ಲೋಕದರ್ಶನ ವರದಿ
ವಿಜಯಪುರ 10: ಶಿವಣಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಅಲ್ಲಿನ ರೈತರು ಹಾಗೂ ಗ್ರಾಮಸ್ಥರು ರೈತ- ಕೃಷಿ ಕಾಮರ್ಿಕರ ಸಂಘಟನೆಯ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಅಂಬೇಡ್ಕರ ವೃತ್ತದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧೀಕಾರಿಗಳಿಗೆ ಮನವಿ ಸಕಲ್ಲಿಸಿದರು.
ಆಸ್ಪತ್ರೆಯಲ್ಲಿ ಹೆರಿಗೆ ಒಳಗೊಂಡಂತೆ ಎಲ್ಲ ರೋಗಕ್ಕೂ ಚಿಕಿತ್ಸೆ ಸಿಗುವಂತೆ ಎಲ್ಲ ಸೌಲಭ್ಯ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಅಪರ ಜಿಲ್ಲಾಧಿಕಾರಿಗಳು ಮನವಿ ಸ್ವೀಕರಿಸಿ ಸಂಬಂಧೀಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಗ್ರಾಮ ಘಟಕದ ಗೌರವ ಸಲಹಗಾರರಾದ ಗುರಪ್ಪ ಕಗ್ಗೊಡ, ಉಪಾದ್ಯಕ್ಷ ಮಹದೇವಪ್ಪ ಹೂಗಾರ ಮಾತನಾಡಿದರು. ಅದ್ಯಕ್ಷರಾದ ಶ್ರೀಶೈಲ ಮಲ್ಲಯ್ಯಗೋಳ ಜಂಟಿ ಕಾರ್ಯದಶರ್ಿ ಯಲ್ಲಾಲಿಂಗ ಬೋರಗಿ, ಮಲ್ಲು ಹಡಪದ. ಸದಸ್ಯರಾದ ಸಂಗಮೇಶ ಹಡಪದ, ಎಮೆ.ಎಸ್.ಕಟಾರೆ, ರೇವಣಸಿದ್ದ ಉಪ್ಪಲದಿನ್ನಿ,ಲಕ್ಕಪ್ಪ ಗೂಗದಡ್ಡಿ, ಅಮೋಘಿಸಿದ್ದ ಬಿರಾದಾರ, ವಿಕಾಸ ಮಾಶ್ಯಾಳ, ಬೀರಪ್ಪ ಕಗ್ಗೋಡ, ಜಿಲ್ಲಾ ಸಂಘಟನಾಕಾರ ಸುನಿಲ ಸಿದ್ರಾಮಶೆಟ್ಟಿ ತಿಪರಾಯ ಹತ್ತರಕಿ ಮತ್ತು ಮಹದೇವ ಲಿಗಾಡೆ ಹಾಗೂ ಇತರರು ಭಾಗವಹಿಸಿದ್ದರು