ವಿವಿಧ ಸ್ಪರ್ಧೆ: ವಸಂತರಾವ ಪೋತದಾರ ಪಾಲಿಟೆಕ್ನಿಕ ವಿದ್ಯಾರ್ಥಿಗಳ ಸಾಧನೆ
ಬೆಳಗಾವಿ 04: ಬೆಳಗಾವಿ ನಿಡಶೋಶಿಯ ಹಿರಾಸುಗರ ಇಂಜಿನಿಯರಿಂಗ್ ಕಾಲೇಜಿನಲ್ಲಿ ದಿ.29ರಂದು ಏರಿ್ಡಸಿದ ಪ್ರೊಜೆಕ್ಟ ಸ್ಪರ್ಧೆ, ಇಂಟರ್ನಶಿರ್ ಪ್ರೆಸೆಂಟೆಶನ ಹಾಗೂ ಆಯಿಡಿಯಾ ಸ್ಪರ್ಧೆಯಲ್ಲಿ ಕೆ.ಎಲ್.ಎಸ್. ವಸಂತರಾವ ಪೋತದಾರ ಪಾಲಿಟೆಕ್ನಿಕ ಬೆಳಗಾವಿಯ ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.
ವಿಜೇತರ ವಿವರಗಳು:
ಪ್ರೋಜೆಕ್ಟ ಸ್ಪರ್ಧೆಯಲ್ಲಿ ಕಂಪ್ಯೂಟರ ಸಾಯಿನ್ಸ ಹಾಗೂ ಇಂಜಿನಿಯರಿಂಗ 6ನೇ ಸೆಮಿಸ್ಟರ ವಿದ್ಯಾರ್ಥಿಗಳಾದ ನಯಾಬ ಅತ್ತಾರ ಹಾಗೂ ಅವಿನಾಶ ಭಾಟಿ ಹಿಪ್ರಥಮ ಸ್ಥಾನ ಹಾಗೂ ದಿಗಂಬರ ಪಾಲೇಕರ, ಶ್ರೀ ಪಾಟೀಲ ಹಾಗೂ ಸುನೀಲ ಶಿಂಡೋಲಕರ ಇವರು ದ್ವಿತೀಯ ಸ್ಥಾನ ಗಳಿಸಿರುತ್ತಾರೆ.
ಇಂಟರ್ನಶಿಪ್ ಪ್ರೆಸೆಂಟೆಶನ ಸ್ಪರ್ಧೆಯಲ್ಲಿ ಮೆಕ್ಯಾನಿಕಲ ಇಂಜಿನಿಯರಿಂಗ ವಿಭಾಗದ 6ನೇ ಸೆಮಿಸ್ಟರ ವಿದ್ಯಾರ್ಥಿಗಳಾದ ಅಥರ್ವ ಕಸಬೇಕರ, ಆದಿತ್ಯಾ ಕಡ್ಡು ಹಾಗೂ ನಲಿನಿ ಚಂದಗಡಕರ ಇವರು ತೃತೀಯ ಸ್ಥಾನ ಪಡೆದಿರುತ್ತಾರೆ.
ಆಯಿಡಿಯಾ ಪ್ರೆಸೆಂಟೆಶನ ಸ್ಪರ್ಧೆಯಲ್ಲಿ ಕಂಪ್ಯೂಟರ ಸಾಯಿನ್ಸ ಹಾಗೂ ಇಂಜಿನಿಯರಿಂಗ 6ನೇ ಸೆಮಿಸ್ಟರ ವಿದ್ಯಾರ್ಥಿಗಳಾದ ನಯಾಬ ಅತ್ತಾರ ಹಾಗೂ ಅವಿನಾಶ ಭಾಟಿ ಇವರು ದ್ವಿತೀಯ ಸ್ಥಾನ ಪಡೆದು ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.
ಎಲ್ಲ ವಿಜೇತ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ಅಧ್ಯಕ್ಷ ಯು.ಎನ್. ಕಾಲಕುಂದ್ರಿಕರ ಹಾಗೂ ಸಂಸ್ಥೆಯ ಪ್ರಾಚಾರ್ಯ ಎಸ್.ಎಸ್. ಮಾಳಾಜ ರವರು ಹಾಗೂ ಕಂಪ್ಯೂಟರ ಸಾಯಿನ್ಸ ್ಘ ಇಂಜಿನಿಯರಿಂಗ ವಿಭಾಗದ ಮುಖ್ಯಸ್ಥೆ ಅನುರಾಧಾ ದೇಸಾಯಿ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ ವಿಭಾಗದ ಮುಖ್ಯಸ್ಥ ಪ್ರಥಮೇಶ ಗುರಜರ ಅವರೊಂದಿಗೆ ಸಂಸ್ಥೆಯ ಎಲ್ಲ ಸಿಬ್ಬಂದಿವರ್ಗದವರು ಶುಭ ಹಾರೈಸಿದರು.