ವಿಜಯಪುರ 29: ಚಡಚಣ ತಾಲೂಕಿನ ಗೋಡಿಹಾಳ ಗ್ರಾಮದ ಬರಡೋಲ ರಸ್ತೆಯ ಪಕ್ಕದಲ್ಲಿ 2-3ತಿಂಗಳ ಅನಾಮಧೇಯ ಹೆಣ್ಣು ಶಿಶುವೊಂದು ಪತ್ತೆಯಾಗಿದ್ದು, ಈ ಶಿಶುವಿನ ಪಾಲಕರ ಪತ್ತೆಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ಪತ್ತೆಯಾದ ಮಗುವು ಅಂದಾಜು 4 ಕೆ.ಜಿ. ಗೋದಿಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಈ ಅನಾಮಧೇಯ ಹೆಣ್ಣು ಶಿಶುವಿನ ಪಾಲಕರಿದ್ದಲ್ಲಿ ಈ ಪ್ರಕಟಣೆಯ 80 ದಿನಗಳೊಳಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬಿ4/3 ವಿವೇಕ ನಗರ ಪಶ್ಚಿಮ, ವಿಜಯಪುರ ದೂ: 08352-276354 ಮೊ: 9902533883 ಇವರನ್ನು ಸಂಪಕರ್ಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.