ಲೋಕದರ್ಶನ ವರದಿ
ವಿಜಯಪುರ 10: ಬುಡಕಟ್ಟು ಹಬ್ಬದ ಮೂಲ ಉದ್ದೇಶ ರಾಜ್ಯದಲ್ಲಿ ನೆಲೆಸಿರುವ 50 ಬುಡಕಟ್ಟು ಸಮುದಾಯಗಳ ಸಮ್ಮಿಲನದ ಜೊತೆಗೆ ಬುಡಕಟ್ಟು ಸಂಸ್ಕೃತಿಗಳ ಅನಾವರಣ ಮತ್ತು ಸಹೋದರತೆಗೆ ಪ್ರೋತ್ಸಾಹಿಸುವ ಉತ್ಸವ ಇದಾಗಿದೆ ಎಂದು ಮೈಸೂರಿನ ಕನರ್ಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನಿರ್ದೇಶಕ ಪ್ರೊ: ಪಿ.ಟಿ.ಬಸವನಗೌಡ ಅವರು ಹೇಳಿದರು.
ಶುಕ್ರವಾರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಇವರ ಪ್ರಾಯೋಜಕತ್ವದಲ್ಲಿ ಜಿಲ್ಲಾಡಳಿತ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕನರ್ಾಟಕ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಎರಡು ದಿನಗಳ ರಾಜ್ಯಮಟ್ಟದ ಬುಡಕಟ್ಟು ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕರ್ನಾಟಕದಾದ್ಯಮತ ಪರಿಶಿಷ್ಟ ಜಾತಿ, ಹಿಂದುಳಿದ ವರ್ಗಗಳಲ್ಲಿನ ಅಲೇಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಬುಡಕಟ್ಟುಗಳ ತಮ್ಮ ಬದುಕಿಗಾಗಿ ಮೂಲ ನೆಲೆಗಳನ್ನು ಕಳೆದುಕೊಂಡು ಅಲೆಮಾರಿಗಳಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಗಳಿಗೆ ವಲಸೆ ಹೋಗಿ ಅಲ್ಲಲ್ಲಿ ನೆಲೆ ನಿಲ್ಲಲು ಹಾತೊರೆಯುತ್ತಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇ ಶಕ ಮಹೇಶ ಪೋತದಾರ ಅವರು ಮಾತನಾಡಿದರು. ಕಾರಜೋಳದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವಿದ್ಯಾಥರ್ಿಗಳು ಪ್ರಾರ್ಥನೆ ಗೀತೆ ಹಾಡಿದರು. ಆದಿವಾಸಿ ಗೀತೆಯನ್ನು ಬಸವರಾಜ ಸೋಲಿಗ ಸಂಗಡಿಗರು ಹಾಡಿದರು. ಬಿ.ಜೆ.ಇಂಡಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಮಂಗಳಾಬಾಯಿ, ಶ್ರೀನಿವಾಸ, ಅಡಿವೆಪ್ಪ ಸಾಲಗಲ್, ಅರುಣ ಕಾಳೆ, ವಾಸುದೇವ ಕಾಳೆ, ಮುತ್ತಯ್ಯ ಎಂ.ಎಸ್., ರಾಜು ಕಾಳೆ, ಅಶೋಕ ಚಲವಾದಿ, ಮಂಗಳಾಬಾಯಿ ಚವ್ಹಾಣ, ಮುಳಸಿದ್ದ ನಾಯ್ಕೋಡಿ, ರಾಜು ಕಾಳೆ, ಮಹಾವಿರ ಸುಣಗಾರ, ಹಕ್ಕಿ-ಪಕ್ಕಿ ಸಮುದಾಯದ ರಮೇಶ, ಮಹಾಂತೇಶ ಕವಲಗಿ, ನಿಂಗಪ್ಪ ಪೂಜಾರಿ, ಶಿವಾಜಿ ಚವ್ಹಾಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ನಗರದ ಸಿದ್ದೇಶ್ವರ ದೇವಸ್ಥಾನದಿಂದ ರಂಗಮಂದಿರದವರೆಗೆ ವಿವಿಧ ಕಲಾ ತಂಡಗಳು, ಸಾಂಸ್ಕೃತಿಕ ನೃತ್ಯಗಳೊಂದಿಗೆ ಮೆರವಣಿಗೆಗೆ ನಡೆಸಲಾಯಿತು.