ವಿಜಯಪುರ; ಜೂನ್ 12ರಂದು ವಿಶ್ವಬಾಲಕಾರ್ಮಿಕರ ಪದ್ಧತಿ ವಿರೋಧಿ ದಿನಾಚರಣೆ

ಲೋಕದರ್ಶನ ವರದಿ

ವಿಜಯಪುರ 07: ಜಿಲ್ಲೆಯಲ್ಲಿ ಇದೇ ಜೂನ್.12 ರಂದು ವಿಶ್ವ ಬಾಲಕಾರ್ಮಿಕರ  ಪದ್ಧತಿ ವಿರೋಧಿನ ಆಚರಿಸಲಾಗುತ್ತಿದ್ದು, ಅತ್ಯಂತ ವ್ಯವಸ್ಥಿತವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಸೂಚನೆ ನೀಡಿದರು. 

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿಂದು ನಡೆದ "ವಿಶ್ವ ಬಾಲಕಾಮರ್ಿಕ ಪದ್ದತಿ ವಿರೋಧಿ ದಿನ" ಕಾರ್ಯಕ್ರಮ ಆಯೋಜನೆ, ಕುರಿತ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಜೂನ್ 12ರಂದು ವಿಶ್ವ ಬಾಲಕಾಮರ್ಿಕ ಪದ್ಧತಿ ವಿರೋಧಿ ದಿನ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದ ಅಂಗವಾಗಿ ವಿವಿಧ ಬೀದಿ ನಾಟಕ, ಜಾಥಾ, ಸೇರಿದಂತೆ ಬಾಲಕಾಮರ್ಿಕ ಕುರಿತು ಅಗತ್ಯ ಜಾಗೃತಿ ಮೂಡಿಸಬೇಕು. ಕಾರ್ಯಕ್ರಮದಲ್ಲಿ ನುರಿತ ಉಪನ್ಯಾಸಕರನ್ನು ಆಹ್ವಾನಿಸಿ ಬಾಲಕಾಮರ್ಿಕ ಪದ್ಧತಿ ವಿರೋಧ ಕುರಿತ ಉಪನ್ಯಾಸ ಆಯೋಜಿಸುವಂತೆ ಸೂಚನೆ ನೀಡಿದರು.

ಬಾಲಕಾಮರ್ಿಕ ಕಾಯ್ದೆ 1986 ರನ್ವಯ ಯಾವುದೇ ಉದ್ದಿಮೆಗಳಲ್ಲಿ 14 ವರ್ಷದೊಳಗಿನ ಹಾಗೂ ತಿದ್ದುಪಡೆ ಕಾಯ್ದೆ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ 2016 ಕಾಯ್ದೆಯನ್ವಯ ಸೂಚಿಸಿದ ಅಪಾಯಕಾರಿ ಉದ್ದಿಮೆಯಲ್ಲಿ 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು,  50 ಸಾವಿರ ರೂ. ದಂಡ ಅಥವಾ 2 ವರ್ಷದವರೆಗೆ ಜೈಲು ಶಿಕ್ಷೆಗೆ ಅವಕಾಶವಿದೆ ಎಂದು ಹೇಳಿದರು. 

ಜಿಲ್ಲೆಯಲ್ಲಿ ಬಾಲಕಾಮರ್ಿಕ ಪದ್ಧತಿ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಬಾಲಕಾಮರ್ಿಕ ಪದ್ಧತಿಯನ್ನು ತಡೆಗಟ್ಟಲು ಅಧಿಕಾರಿಗಳು ಸಾರ್ವಜನಿಕರ ಸಹಕಾರದೊಂದಿಗೆ ಕಾರ್ಯನಿರ್ವಹಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. 

ಸಭೆಯಲ್ಲಿ  2019-20ನೇ ಸಾಲಿನ ಎನ್ಸಿಎಲ್ಪಿ & ಎಸ್ಸಿಎಲ್ಪಿ ಯೋಜನೆ ಅಂದಾಜು ಆಯವ್ಯಯ, ಎಂಎಸ್ಓಪಿ ಕಾರ್ಯಕ್ರಮ ಆಯೋಜನೆ, ಸಮೀಕ್ಷೆಯಲ್ಲಿ ಪತ್ತೆಯಾದ ಬಾಲಕಾಮರ್ಿಕರನ್ನು ಬಿಡುಗಡೆಗೊಳಿಸುವುದು ಹಾಗೂ ಬಾಲಕಾಮರ್ಿಕ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸುವ ಕುರಿತು ಚಚರ್ಿಸಲಾಯಿತು. 

ಸಭೆಯಲ್ಲಿ ಕಾಮರ್ಿಕ ಅಧಿಕಾರಿ ಅಶೋಕ ಬಾಳಿಕಟ್ಟಿ, ಜಿಲ್ಲಾ ಸರ್ವಶಿಕ್ಷಣ ಅಭಿಯಾನ ಅಧಿಕಾರಿ ಆರೀಫ ಬಿರಾದಾರ, ಬಾಲಕಾಮರ್ಿಕ ಯೋಜನಾ ನಿದರ್ೇಶಕ ಶ್ರೀನಿವಾಸ ವಾಲೀಕಾರ, ಡಿಸಿಪಿಓ ನಿರ್ಮಲಾ ಸುರಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.