಸ್.ಎ. ಕಟ್ಟಿ ಹೇಳಿದರು.

ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಆಸ್ಪತ್ರೆ ನೌಕರರ ಕ್ಷೇಮಾಭಿವೃದ್ದಿ ಸಂಘದ ಸಹಯೋಗದಲ್ಲಿ 73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಸ್ಪತ್ರೆ ಸಿಬ್ಬಂದಿಗಳಿಗಾಗಿ ಏರ್ಪಡಿಸಿದ್ದ ಕಬಡ್ಡಿ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.  

ದೈನಂದಿನ ಕೆಲಸದ ಬಿಡುವಿನ ವೇಳೆಯಲ್ಲಿ ಕ್ರೀಡೆ, ಯೋಗ, ವ್ಯಾಯಾಮದಂತಹ ಹವ್ಯಾಸಗಳನ್ನು ರೂಢಿಸಿಕೊಂಡರೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸದೃಢವಾಗಲು ಸಾಧ್ಯವಾಗುತ್ತದೆ ಎಂದರು. 

ವಿಜಯಪುರ ಜಿಲ್ಲಾ ಅಮೆಚೂರ ಕಬಡ್ಡಿ ಅಸೋಶಿಯೇಶನ ಕಾರ್ಯದಶರ್ಿ ಬಂಡೆಪ್ಪ ತೇಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ಏರ್ಪಡಿಸುವದರಿಂದ ಪ್ರತಿನಿತ್ಯ ಉಲ್ಲಾಸದೊಂದಿಗೆ ಕೆಲಸ ಮಾಡಲು ಸಾಧ್ಯವಾಗುವುದು ಎಂದರು.

ಈ ಕಬಡ್ಡಿ ಕ್ರೀಡಾಕೂಟದಲ್ಲಿ  ಸುಪರಸ್ಟಾರ ತಂಡ ಪ್ರಥಮ ಸ್ಥಾನ ಪಡೆದರೆ ಯಂಗ್ಸ್ಟಾರ್ ತಂಡದವರು ದ್ವಿತೀಯ ಸ್ಥಾನ ಪಡೆದುಕೊಂಡರು. 

ವೈದ್ಯಾಧಿಕಾರಿಗಳಾದ ಡಾ.ಎಸ್.ಎಲ್. ಲಕ್ಕಣ್ಣವರ, ಡಾ.ಧರ್ಮರಾಜು ಇಂಗಳೆ, ಡಾ.ಪರಶುರಾಮ ದೇವಮಾನೆ, ಡಾ.ಶಶಿಕಲಾ ಹಿರೇಮನಿ, ಡಾ.ಮಹೇಶ ಮೋರೆ, ಡಾ.ವಿನೋದ, ಡಾ.ಬಿರಾದಾರ, ಡಾ.ಅಶೋಕ ಜಾಧವ, ಎ.ಎ. ಸಿಂದಗಿಕರ, ಪ್ರದೀಪ ಕ್ಯಾತನ, ಸಂತೋಷ್ಪ ಬಿರಾದಾರ, ಆರ್.ಕಡಗಾವಿ ಹಾಗೂ ಆಸ್ಪತ್ರೆ ನೌಕರರ ಕ್ಷೇಮಾಭಿವೃದ್ದಿ ಸಂಘದ ಕಾರ್ಯದಶರ್ಿ ರವಿ ಕಿತ್ತೂರ, ಕಬಡ್ಡಿ ಕ್ರೀಡಾಕೂಟ ನಿರ್ಣಯಕರಾಗಿ ಎಸ್.ಆರ್. ಬಿರಾದಾರ ಉಪಸ್ಥಿತರಿದ್ದರು.