ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನಗಳನ್ನು ಬಯಸದೆ ಸ್ಥಳೀಯ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಕೊಂಡು ನಗರದ ಅಭಿವೃದ್ಧಿಗೆ ಸಹಕರಿಸುವೆ- ಜಿಲ್ಲಾಧಿಕಾರಿಗಳು

By consolidating local resources without seeking grants from the central and state governments, the

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನಗಳನ್ನು ಬಯಸದೆ ಸ್ಥಳೀಯ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಕೊಂಡು ನಗರದ ಅಭಿವೃದ್ಧಿಗೆ ಸಹಕರಿಸುವೆ- ಜಿಲ್ಲಾಧಿಕಾರಿಗಳು   

ರಾಣಿಬೆನ್ನೂರ 01:  ನಗರಸಭೆ ಬಜೆಟ್  ಪೂರ್ವಭಾವಿ ಎರಡನೇ ಹಂತದ ಸಭೆಯಲ್ಲಿ ಪ್ರಜ್ಞಾವಂತ ನಾಗರಿಕರು ಉತ್ತಮ ಸಲಹೆ ನೀಡಿದ್ದಾರೆ. ವೈಯಕ್ತಿಕ ಕೆಲಸಗಳಿಗಿಂತ ಸಾರ್ವಜನಿಕ ಕೆಲಸಗಳಿಗೆ  ಅನೇಕರು ಆದ್ಯತೆ ನೀಡಲು ಸೂಚನೆ ನೀಡಿದ್ದಾರೆ. ಜ್ವಲಂತ ಸಮಸ್ಯೆಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಿದ್ದು, ಮುಂಬರುವ ದಿನಮಾನಗಳಲ್ಲಿ ಉತ್ತಮ ಬಜೆಟ್ ಮಂಡನೆಗೆ ಅಗತ್ಯವಾದ ಕ್ರಮ ಕೈಗೊಳ್ಳುವೆ.  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನಗಳನ್ನು ಬಯಸದೆ ಸ್ಥಳೀಯ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಕೊಂಡು ನಗರದ ಅಭಿವೃದ್ಧಿಗೆ ಸಹಕರಿಸುವುದಾಗಿ ಜಿಲ್ಲಾಧಿಕಾರಿಗಳು ಹಾಗೂ ನಗರಸಭೆ ಆಡಳಿತಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಹೇಳಿದರು.  2025-26 ನೇ ಸಾಲಿನ  ನಗರಸಭೆ ಆಯವ್ಯಯ ಸಿದ್ದಪಡಿಸುವ ಸಲುವಾಗಿ ಸ್ಥಳೀಯ ನಗರಸಭೆಯ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ  ಮಂಗಳವಾರದಂದು ನಗರದ ಅಭಿವೃದ್ಧಿಯ ಹಿತದೃಷ್ಠಿಯಿಂದ ಏರಿ​‍್ಡಸಿದ್ದಸಾರ್ವಜನಿಕರ, ಸಂಘ-ಸಂಸ್ಥೆಗಳ, ಸಾರ್ವಜನಿಕರ  ಎರಡನೇ ಹಂತದ ಬಜೆಟ್ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಇಂದಿನ ಬಜೆಟ್ ಸಭೆಯಲ್ಲಿ ನಗರಸಭಾ ಸದಸ್ಯರುಗಳು ಸೇರಿದಂತೆ ನಾಗರಿಕರು ಉಪಯುಕ್ತವಾದ ಸಲಹೆಗಳನ್ನು ನೀಡಿದ್ದಾರೆ. ಅವೆಲ್ಲವುಗಳನ್ನು ಪರೀಶೀಲಿಸಿ ಮುಂಬರುವ ಬಜೆಟ್ ನಲ್ಲಿ ಮಂಡಿಸಲು ಅಗತ್ಯವಾದ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.    ಬೇರೆ ನಗರಸಭೆಗೆ ಹೋಲಿಸಿದರೆ, ರಾಣೆಬೆನ್ನೂರು ನಗರಸಭೆ ಕಾರ್ಯ ಅತ್ಯುತ್ತಮವಾಗಿದೆ. ಪೌರಾಯುಕ್ತರು ಅಧಿಕಾರ ವಹಿಸಿಕೊಂಡ ನಾಲ್ಕು ತಿಂಗಳೊಳಗೆ ಉತ್ತಮ ಕಾರ್ಯ ಮಾಡಿದ್ದಾರೆ. ನಗರದ ಸೌಂದರ್ಯರಿ ಕರಣ, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ . ಆಡಳಿತ ವ್ಯವಸ್ಥೆಯಲ್ಲಿ ಚುರುಕು  ಮುಟ್ಟಿಸಿದ್ದಾರೆ ಎಂದರು.   ಶಾಸಕ  ಪ್ರಕಾಶ್ ಕೋಳಿವಾಡ ಮಾತನಾಡಿ ನಗರದಲ್ಲಿ  ದಿನನಿತ್ಯ ಉತ್ಪತ್ತಿಯಾಗುವ ಘನ ತ್ಯಾಜ್ಯ ವಸ್ತುಗಳ ವಿಲೇವಾರಿಯೇ ಸಮಸ್ಯೆಯಾಗಿದ್ದು, ಜೊತೆಗೆ ಅಂತರ್ಜಲದಲ್ಲಿಯೂ ಸಹ ವಿಷಾನೀಲ ಮಿಶ್ರಿತಗೊಳ್ಳುವ ಸಂಭವವಿದ್ದು, ಕ್ಯಾನ್ಸರ್ ಸೇರಿದಂತೆ ಇತರ ರೋಗಗಳು ಬರುವ ಸಂಭವವಿದೆ . ಅದಕ್ಕಾಗಿ ರಾಜ್ಯದಲ್ಲಿಯೇ ಇದಕ್ಕಾಗಿ ನವೀನ ರೀತಿಯ ಪ್ರಯೋಗ ಕೈಗೊಳ್ಳಲು, ಈ ಸಂಬಂಧ ವಿಧಾನಸಭಾ ಅಧಿವೇಶನದಲ್ಲೂ ಚರ್ಚಿಸಿದ್ದು, ಇತ್ತೀಚಿಗಷ್ಟೇ ರಾಣೆಬೆನ್ನೂರಿಗೆ ರಾಜ್ಯ ಮಟ್ಟದ ಪರೀಶೀಲನೆ ತಂಡ ಆಗಮಿಸಿ, ಸಭೆ ನಡೆಸಿ  ಕ್ರಮ ಕೈಗೊಳ್ಳಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದರು.   ದೊಡ್ಡ ಕೆರೆಯನ್ನು ಪ್ರವಾಸೋದ್ಯಮ ರೀತಿಯಲ್ಲಿ ಪರಿವರ್ತಿಸಲು 9 ಕೋಟಿ ರೂ ಮಂಜೂರಾಗಿದ್ದು , ಶೀಘ್ರವೇ ಕಾರ್ಯ ಆರಂಭಗೊಳ್ಳಲಿದೆ. ಜೊತೆಗೆ ದೊಡ್ಡಕೆರೆಯ ನೀರನ್ನು ಮುಂದಿನ ದಿನಮಾನಗಳಲ್ಲಿ ಕುಡಿಯುವ ನೀರನ್ನಾಗಿ  ಉಪಯೋಗಿಸಲು  ಮತ್ತು15 ಕೋಟಿ ವೆಚ್ಚದಲ್ಲಿ ಈಗಿರುವ ಚರಂಡಿ, ಗಠಾರದ, ರಾಜಕಾಲುವೆ ನೀರನ್ನು ಪ್ರತ್ಯೇಕವಾಗಿ ಸಾಗಿಸಲು ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಿರುವೆ ಎಂದರು.   ಮುಂಬರುವ ಜೂನ್ 5ರಂದು ತಾಲೂಕಿನಲ್ಲಿ ಪರಿಸರ ದಿನಾಚರಣೆಯಂದು ಪ್ರತಿ ಮನೆಗೆ ಒಂದರಂತೆ ಸಸಿ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ನಗರದಲ್ಲಿ ಶವ ವಾಹನ ಖರೀದಿಗೆ ಹಾಗೂ ಉದ್ಯಾನವನಗಳ  ಜೀರ್ಣೋದ್ಧಾರಕ್ಕೆಅಗತ್ಯ ಕ್ರಮ ಕೈಗೊಳ್ಳಲು ಪ್ರಯತ್ನಿಸುವೆ. ಭಾರತ ಪಾಕ್ ಯುದ್ಧದ ಸಮಯದಲ್ಲಿ ಇದ್ದ ವಾಹನವನ್ನು ಪ್ರದರ್ಶನಕ್ಕಾಗಿ ನಗರದ ಪ್ರಮುಖ ವೃತ್ತದಲ್ಲಿ ಹೆಮ್ಮೆಯ ಗುರುತಿಗಾಗಿ ಇಡಲು  ಈಗಾಗಲೇ ಪ್ರಯತ್ನ ಮಾಡುತ್ತಿರುವೆ. ಈಗಿರುವ ನಗರಸಭಾ ಶಾಲೆಯನ್ನು ಉಳಿಸಲು, ನಗರಸಭೆಯಿಂದ  ಇಲ್ಲವೇ ಸರಕಾರಕ್ಕೆ ಒಪ್ಪಿಸಲು ತುರ್ತು ಕ್ರಮ ಕೈಗೊಳ್ಳುವೆ ಎಂದರು .  ನಗರಸಭಾ ಪೌರಾಯುಕ್ತ ಎಫ್‌. ಎಫ್ ಇಂಗಳಗಿ ಅವರು ಮಾತನಾಡಿ ಇಂದಿನ- ಮತ್ತು ಹಿಂದಿನ ಬಜೆಟ್ ನಲ್ಲಿ ಮಂಡಿಸಲಾದ ಸಾರ್ವಜನಿಕರ ಎಲ್ಲಾ ಸಲಹೆ ಸೂಚನೆಗಳನ್ನು ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಹಾಗೂ ಸ್ಥಳೀಯ ಶಾಸಕರ ಸಮ್ಮುಖದಲ್ಲಿ ಚರ್ಚಿಸಿ ಹಂತ ಹಂತವಾಗಿ ಅನುಷ್ಠಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.ನಗರದಲ್ಲಿ ಬೀದಿ ದೀಪಗಳನ್ನು,  ರಸ್ತೆಗಳನ್ನು, ಚರಂಡಿಗಳನ್ನು,  ನಗರದ ವಿವಿಧೆಡೆ ವೃತ್ತಗಳನ್ನು ನಿರ್ಮಿಸಿ ಅಭಿವೃದ್ಧಿಪಡಿಸಬೇಕು. ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಛಗೊಳಿಸಬೇಕು, ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಶೌಚಾಲಯಗಳನ್ನು ನಿರ್ಮಿಸಬೇಕು. ಪ್ರತಿಯೊಂದು ವೃತ್ತಕ್ಕೂ ದೇಶಕ್ಕೆ ಕೊಡುಗೆ ನೀಡಿದ ಮಹಾನಪುರುಷರ ಹೆಸರುಗಳನ್ನು ನಾಮಕರಣ ಮಾಡಬೇಕು. ಮುಕ್ತಿಧಾಮಕ್ಕೆ ಬಡವರ ಅನುಕೂಲಕ್ಕಾಗಿ ಮುಕ್ತಿವಾಹನ ವ್ಯವಸ್ಥೆ ನಗರಸಭೆಯಿಂದ ಕಲ್ಪಿಸಿ ಕೊಡಬೇಕೆಂಬ ಸಲಹೆಗಳು ಇಂದಿನ ಸಭೆಯಲ್ಲಿಯೂ ಸಹ ಮಂಡನೆಯಾಗಿವೆ ಎಂದರು. ನಗರದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು. ಟ್ರಾಫಿಕ್ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಜಾಹೀರಾತು ಫಲಕ ಮಾಡಿ ಏಜನ್ಸಿಯವರಿಗೆ ನೀಡಬೇಕು. ಒಣ ಕಸ, ಹಸಿ ಕಸಗಳನ್ನು ವಿಂಗಡಣೆ ಮಾಡಬೇಕು. ಏಕಮುಖ ಸಂಚಾರ ವ್ಯವಸ್ಥೆ, ಎಂ.ಜಿ. ರಸ್ತೆಯನ್ನು ಡಬಲ್ ರಸ್ತೆಯನ್ನಾಗಿ ಪರಿವರ್ತಿಸಿ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸಬೇಕು, ಮುಕ್ತಿಧಾಮಗಳ ರಸ್ತೆಗಳ ದುರಸ್ತಿ ಕೈಗೊಳ್ಳಬೇಕು. ನಗರಸಭೆ ಶಾಲೆಗೆ ಶಿಕ್ಷಕರ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಜೀರ್ಣೋದ್ಧಾರಕ್ಕೆ ಪ್ರಯತ್ನಿಸಬೇಕು. ದೊಡ್ಡ ಕೆರೆ ಸೌಂದರ್ಯ ಹೆಚ್ಚಿಸುವ ಜೊತೆಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂಬಿತ್ಯಾದಿ ಸಲಹೆಗಳನ್ನು ಸಾರ್ವಜನಿಕರು ಮತ್ತು ನಗರಸಭೆಯ ಸದಸ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಲಹೆ ನೀಡಿದರು.       ನಗರಸಭಾ ಸದಸ್ಯರುಗಳಾದ ಮಲ್ಲಿಕಾರ್ಜುನ್ ಅಂಗಡಿ,  ಶಶಿಧರ ಬಸೇನಾಯ್ಕರ, ಮಂಜುಳಾ ಹತ್ತಿ, ಗಂಗಮ್ಮ ಹಾವನೂರ್, ರಮೇಶ್ ಕರಡೆಣ್ಣನವರ್, ಪ್ರಭಾವತಿ ತಿಳವಳ್ಳಿ, ಜಯಶ್ರೀ ಪಿಸೆ, ವೈದ್ಯರಾದ ಡಾ.ಎಸ್‌. ಎಲ್‌. ಪವಾರ, ಡಾ. ನಾರಾಯಣ್ ಪವಾರ್, ಡಾ. ಗೀರೀಶ್ ಕೆಂಚಪ್ಪನವರ್ ಡಾ. ರತ್ನಪ್ರಭಾ, ನಿತ್ಯಾನಂದ ಕುಂದಾಪುರ , ಎಸ್‌. ಜಿ. ಮಹಾನುಭಾವಿಮಠ, ಗುರುಪ್ರಕಾಶ್ ಜಂಬಗಿ, ಹನುಮಂತಪ್ಪ ಕಬ್ಬಾರ,  ಸಂಜೀವರೆಡ್ಡಿ ಮಧುಗುಣಕಿ, ಮೈಲಪ್ಪ ದಾಸಪ್ಪನವರ್ ಸೇರಿದಂತೆ ಇತರ ನಾಮನಿರ್ದೇಶಕ ಸದಸ್ಯರುಗಳು, ಮತ್ತಿತರರು ಸಲಹೆ, ಸೂಚನೆ ನೀಡಿದರು. ಇದಕ್ಕೂ ಮುನ್ನ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ನಗರಸಭಾ ಮಾಜಿ ಸದಸ್ಯ ಚನ್ನಬಸಪ್ಪ ತೋಟಪ್ಪನವರ್ ಅವರುಗಳ ನಿಧನಕ್ಕೆ ಸಭೆಯು ಮೌನಚರಣೆ ಸಲ್ಲಿಸಿತು.  ನಗರಸಭೆ ಸದಸ್ಯರುಗಳು,  ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಸಾರ್ವಜನಿಕರು, ನಗರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.ಊ1-ಖಓಖ05-ಓಇಘಖ. ಂಓಆ ಕಊಓಖಿಓ.